ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಪ್ರೇರಣಾದಾಯಿ‌ ಉಪನ್ಯಾಸ ಕಾರ್ಯಕ್ರಮ: ಆ.22 ರಂದು ನಗರಕ್ಕೆ ಪ್ರಸಿದ್ಧ ವಾಗ್ಮಿ ಡಾ.ಮೋಹಿತ ದಯಾಲ್ ಗುಪ್ತಾ ಆಗಮನ.                                                                  ಜಯ ಧ್ವಜ ನ್ಯೂಸ್, ರಾಯಚೂರು,ಆ.20-                  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಉದಯನಗರ, ರಾಯಚೂರು ಸಂಸ್ಥೆಯಿಂದ  ಆ.22 ರಂದು ನಗರದ ವಿವಿಧಡೆ ಆಯೋಜಿಸಿರುವಂಥ ಪ್ರೇರಣಾದಾಯಿ ಉಪನ್ಯಾಸ ಕಾರ್ಯಕ್ರಮಕ್ಕೆ ಡಾ.ಮೋಹಿತ್ ದಯಾಲ್ ಗುಪ್ತಾ, ಪ್ರಸಿದ್ಧ   ಇಂಟರ್‌ನ್ಯಾಷನಲ್ ಮೋಟಿವೇಷನಲ್ ಸ್ಪೀಕರ್ ಮತ್ತು  ಕಾರ್ಡಿಯಾಲಾಜಿಷ್ಟ, ಜಿ.ಬಿ.ಪಂತ್ ಹಾಸ್ಪಿಟಲ್, ನ್ಯೂಡೆಲ್ಲಿ ಇವರು ಉಪನ್ಯಾಸಕರಾಗಿ ಆಗಮಿಸಲಿದ್ದಾರೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸ್ಮಿತಾ ಅಕ್ಕ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ   ಡಾ.ಮೋಹಿತ್ ದಯಾಲ್ ಗುಪ್ತಾ ತಮ್ಮ ವೈಧ್ಯಕೀಯ ವೃತ್ತಿಜೀವನದಲ್ಲಿ 18ಕ್ಕೂ ಹೆಚ್ಚು ಚಿನ್ನದ ಪದಕಗಳು ಹಾಗೂ 5 ಬೆಳ್ಳಿ ಪದಕಗಳನ್ನು ಪಡೆದು ವಿಶಿಷ್ಟ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇವರು ಅನೇಕ ದೇಶ-ವಿದೇಶಗಳ ಪ್ರತಿಷ್ಟಿತ ಸಂಸ್ಥೆಗಳಾದ ಆಕ್ಸಫರ್ಡ, ಕೇಮ್‌ಬ್ರಿಡ್ಜ, ಐ.ಐ.ಟಿ, ಐ.ಐ.ಎಮ್, ಪಾರ್ಲಿಮೆಂಟ್ ಆಫ್ ಇಂಡಿಯಾ, ಎ.ಐ.ಐ.ಎಮ್.ಎಸ್, ಹೆಚ್.ಸಿ.ಎಲ್, ಹೆಚ್.ಎಮ್.ಇ.ಎಲ್, ಸಿಮೆನ್ಸ ಹೀಗೆ ಅನೇಕ ಸಂಸ್ಥೆಗಳಲ್ಲಿ ಹಲವಾರು ವಿಚಾರ ಸಂಕಿರಣಗಳು ಮತ್ತು ಅಧಿವೇಶನಗಳನ್ನು ನಡೆಸಿದ್ದಾರೆ.

ಅವರು ಪ್ರಾಚೀನ ಬುದ್ದಿವಂತಿಕೆಯನ್ನು ಸಮಕಾಲೀನ ಚಿಂತನೆಯೊಂದಿಗೆ ಸಂಪೂರ್ಣವಾಗಿ ಸಂಯೋಜಿಸುತ್ತಾರೆ. ವಿಜ್ಞಾನ ಮತ್ತು ಆಧ್ಯಾತ್ಮವನ್ನು ಸಮದೂಗಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಕಾಣುವ ವಿಧಿಯನ್ನು ತಿಳಿಸಿಕೊಟ್ಟಂಥ ಖ್ಯಾತ ವಾಗ್ಮಿಗಳು ಪ್ರಪ್ರಥಮಬಾರಿಗೆ ನಮ್ಮ ರಾಯಚೂರು ನಗರಕ್ಕೆ ಆಗಮಿಸಲಿದ್ದಾರೆ ಎಂದರು.

ಬ್ರಹ್ಮಕುಮಾರೀಸ್ ಸಂಸ್ಥೆಯು ಆಯೋಜಿಸಲ್ಪಟ್ಟಿರುವ ಪ್ರೇರಣಾದಾಯಿ ಉಪನ್ಯಾಸಗಳ ಆ.22 ಶನಿವಾರ ಸಮಯ ಬೆಳಿಗ್ಗೆ ೧೦.೩೦ ರಿಂದ೧೨.೩೦ ವರೆಗೆ ರಾಯ ಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಸಭಾಂಗಣದಲ್ಲಿ(ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ) ನ ವೈದ್ಯರು ಹಾಗು ವಿದ್ಯಾರ್ಥಿಗಳಿಗಾಗಿ ) ನಂತರ  ಸಮಯ ಮದ್ಯಾಹ್ನ ೦೨.೦೦ ರಿಂದ  ೦೩.೦೦ ವರೆಗೆ  ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲ( ನಗರದ ಎಲ್ಲಾ ಶಾಲಾ-ಕಾಲೇಜುಗಳ ಶಿಕ್ಷಕ/ಉಪನ್ಯಾಸಕರಿಗಾಗಿ )ನಂತರ ಸಮಯ ಮದ್ಯಾಹ್ನ ೦೫.೩೦ ರಿಂದ  ೦೭.೦೦ ವರೆಗೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ( ನಗರದ ಎಲ್ಲಾ ಸಂಘ-ಸಂಸ್ಥೆಗಳ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ)ನಂತರ ಸಮಯ  ಮದ್ಯಾಹ್ನ ೦೭.೩೦ ರಿಂದ  ೦೮.೩೦ ವರೆಗೆ  ಭಾರತೀಯ ವೈಧ್ಯಕೀಯ ಸಂಘ (ಐ.ಎಮ್.ಎ) ಸಭಾಂಗಣದಲ್ಲಿ.            ( ರಾಯಚೂರು ನಗರದ ಎಲ್ಲಾ ವಿಭಾಗದ ವೈದ್ಯರುಗಳಿಗೆ ) ನಡೆಯಲಿದ್ದು ಆಸಕ್ತರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಶಾರದಾ ಅಕ್ಕ, ರಾಜೇಂದ್ರ ಕುಮಾರ್ ಶಿವಾಳೆ, ಜಂಬಣ್ಣ ಯಕ್ಲಾಸಪೂರ , ಲಲಿತಾ, ಮಲ್ಲಿಕಾರ್ಜುನ, ವಿಜಯ್ ಚೌದರಿ,ವೀರನಗೌಡ, ವೆಂಕಟೇಶ್ ನಾಯಕ್ ಇದ್ದರು.



Comments