ಅತ್ಯಂತ ಮೌಲಿಕ ಸಾಹಿತ್ಯವನ್ನು ರಚಿಸಿದ ದಾಸ ಸಾಹಿತ್ಯದ ಮಹನೀಯರು ಶ್ರೀ ಮೋಹನದಾಸರು- ಮುರಳಿಧರ ಕುಲಕರ್ಣಿ
ಜಯ ಧ್ವಜ ನ್ಯೂಸ್ ರಾಯಚೂರು , ಜೂ.21-ದಾಸ ಸಾಹಿತ್ಯದ ಎರಡನೇ ಘಟ್ಟದ ವಿಜಯದಾಸರ ಪರಂಪರೆಯಲ್ಲಿ ಬರುವ ಶ್ರೀ ಮೋಹನ ದಾಸರು ಹರಿದಾಸ ಶ್ರೇಷ್ಠ ರಾಗಿದ್ದಾರೆ. ದಾಸ ಸಾಹಿತ್ಯಕ್ಕೆ ಅತ್ಯಂತ ಮೌಲಿಕ ಸಾಹಿತ್ಯವನ್ನು ನೀಡಿದ ದಾಸ ಸಾಹಿತ್ಯದ ಮಹನೀಯರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಯವರು ಹೇಳಿದರು.
ಅವರು ಶನಿವಾರ ಸಂಜೆ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ನಡೆದ ಶ್ರೀ ಮೋಹನ ದಾಸರ 211ನೇ ಮಧ್ಯರಾಧನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಮೋಹನ ದಾಸರು ವಿಜಯದಾಸರಿಗೆ ಸಾಕು ಮಗ ಹಂಪಿಯ ಚಕ್ರ್ ತೀರ್ಥದ ಬಳಿ ಜೀವನದಲ್ಲಿ ನೊಂದು ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಶ್ರೀ ವಿಜಯದಾಸರು ತಾಯಿ ಮಗುವನ್ನು ಸಂರಕ್ಷಿಸಿ ಹಲವಾರು ರೋಗದಿಂದ ಬಳಲುತ್ತಿರುವ ಮಗುವನ್ನು ತಾವೇ ದತ್ತಕ್ಕೆ ತೆಗೆದುಕೊಂಡು ಮೋಹನ ದಾಸರನ್ನುಬೆಳೆಸಿ ಹರಿದಾಸ ಸಾಹಿತ್ಯದ ಶ್ರೇಷ್ಠ ದಾಸರನ್ನಾಗಿ ಮಾಡಿದ ಕೀರ್ತಿ ವಿಜಯದಾಸರಿಗೆ ಸಲ್ಲುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇ.ಮೂ.ಪಂ. ಮುಕುಂದಾಚಾರ್ಯ ಸತ್ಯನಾಥ ಕಾಲೋನಿ ಅವರು ಉಪನ್ಯಾಸವನ್ನು ನೀಡುತ್ತಾ ಮೋಹನ ದಾಸರ ಕೀರ್ತನೆಗಳೆಲ್ಲವೂ ಸೈದ್ಧಾಂತಿಕ ಆಧಾರದ ಮೇಲೆ ರೂಪುಗೊಂಡಿವೆ. ಇವರು ರಚಿಸಿದ ಸಂಕೀರ್ತನೆಗಳು ಸುಳಾದಿಗಳು ಉಗಾ ಭೋಗಗಳು, ಕೋಲಾಟ ಪದಗಳು ಪ್ರಸಿದ್ಧಿಯನ್ನು ಪಡೆದಿದೆ ವಿಶೇಷವಾಗಿ ಹರಿದಾಸ ಸಾಹಿತ್ಯಕ್ಕೆ ಶ್ರೀ ಮೋಹನದಾಸರು ಪ್ರಮಾಣಿಕೃತವಾದ ಸಾಹಿತ್ಯವನ್ನು ನೀಡಿ ಮಹಾದುಪಕಾರವನ್ನು ಮಾಡಿದ್ದಾರೆ ಎಂದು ಹೇಳಿದರು. ಶ್ರೀ ವಿಜಯದಾಸರಿಂದ ಪರಮಾನುಗ್ರಹ ಪಡೆದಂತ ಇವರು ಅವರಿಂದ ಅಪಮೃತ್ಯುನಿಂದ ಪಾರಾದ ಘಟನೆಯು ನಡೆಯಿತು ಎಂದು ವಿವರಿಸಿದರು
ಕಾರ್ಯಕ್ರಮವನ್ನು ಹಿರಿಯ ಕಲಾವಿದರಾದ ಸುರೇಶ ಕಲ್ಲೂರ್ ಅವರು ಶ್ರೀ ಮೋಹನ ದಾಸರ ಸಂಕೀರ್ತನೆಗಳನ್ನು ಹಾಡುವುದರ ಮೂಲಕ ಉದ್ಘಾಟನೆ ಮಾಡಿದರು.
ನಿವೃತ್ತ ಪ್ರಾಚಾರ್ಯರಾದ ಶ್ರೀ ವೆಂಕಟರಾವ್ ಕುಲಕರ್ಣಿ ಅವರು ಶ್ರೀ ಮೋಹನ ದಾಸರ ಸಾಧನೆಗಳನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಹರಿದಾಸ ಬೌದ್ಧಿಕ ಮಂಟಪದ ಶ್ರೀ ಸುರೇಶ್ ಕುಲಕರ್ಣಿ ಅವರು ನೀಡಿದ ಶ್ರೀ ಮೋಹನದಾಸರ ಬೃಹತ್ ಚಿತ್ರಪಟವನ್ನು ಬ್ರಾಹ್ಮಣ ಸಮಾಜದ ಮುಖಂಡರಾದ ಶ್ರೀ ಪ್ರಸನ್ನ ಕಾಲಂಪಲ್ಲಿ ಅವರು ಅನಾವರಣಗೊಳಿಸಿದರು.
ಶ್ರೀ ಮೋಹನದಾಸರ ಭಾವಚಿತ್ರಕ್ಕೆ ಬಯಲು ಆಂಜನೇಯ ದೇವಸ್ಥಾನದ ಅರ್ಚಕರಾದ ಶ್ರೀ ಶ್ರೀಧರಾಚಾರ್ಯ ಮುಂಗಲಿ ಅವರು ಮಂಗಳಾರತಿಯನ್ನು ಮಾಡಿವುದರ ಮೂಲಕ ಪೂಜಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರವೀಂದ್ರ ಕುಲಕರ್ಣಿ, ವಾಸಕಿ ಕರ್ಣಂ, ಅವರಿಂದ ದಾಸವಾಣಿ ಜರುಗಿತು. ಕಾರ್ಯಕ್ರಮದಲ್ಲಿ ರಾಘವೇಂದ್ರ ಜಾಗಿರದಾರ್ ಕೃಷ್ಣಮೂರ್ತಿ ಹುಣಸಿಗಿ, ಕೊಪ್ರೇಶ ದೇಸಾಯಿ ಕೋಟೆ, ನಾಗರತ್ನ ಕೆ ,ಪ್ರತಿಭಾ ಕುಲಕರ್ಣಿ, ಭಜನಾ ಮಂಡಳಿಯ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.


Comments
Post a Comment