ವಿಶ್ವಾಮಿತ್ರ ಟ್ರಸ್ಟ್ ಹಾಗೂ ಡಾ.ಅಗರವಾಲ್ಸ್ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ :   ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ- ಡಿಕೆ ಮುರಳೀಧರ.                                                                                                                                                             ಜಯ ಧ್ವಜ ನ್ಯೂಸ್ , ರಾಯಚೂರು, ಜೂ.28-                                                        ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ಶಾರದಾ ವಿದ್ಯಾನಿಕೇತನ ಶಾಲೆ ಹಾಗೂ ವಿಶ್ವಾಮಿತ್ರ ಟ್ರಸ್ಟ್ ಅಧ್ಯಕ್ಷ ಡಿಕೆ ಮುರಳೀಧರ ಹೇಳಿದರು.                 

ಅವರಿಂದು ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ವಿಶ್ವಾಮಿತ್ರ ಟ್ರಸ್ಟ್ ಹಾಗೂ ಡಾ. ಅಗರ್ವಾಲ್ಸ್ ಕಣ್ಣಿನ  ಆಸ್ಪತ್ರೆ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.                                     

 ಈ ತಪಾಸಣೆ ಶಿಬಿರದಲ್ಲಿ ನೂರಾರು ಜನರಿಗೆ ತಪಾಸಣೆ ಮಾಡಲಾಗುತ್ತಿದ್ದು ಶಿಬಿರದ ಸದುಪಯೋಗ‌ಪಡೆದುಕೊಳ್ಳಬೇಕೆಂದ ಅವರು  ವಿಶ್ವಾಮಿತ್ರ ಟ್ರಸ್ಟ್  ಮೊದಲ ಕಾರ್ಯಕ್ರಮ ಇದಾಗಿದ್ದು ಮುಂದೆ ಕೂಡ ಈ ಟ್ರಸ್ಟ್ ನ ವತಿಯಿಂದ ಇನ್ನೂ ಹತ್ತು ಹಲವಾರು ಕಾರ್ಯಕ್ರಮಗಳನ್ನ ಆಯೋಜಿಸಲಾಗುವುದು ಇದಕ್ಕೆ ತಮ್ಮಗಳ ಸಹಕಾರ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ರಮೇಶ್ ಕುಲಕರ್ಣಿ, ಪ್ರಹ್ಲಾದ್ ರಾವ್ ಕೋಳಬಾಳ ರಾಯಕೆಮ್, ಡಾ. ನಾಗರಾಜ್, ಡಾ. ಆನಂದ ತೀರ್ಥ ಫಡ್ನೀಸ್, ಡಿ.ಕೆ.ರೇಖಾ, ರಾಘವೇಂದ್ರ ಚೂಡಾಮಣಿ, ಜಯ ಕುಮಾರ್ ಗಬ್ಬೂರು, ಹನುಮೇಶ ಸರಾಫ, ಅನಿಲ್ ಕುಮಾರ್ ಗಾರಲದಿನ್ನಿ, ವಿಷ್ಣು ತೀರ್ಥ ಸಿರವಾರ,

ಜಯಕುಮಾರ್ ದೇಸಾಯಿ ಕಾಡ್ಲೂರು , ವಸುದೇಂದ್ರ ಸಿರವಾರ, ಶ್ರೀನಿವಾಸ ಮಲ್ದಕಲ್, ರಾಘವೇಂದ್ರ ದೇಶಪಾಂಡೆ, ಶ್ರೀನಿವಾಸ, ರಾಘವೇಂದ್ರ ರಾವ್  ಸೇರಿದಂತೆ

ವೈದ್ಯರು ಇನ್ನಿತರರು ಉಪಸ್ಥಿತರಿದ್ದರು.  ತಾರಾನಾಥ್ ಜೇಗರ್ಕಲ್ ನಿರೂಪಿಸಿದರು.  ಪಾಂಡುರಂಗ ಕುರ್ಡಿಕರ್ ಪ್ರಾರ್ಥಿಸಿದರು.

ನೂರಾರು ಜನರು ಭಾಗವಹಿಸಿ ನೇತ್ರ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು.  

Comments

Popular posts from this blog