ವಾರ್ಡ್ ನಂ. 13 ರಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ: ಉಮಾ ರವೀಂದ್ರ ಜಲ್ದಾರ್ ಜನಪರ ಕಾಳಜಿ ಸ್ತುತ್ಯಾರ್ಹ-ಡಾ.ಶಿವರಾಜ ಪಾಟೀಲ್ ಜಯ ಧ್ವಜ ನ್ಯೂಸ್ , ರಾಯಚೂರು, ಜೂ.28- ನಗರದ ವಾರ್ಡ್ ನಂ 13 ರ ಧನಲಕ್ಷ್ಮಿ ಬಡಾವಣೆಯಲ್ಲಿ ಇರುವ ಶ್ರೀ ಮಾತೆ ಮರುಗೆಮ್ಮ ದೇವಸ್ಥಾನದಲ್ಲಿ ರಾಯಚೂರು ಮಹಾನಗರ ಪಾಲಿಕೆಯ 14ಲಕ್ಷ ರೂ ಎಸ್ ಎಸ್ ಸಿ ಅನುದಾನದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ 25 ಲಕ್ಷ ರೂ ಅನುದಾನದಲ್ಲಿ ಶ್ರೀ ಮಾತೆ ಮರುಗೆಮ್ಮ ದೇವಸ್ಥಾನದಲ್ಲಿ ಸಮುದಾಯ ಭವನದ ಶೇಡ್ ನಿರ್ಮಾಣ ಹಾಗೂ 50 ಲಕ್ಷದ ಕೆಕೆಆರ್ ಡಿಬಿ ಅನುದಾನದಲ್ಲಿ ಮತ್ತು ಕೆ ಆರ್ ಡಿ ಎಲ್ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಪೇವರ್ ಬ್ಲಾಕ್ ನಿರ್ಮಾಣ ಕಾಮಗಾರಿಗಳಿಗೆ ಇಂದು ನಗರ ಶಾಸಕರಾದ ಡಾ. ಎಸ್. ಶಿವರಾಜ್ ಪಾಟೀಲ್ ರವರು ಕಾಮಗಾರಿಗಳಿಗೆ ಚಾಲನೆ ನೀಡಿ, ಬಡಾವಣೆಯ ಜನರ ಮುಂದೆ ಶಾಸಕರಾಗಿ 13 ವರ್ಷಗಳ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಮೆಲುಕು ಹಾಕಿದರು ನಂತರ ಸಧ್ಯದ ಪರಿಸ್ಥಿತಿಯಲ್ಲಿ ಇರುವ ಸರ್ಕಾರ ಅಭಿವೃದ್ಧಿಗೆ ಅಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸಿದರು.
ನಂತರ ಮೊದಲನೆ ಬಾರಿಗೆ ಶಾಸಕರಾಗಿ ಚುನಾವಣೆಯ ಪ್ರಚಾರಕ್ಕೆ ವಾರ್ಡ್ ನಂ 13 ಕ್ಕೆ ಬಂದ ಸಂದರ್ಭದಲ್ಲಿ ಬಡಾವಣೆಯನ್ನು ನೋಡಿ ದಿಗ್ಬ್ರಮಿತ ಗೊಂಡೆನೆಂದು ಹೇಳಿದರು ಯಾಕೆಂದರೆ ರಾಯಚೂರಿನ ಇಷ್ಟು ಕೆಟ್ಟ ಪರಿಸ್ಥಿತಿ ಇರುತ್ತೆ ಎಂದು ನಾನು ಅಂದುಕೊಂಡಿಲ್ಲ ಎಂದರು.
ಮಳೆ ಬಂದರೆ ಗಂಜಿ ಶಾಲೆಗಳನ್ನು ತೆರೆಯುವ ಕೆಲಸ ಇರುತ್ತಿತ್ತು ಇಲ್ಲಿ ವಿಚಿತ್ರ ಎಂದರೆ ಬರಿ ಸ್ಲಂಗಳು ಅಷ್ಟೇ ಅಲ್ಲ ಸತ್ಯನಾಥ ಕಾಲೋನಿ, ಧನಲಕ್ಷ್ಮೀ ಲೇಔಟ್ ಮತ್ತು ಯರಗೇರಾ ಲೇಔಟ್ ಆರ್ ಟಿ ಓ ವೃತ್ತದಿಂದ ಮಾವಿನಕೆರೆಗೆ ಮಳೆ ನೀರು ಹೊಗದೆ ಜನರ ಮನೆಗಳಿಗೆ ನುಂಗುತ್ತಿದ್ದವು ಎಂದು ಹೇಳಿ ಇಲ್ಲಿ ರಸ್ತೆಗಳು ಇರಲಿಲ್ಲ ಹಾಗೆ ಮುಖ್ಯವಾಗಿ ಕುಡಿಯಲು ಕೂಡಾ ನೀರು ಬರತ್ತೀರಲಿಲ್ಲ 30 ವರ್ಷವಾದರೂ ಅಭಿವೃದ್ಧಿಯಾಗಿರಲಿಲ್ಲ ಆ ಸಮಯದಲ್ಲಿ ಶಾಸಕರಾಗಿ 1 ಕೋಟಿ ಕೊಟ್ಟು ಅಭಿವೃದ್ಧಿ ಕೆಲಸಕ್ಕೆ ಕೊಟ್ಟಿದ್ದನ್ನು ಸ್ಮರಿಸಿದರು.
