ಉಪನ್ಯಾಸಕ ವೀರಭದ್ರಯ್ಯ ಸ್ವಾಮಿ ನಿಧನ
ಜಯ ಧ್ವಜ ನ್ಯೂಸ್ ರಾಯಚೂರು ,ಜೂ.28- ಯರಮರಸ್ ಗ್ರಾಮದ ಶ್ರೀ ವೀರಭದ್ರಯ್ಯ ತಾತನವರ ಮಠದ ಶ್ರೀ ಚರಬಸವ ತಾತನವರ ಎರಡನೇ ಪುತ್ರ ವೀರಭದ್ರ ಸ್ವಾಮಿ (30) ರವಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರು ಶಹಾಪುರದಲ್ಲಿ ವಿಜ್ಞಾನ ವಿಷಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಲಿಂಗಸೂಗೂರಿನಲ್ಲೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ರವಿವಾರ ಬೆಳಗ್ಗೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಮೃತರು ತಂದೆ ತಾಯಿ ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ, ಭಕ್ತರನ್ನು ಅಗಲಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಸ್ವಗ್ರಾಮ ಯರಮರಸ್ ಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಿಸಲಾಗುವುದು ಎಂದು ಕುಟುಂಬ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿದೆ.

Comments
Post a Comment