ಜೂ.28 ರಂದು ಉಚಿತ ನೇತ್ರ ತಪಾಸಣಾ ಶಿಬಿರ.                                          ಜಯ ಧ್ವಜ ನ್ಯೂಸ್ , ರಾಯಚೂರು,ಜೂ.22- ವಿಶ್ವ ಮಿತ್ರ ಟ್ರಸ್ಟ್ ಹಾಗೂ ಡಾ.ಅಗರವಾಲ್ಸ್ ಕಣ್ಣಿನ ಆಸ್ಪತ್ರೆ  ರಾಯಚೂರು ಸಂಯುಕ್ತ ಆಶ್ರಯದಲ್ಲಿ  ಜೂ.28 ರಂದು ನಗರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ನಗರದ ಬೋಳಮಾನದೊಡ್ಡಿ ರಸ್ತೆಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಿಗ್ಗೆ 10.30 ರಿಂದ 1 ಗಂಟೆ ವರೆಗೆ ಶಿಬಿರ ನಡೆಯಲಿದ್ದು ಅನುಭವಿ ನೇತ್ರ ತಜ್ಞರಿಂದ ದೃಷ್ಟಿ ದೋಷ ತಪಾಸಣೆ, ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ತಪಾಸಣೆ, ವೈದ್ಯರ ಸಲಹೆ ಮೇರೆಗೆ ಉಚಿತ ಕನ್ನಡಕ ವಿತರಣೆ ನಡೆಯಲಿದ್ದು ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸುವವರು ನೋಂದಣಿಗಾಗಿ ಆಧಾರ್ ಕಾರ್ಡ್ ತರಬೇಕು, ಜನ ಸಂದಣಿ ತಪ್ಪಿಸಲು ಬೇಗ ಬರಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 7411687808, 9448695874 , 9980468012 , 9845506138 ಗೆ ಸಂಪರ್ಕಿಸುವಂತೆ ವಿಶ್ವ ಮಿತ್ರ ಟ್ರಸ್ಟ್ ಅಧ್ಯಕ್ಷರಾದ ಡಿ.ಕೆ. ಮುರಳೀಧರ್ ಕೋರಿದ್ದಾರೆ.

Comments

Popular posts from this blog