ನಂತರ ವಾರ್ಡ್ ನಂ 13ಕ್ಕೆ ಉಮಾ ರವೀಂದ್ರ ಜಲ್ದಾರ್ ರವರು ನಗರಸಭೆ ಸದಸ್ಯರರಾದ ನಂತರ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ರಾಯಚೂರಿನಲ್ಲಿ ಈ ವಾರ್ಡ್ ನ್ನು ಬಡಾವಣೆಯನ್ನು ಅಭಿವೃದ್ಧಿಯನ್ನು ಹಂತ ಹಂತವಾಗಿ ಅಭಿವೃದ್ಧಿಯನ್ನು ಮಾಡುತ್ತ ಬಂದು ಸದ್ಯದ ಸಮಯದಲ್ಲಿ ನಾನು ನೋಡಿದ ಎಲ್ಲಾ 35 ಸದಸ್ಯರು ಜನರಿಗೆ ಸ್ಪಂದಿಸುವ ಕೆಲಸದಲ್ಲಿ ಅದರಲ್ಲಿ ನಂಬರ್ ಒನ್ ಸದಸ್ಯರಾಗಿ ಉಮಾ ರವೀಂದ್ರ ಜಲ್ದಾರ್ ರಾಗಿರುತ್ತಾರೆ ಎಂದು ಹೆಮ್ಮೆಯಿಂದ ಹೇಳಿದರು.
ಹಾಗೆ ಈಗ ಈ ವಾರ್ಡ್ನ ಜನರು ನೆಮ್ಮದಿಯಿಂದ ಬದುಕುವ ಹಾಗೆ 24x7 ಕೆಲಸ ಮಾಡುತ್ತಾ ಬರುತ್ತೀದ್ದಾರೆ ಎಂದು ಕೊಂಡಾಡಿದರು. ಇನ್ನು ಹೆಚ್ಚಿನ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತಿಮ್ಮಪ್ಪ ನಾಡಗೌಡ, ವೈ.ಗೋಪಾಲರೆಡ್ಡಿ, ಪಾಲಿಕೆ ಮಾಜಿ ಸದಸ್ಯರಾದ ಪೋಗುಲು ಶ್ರೀನಿವಾಸ್ ರೆಡ್ಡಿ, ಯಾದವ ಸಮಾಜದ ಅಧ್ಯಕ್ಷ ಹನುಮಂತಪ್ಪ ಯಾದವ್, ವಕೀಲರಾದ ಶಿವಕುಮಾರ್ ನಾಯಕ, ನಾರಾಯಣ ನಾಯಕ್, ಕೃಷ್ಣಮೂರ್ತಿ, ವಾಸುದೇವ ಬಂಡಾರಿ, ನಿವೃತ್ತ ತಹಶಿಲ್ದಾರ ನರಸಿಂಹಲು, ಭೀಮರಾವ್ ಗಡಗಡೆ, ಅಶೋಕ ಗುತ್ತೇದಾರ, ನಾಗೇಶ ಜಗತ್ಕಾರಿ, ಮುದುಕಪ್ಪ, ಭೀಮಣ್ಣ ಮಡಿವಾಳ್, ಗುರುರಾಜ್, ಚಂದ್ರು ಬಂಡಾರಿ, ಹುಲಿಗೇಪ್ಪ, ಶ್ರೀನಿವಾಸ್, ಲಿಂಗಪ್ಪ, ಶಾಂತಪ್ಪ, ನರಸಿಂಹಲು ಮೇಸ್ತ್ರಿ, ಬಿಜೆಪಿ ನಗರ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎನ್.ವೀರೇಶ ಭೋವಿ, ಸಾಗರ ರಾಹುಲ್ ಜಲ್ದಾರ್, ನರಸಿಂಹಲು, ಆನಂದ್, ಮುರಳಿ, ಶೇಖ್, ಭೀಮೇಶ್, ಯುವರಾಜ್ ಇನ್ನೂ ಅನೇಕ ಹಿರಿಯರು, ಯುವಕರು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.



Comments
Post a Comment