ರಿಂಗ್ ರೋಡ್ ಗೆ ಅನುಮತಿ :                  ಆರ್ ಡಿ ಎ ಅಧ್ಯಕ್ಷ       ರಾಜಶೇಖರ ರಾಮಸ್ವಾಮಿಗೆ  ಡಾ. ಬಾಬುರಾವ್ ಸನ್ಮಾನ


ಜಯ ಧ್ವಜ ನ್ಯೂಸ್ , ರಾಯಚೂರು, ಮೇ.8- ರಿಂಗ್ ರೋಡ್ ಗೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ ಅವರಿಗೆ ಸಮಾಜ ಸೇವಕ ಡಾ.ಬಾಬುರಾವ್ ಅವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಗೌರವ ‌ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಶೇಖರ ರಾಮಸ್ವಾಮಿ ಯವರು ನಗರಾಭಿವೃದ್ಧಿ ಪ್ರಾಧಿಕಾರದ ‌ಸಾಮಾನ್ಯ ಸಭೆಯಲ್ಲಿ ನಗರಕ್ಕೆ ಅವಶ್ಯವಾಗಿರುವ ರಿಂಗ್ ರೋಡ್ ಡಿಪಿಆರ್  ಕೈಗೊಳ್ಳಲು ತೀರ್ಮಾನಿಸಲಾಗಿದೆ. ರಿಂಗ್ ರೋಡ್ ಅಗತ್ಯತೆ ಕುರಿತು ಡಾ.ಬಾಬುರಾವ್ ಅವರು ಮನವಿ ಸಲ್ಲಿಸಿದ್ದರು.


ಈ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿದಾಗ, ವಿಧಾನ ಪರಿಷತ್ ಸದಸ್ಯ ಎ..ವಸಂತಕುಮಾರ, ಆಯುಕ್ತರು ಹಾಗೂ ಸದಸ್ಯರ ಸಮಕ್ಷಮದಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಒಪ್ಪಿಗೆ ಪಡೆದು ೪೮ ಲಕ್ಷ ರೂ.ವೆಚ್ಚದಲ್ಲಿ ಡಿಪಿಆರ್ ಕೈಗೊಳ್ಳಲು  ತೀರ್ಮಾನಿಸಲಾಗಿದ್ದು ೧೫ ದಿನಗಳೊಳಗೆ ಇದಕ್ಕೊಂದು ಪರಿಪೂರ್ಣ ರೂಪುರೇಷೆ ತಯಾರಿಸಲಾಗುವುದೆಂದರು.

ನಂತರ ಡಾ.ಬಾಬುರಾವ್ ಮಾತನಾಡಿ, ೮೦೦ಕ್ಕೂ ಹೆಚ್ಚು ಬಲಿ ಪಡೆದಿರುವ ರಸ್ತೆಯ ಒತ್ತಡ ಕಡಿಮೆ ಮಾಡಲು ರಿಂಗ್ ರೋಡ್ ಅವಶ್ಯಕತೆ ಇರುವುದನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಜನರ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಈಗ ಅದಕ್ಕೆ ಸ್ಪಂದನೆ ಸಿಕ್ಕಿರುವುದರಿಂದ ಅಧ್ಯಕ್ಷರಿಗೆ ಗೌರವಿಸಿ ಸನ್ಮಾನಿಸಲಾಗಿದೆ ಎಂದರು.

ಸೋಮಶೆಟ್ಟಿ ಶ್ರೀನಿವಾಸ, ಎಂ.ಎ.ಖಾಜಾ, ಕಲೀಂ ಅಹ್ಮದ್ ಆಶಾಪೂರ,  ಎಂ.ಅಜ್ಮತ್, ಅಬ್ದುಲ್ ಕರೀಂ, ಎಂ.ಡಿ.ನವಾಜ್, ಜೈಪಾಲ್, ಪ್ರದೀಪ್ ಸೇರಿದಂತೆ ಇತರರು ಇದ್ದರು.

Comments

Popular posts from this blog