ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್  ರಾಯಚೂರು ಬೆಳ್ಳಿ ಮಹೋತ್ಸವ :      ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆಯ ವಿಜೇತರ ಹೆಸರು ಪ್ರಕಟ- ವಿಜಯ್ ಜಾಗಟಗಲ್


ಜಯ ಧ್ವಜ ನ್ಯೂಸ್, ರಾಯಚೂರು, ಜೂ. 29- ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್  ರಾಯಚೂರು ಬೆಳ್ಳಿ ಮಹೋತ್ಸವದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ
ಏರ್ಪಡಿಸಿದ್ದ ಪತ್ರಕರ್ತರ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆಯ ವಿಜೇತರ ಹೆಸರುಗಳನ್ನು ರಾಯಚೂರು ರಿಪೋಟರ‍್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ಪ್ರಕಟಿಸಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ

ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ 
ಚಿತ್ರದುರ್ಗದ ಪ್ರಜಾವಾಣಿಯ ಸಹಾಯಕ ವರದಿಗಾರರಾಗಿರುವ ಕೆ.ಪಿ.ಓಂಕಾರಮೂರ್ತಿ ಅವರ “ಡೆಡ್‌ಲೈನ್” ಕಥೆಗೆ ಮೊದಲ ಸ್ಥಾನ.
ದಿ ಟೈಮ್ಸ್  ಆಫ್ ಇಂಡಿಯಾ ಪತ್ರಿಕೆ ಮೈಸೂರು ವಿಶೇಷ ವರದಿಗಾರರಾದ ಶ್ರೀನಿವಾಸ ಎಂ ಅವರ “ನಿಧನ ವಾರ್ತೆ” ಕಥೆಗೆ ದ್ವಿತೀಯ ಸ್ಥಾನ.
ಉದಯವಾಣಿ ಪತ್ರಿಕೆಯ ರಾಯಚೂರು ಹಿರಿಯ ಜಿಲ್ಲಾ ವರದಿಗಾರರಾದ ಸಿದ್ದಯ್ಯಸ್ವಾಮಿ ಕುಕನೂರು ಅವರ “ಪ್ರೆಸಿಡೆಂಟ್ ಶಂಕ್ರ” ಕಥೆಗೆ ತೃತೀಯ ಸ್ಥಾನ ಲಭಿಸಿದೆ ಎಂದರು.

  ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳಲ್ಲಿ
ಪ್ರಜಾವಾಣಿಯ ರಾಯಚೂರು ಜಿಲ್ಲೆಯ ಮುದಗಲ್ ವರದಿಗಾರರಾದ ಡಾ.ಶರಣಪ್ಪ ಆನಾಹೊಸೂರು ಅವರ
“ ನಮ್ಮ ಹುಡ್ರು” ಕಥೆ. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ರಾಯಚೂರು ಜಿಲ್ಲಾ ವರದಿಗಾರರಾದ ಬಸವರಾಜ ಭೋಗಾವತಿ ಅವರ
“ಕಪ್ಪು ಬಣ್ಣದ ಬೂಟು” ಕಥೆ.
  ಉದಯವಾಣಿ ಪತ್ರಿಕೆಯ ದಕ್ಷಿಣ ಕನ್ನಡದ ಮಣಿಪಾಲ ಆವೃತ್ತಿಯ ಹಿರಿಯ ಉಪಸಂಪಾದಕರಾದ ಅನಿಲ್ ಕುಮಾರ ಕೈರಂಗಳ ಅವರ “ಹಪ್ಪಳ ಸ್ವಾಮಿ” ಕಥೆ.

ರಾಜ್ಯ ಮಟ್ಟದ ಕವನ ಸ್ಪರ್ಧೆಯ ವಿಜೇತರು
ದಿ ಟೈಮ್ಸ್  ಆಫ್ ಇಂಡಿಯಾ ಪತ್ರಿಕೆ ಮೈಸೂರು ವಿಶೇಷ ವರದಿಗಾರರಾದ  ಶ್ರೀನಿವಾಸ ಎಂ ಅವರ
“ಮುಸ್ಸಂಜೆಯ ಕಥೆಗಳು” ಪ್ರಥಮ ಸ್ಥಾನಗಳಿಸಿದ್ದು ಹಿರಿಯ ಪತ್ರಕರ್ತರು, ಅಂಕಣಕಾರರಾದ ಶಂಕರ ಪಾಗೋಜಿ ಅವರ “ಧರ್ಮ ಧಳ್ಳುರಿ” ಹಾಗೂ ಬಿಟಿವಿಯ     ರಾಯಚೂರು ಜಿಲ್ಲಾ ವರದಿಗಾರರಾದ ಚಂದಪ್ಪ ದೊರನಹಳ್ಳಿ ಅವರ “ಹೆತ್ತವ್ವನ ಸೆರಗಿನ ಚಪ್ಪರ” ಕವನಗಳು ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದಿವೆ ಎಂದರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಪ್ರಜಾವಾಣಿಯ ವರದಿಗಾರರಾದ ಉಮಾಶಂಕರ ಹಿರೇಮಠ ಯಲಬುರ್ಗಾ ಅವರ “ಅಂಧ ಭಕ್ತರು” ಕವನ ತೃತೀಯ ಸ್ಥಾನ ಪಡೆದಿದೆ.

