ಪಾರ್ವತಮ್ಮ ಪಾಪಾರೆಡ್ಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮ: ಪಾರ್ವತಮ್ಮನವರು ಪಾಪಾರೆಡ್ಡಿಯವರನ್ನು ಸಮಾಜ ಸೇವೆಗೆ ಪ್ರೇರೇಪಿಸಿದವರು- ಎನ್.ಶಂಕ್ರಪ್ಪ. ಜಯ ಧ್ವಜ ನ್ಯೂಸ್, ರಾಯಚೂರು, ಜೂ.19- ಮಾಜಿ ಶಾಸಕ ಎ.ಪಾಪಾರೆಡ್ಡಿಯವರನ್ನು ಸಮಾಜ ಸೇವೆಗೆ ಪ್ರೇರಣೆ ನೀಡಿದವರು ಪಾರ್ವತಮ್ಮನವರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಅಭಿಪ್ರಾಯ ಪಟ್ಟರು. ಅವರಿಂದು ನಗರದ ಗದ್ವಾಲ್ ರಸ್ತೆಯ ಮುನ್ನೂರು ಕಾಪು ಶ್ರೀ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿದ್ದ ಪಾರ್ವತಮ್ಮ ಪಾಪಾರೆಡ್ಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಪಾಪಾರೆಡ್ಡಿಯವರನ್ನು ಅನೇಕ ದಶಕಗಳಿಂದ ಆತ್ಮೀಯ ಒಡನಾಟಯುಳ್ಳವರಾದ ನಾನು ಅವರ ರಾಜಕೀಯ ಏಳ್ಗೆ ಮತ್ತು ಸಮಾಜ ಮುಖಿ ಕಾರ್ಯಕ್ಕೆ ಸದಾ ಬೆನ್ನೆಲುಬಾಗಿ ನಿಂತವರು ಪಾರ್ವತಮ್ಮನವರು ಎಂದರು. ಪಾಪಾರೆಡ್ಡಿ ಜನಪ್ರೀಯಗೊಳ್ಳಲು ಅವರು ಪಾತ್ರವು ಇದೆ, ಕುಟುಂಬ ನಿರ್ವಹಣೆ ಮತ್ತು ಮನೆತನದ ಗೌರವ ಕಾಪಾಡುವ ನಿಟ್ಟಿನಲ್ಲಿ ಅವರ ಶ್ರಮ ಶ್ಲಾಘನೀಯ ವೆಂದರು.
ಕಾಂಗ್ರೆಸ್ ಮುಖಂಡರಾದ ಕೆ.ಶಾಂತಪ್ಪ ಮಾತನಾಡಿ ಪಾಪಾ ರೆಡ್ಡಿಯವರು 80ರ ದಶಕದಿಂದ ಪರಿಚಯ ಅವರ ಮನೆಗೆ ಹೋದ ವೇಳೆ ಪಾರ್ವತಮ್ಮನವರ ಆತಿಥ್ಯ ಅನುಕರಣೀಯ ಪಾಪಾ ರೆಡ್ಡಿಯವರು ಶಕ್ತಿ ಪಾರ್ವತಮ್ಮ ನವರಾಗಿದ್ದರು ಅವರು ಅಗಲಿಕೆ ದಿಗ್ಭ್ರಮೆ ಮೂಡಿಸಿದೆ ಎಂದರು.
ರಾಯಚೂರು ವಿಧಾನಸಭೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮೊಹಮ್ಮದ ಶಾಲಂ ಮಾತನಾಡಿ ರಾಜಕೀಯ ಹೊರತಾಗಿಯೂ ಪಾಪಾರೆಡ್ಡಿಯವರು ನನಗೆ ಉತ್ತಮ ಬಾಂಧವ್ಯಉಳ್ಳವರಾಗಿದ್ದಾರೆ ಅವರ ಧರ್ಮಪತ್ನಿ ನಿಧನ ನಮಗೆಲ್ಲ ಆಘಾತ ಮೂಡಿಸಿದೆ ಎಂದರು.
ಬ್ರಾಹ್ಮಣ ಸಮಾಜದ ಮುಖಂಡರಾದ ಗಿರೀಶ್ ಕನಕವೀಡು ಮಾತನಾಡಿ ಪಾರ್ವತಮ್ಮ ಮನೆ ಬೆಳೆಗಿದ ಮಹಾ ಸಾದ್ವಿಯಾಗಿದ್ದರು ಅವರು ಸದಾ ಪರೋಪಕಾರಿ ಮನೋಭಾವುಳ್ಳ ವ್ಯಕ್ತಿಯಾಗಿದ್ದರು ಎಂದು ಅವರ ಸರಳತೆ ಕೊಂಡಾಡಿದರು.
ಪಾಪಾರೆಡ್ಡಿ ಅಳಿಯ ಅಮೇರಿಕಾದಲ್ಲಿ ನೆಲೆಸಿರುವ ಪ್ರವೀಣ್ ಮಾತನಾಡಿ ನಮ್ಮ ಅತ್ತೆಯವರು ಮಾತೃ ಸ್ವರೂಪಿಣಿಯಾಗಿದ್ದರು ನಮ್ಮನ್ನು ಮಕ್ಕಳಂತೆ ನೋಡುತ್ತಿದ್ದರು ಎಂದರು.
ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಮಾತನಾಡಿ ಪಾರ್ವತಮ್ಮ ನಿಧನ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡಿ ಸಮಾಜಕ್ಕೆ ದುಖ ತಂದಿದೆ ಎಂದರು.
ಉಟ್ಟೂರು ಕೃಷ್ಣಮೂರ್ತಿ ಮಾತನಾಡಿ ಪಾರ್ವತಮ್ಮನವರು ಅತಿಥಿ ಸತ್ಕಾರಕ್ಕೆ ಹೆಸರಾಗಿದ್ದರು ಅವರ ಅಗಲಿಕೆ ಪಾಪಾರೆಡ್ಡಿಯವರಿಗೆ ತೀರ್ವ ಘಾಸಿ ಮಾಡಿದೆ ನಮಗೆಲ್ಲ ನೋವು ತಂದಿದೆ ಎಂದರು.
ಟ್ಯಾಗೋರ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್. ಕೆ. ಅಮರೇಶ ಮಾತನಾಡಿ ಪಾರ್ವತಮ್ಮನವರು ಪಾಪಾ ರೆಡ್ಡಿಯವರ ಶ್ರೇಯಸ್ಸಿಗೆ ಶಿಸ್ತುಬದ್ಧ ಜೀವನಕ್ಕೆ ಕಾರಣಕರ್ತರಾಗಿದ್ದರು ಎಂದರು. ಪಾಪಾರೆಡ್ಡಿ ಪುತ್ರಿ, ಸೊಸೆ ಮಾತನಾಡಿ ಪಾರ್ವತಮ್ಮ ನಮಗೆಲ್ಲ ದೇವರಂತೆ ಇದ್ದರು ಅವರ ಅಗಲಿಕೆ ಬರಸಿಡಿಲಿನಂತೆ ಬಡಿದಿದೆ ಎಂದರು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ, ಸಮಾಜದ ಮುಖಂಡರು, ಹಿರಿಯರು ಯುವಕರು, ಕುಟುಂಬಸ್ಥರು ಪಾಲ್ಗೊಂಡಿದ್ದರು.








Comments
Post a Comment