ತೀರ್ಪುಗಾರರ ಮೆಚ್ಚುಗೆ ಪಡೆದ ಕವನಗಳು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕು ಪ್ರಜಾವಾಣಿಯ ವರದಿಗಾರರಾದ ಭೀಮಸೇನರಾವ್ ಕೆ ಕುಲಕರ್ಣಿ ವಜ್ಜಲ್ ಅವರ “ನಾಡದೇವಿ ನಿನ್ನ ನೆನೆದು” ಕವನ ಪಡೆದಿವೆ ಎಂದರು.
 ಉದಯವಾಣಿ ಪತ್ರಿಕೆಯ ದಕ್ಷಿಣ ಕನ್ನಡದ ಮಣಿಪಾಲ ಆವೃತ್ತಿಯ ಹಿರಿಯ ಉಪ ಸಂಪಾದಕರಾದ ಅನಿಲ್‌ಕುಮಾರ ಕೈರಂಗಳ ಅವರ “ಭಾವುಕರಾಗುವ ಮುನ್ನ” ಕವನ.
ವಿಜಯ ಕರ್ನಾಟಕ ಪತ್ರಿಕೆಯ ದಾವಣಗೆರೆ ಜಿಲ್ಲಾ ಹಿರಿಯ ವರದಿಗಾರರಾದ ಬಸವರಾಜ ಕೆ.ಜಿ ದಾವಣಗೆರೆ ಅವರ
“ಸಾವೇ ಇಲ್ಲದ ಪ್ರೀತಿಗಾಗಿ ಕಥಾ.                        ವಿಜೇತರಿಗೆ  ಕವನ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ -  ೧೦,೦೦೦ ರೂ. * ಪ್ರಥಮ ಬಹುಮಾನ -  ೫೦೦೦ ರೂ, ದ್ವಿತೀಯ ಬಹುಮಾನ - ೭,೦೦೦ ರೂ.        * ದ್ವಿತೀಯ ಬಹುಮಾನ - ೩೦೦೦ರೂ, ತೃತೀಯ ಬಹುಮಾನ - ೩,೦೦೦ ರೂ. * ತೃತೀಯ ಬಹುಮಾನ – ೨೦೦೦ ರೂ  ,ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ/ಕವನಗಳಿಗೆ ತಲಾ ೧೦೦೦ ರೂ.ನೀಡಲಾಗುವುದು ಎಂದರು

ಖ್ಯಾತ ಕಥೆಗಾರರಾದ ಮಹಾಂತೇಶ ನವಲಕಲ್ ಅವರು ಕಥೆಗಳ ತೀರ್ಪುಗಾರರಾಗಿ, ಕವನ ಸ್ಪರ್ಧೆ ತೀರ್ಪುಗಾರರಾಗಿ ಹಿರಿಯ ಪತ್ರಕರ್ತರು, ಕವಿಗಳಾದ ತುರುವೀಹಾಳ ಚಂದ್ರು  ಅವರು ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ಇಬ್ಬರಿಗೂ ರಾಯಚೂರು ರಿಪೋಟರ‍್ಸ್ ಗಿಲ್ಡ್ ವತಿಯಿಂದ ವಂದನೆಗಳನ್ನು ಸಲ್ಲಿಸುತ್ತೇವೆಂದರು.
ಈ ಸ್ಪರ್ಧಾ ವಿಜೇತರಿಗೆ ಆಗಸ್ಟ್ ಕೊನೆ ವಾರದಲ್ಲಿ ಹಮ್ಮಿಕೊಂಡಿರುವ ರಾಯಚೂರು ರಿಪೋಟರ‍್ಸ್ ಗಿಲ್ಡ್ ರಾಯಚೂರು ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು. ಬಹುಮಾನಕ್ಕೆ ಆಯ್ಕೆಯಾದ ಕಥೆ, ಕವನಗಳ ಜೊತೆಗೆ ತೀರ್ಪುಗಾರರ ಗಮನ ಸೆಳೆದ ಇನ್ನಿತರ ಕಥೆ ಕವನಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುವುದು ಎಂದರು. ಈ ಸಂದರ್ಭದಲ್ಲಿ  ವೆಂಕಟೇಶ್ ಹೂಗಾರ್, ಚೆನ್ನಬಸವ ಬಾಗಲವಾಡ್, ಶ್ರೀಕಾಂತ್ ಸಾವೂರು,ಖಾನ್ ಸಾಬ್ ಮೋಮಿನ್, ಆನಂದ ಕುಲಕರ್ಣಿ ಇದ್ದರು.




Comments

Popular posts from this blog