Posts

Showing posts from August, 2026
Image
  ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೋರಾಟಗಾರರ ಪ್ರಶ್ನೆ ಜಯ ಧ್ವಜ ನ್ಯೂಸ್ ,ರಾಯಚೂರು,ಸೆ.1- ಜಿಲ್ಲೆಗೆ ಮಂತ್ರಿ ಮತ್ತು ಉಸ್ತುವಾರಿ ವಂಚಿತರಾಗಿರುವುದನ್ನು ಖಂಡಿಸಿ, ಸ್ವಾತಂತ್ರೋತ್ಸವದ ದಿನದಂದು   ಖಂಡಿಸಿ, ಗೋ - ಬ್ಯಾಕ್ ಘೋಷಣೆ ಯೊಂದಿಗೆ ಪ್ರತಿಭಟಿಸಿದಾಗ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹೋರಾಟಗಾರರನ್ನು ಬಂಧಿಸಿ  ಹೋರಾಟವನ್ನು ಹತ್ತಿಕ್ಕಿರುವುದನ್ನು ಖಂಡಿಸಿ  ಮನವಿ ಪತ್ರ ಸಲ್ಲಿಸಲಾಯಿತು. ಡಾ.ಅಜಯ್ ಸಿಂಗ್ ರವರ ಸಚಿವ ಸ್ಥಾನಕ್ಕೆ ಯಾವುದೇ ವಿರೋಧ ಇಲ್ಲ.  ಆದರೆ ಡಿಕೆ ಶಿವಕುಮಾರ್ ಅವರ ಘನ ಸರಕಾರದಲ್ಲಿ ಜಿಲ್ಲೆಯ ತಮ್ಮ ಕಾಂಗ್ರೆಸ್ ಪಕ್ಷದ ನಾಲ್ಕು ಚುನಾಯಿತ ಜನಪ್ರತಿನಿಧಿಗಳು, ನಾಲ್ಕು ವಿಧಾನ ಪರಿಷತ್ ಸದಸ್ಯರು ಹೊಂದಿದ್ದರು, ನಮ್ಮ ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವದು ಅತ್ಯಂತ ಖೇದಕರ ಸಂಗತಿಯಾಗಿದೆ. ಡಿ ಕೆ ಶಿವಕುಮಾರವರ  ಮುಖ್ಯಮಂತ್ರಿಗಳಾದ ನಂತರ ಕೇವಲ ಎರಡು ತಿಂಗಳ ಒಳಗಾಗಿ ಜಿಲ್ಲೆಯ ಮಾನವಿ, ದೇವದುರ್ಗ ಮತ್ತು ಲಿಂಗಸೂಗರ ಈ ಮೂರು ತಾಲೂಕಿನ ಹಳ್ಳಿಗಳಲಿ, ದಲಿತರ ಬಿಬಿತ್ಸ, ಅಮಾನುಷ ಕೊಲೆಗೀಡಾದ, ನಾಡಿನ ಮುಖ್ಯ ಮಂತ್ರಿಗಳು, ಗ್ರಹ ಮಂತ್ರಿಗಳು ಹಾಗೂ ತಾವು (ಉಸ್ತುವಾರಿ) ಜಿಲ್ಲೆಗೆ ಭೇಟಿ ನೀಡಲಿಲ್ಲ. ಕೆಲ ಅಧಿಕಾರಿಗಳಿಂದ ತಿಳಿದು ಬಂದದು ಏನೆಂದರೆ, ವಿಧಾನ ಸಭೆಯು ಸದನ ಇರುವದರಿಂದ ಸದ್ಯ ಬರಲ್ಲ ಎಂಬ ವಿಚಾರ ವ್ಯಕ್ತವಾಯಿತು. ಆದರೆ ಹೋರಾಟಗಾರರ ಪ್ರಶ್ನೆ ನೇರವಾಗಿ ತಮ್ಮ ಸರ್ಕಾರಕ್ಕೆ?? ತ...
Image
  ಜಿಲ್ಲಾ ಉಸ್ತುವಾರಿ ಸಚಿವರಿಂದ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ: ಕೊನೆಯ ‌ಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸಿ- ಸಚಿವ ಡಾ.ಅಜಯ್ ಧರ್ಮಸಿಂಗ್ ಜಯ ಧ್ವಜ ನ್ಯೂಸ್ ,ರಾಯಚೂರು ಆ. 31- ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಕೊನೆಯ ‌ಭಾಗದ ರೈತರಿಗೆ ಸಮರ್ಪಕವಾಗಿ ನೀರು ನಿರ್ವಹಣೆ ಮಾಡಬೇಕು. ಜಿಲ್ಲೆಯ ಬರಗಾಲ ಪೀಡಿತ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲಾ ಉಸ್ತುವಾರಿ ಸಚಿವರಾದ ಡಾ.ಅಜಯ್ ಧರ್ಮಸಿಂಗ್ ಅವರು ಹೇಳಿದರು. ಅವರಿಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಯಚೂರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಗಳು, ಕೃಷಿ ಚಟುವಟಿಕೆಗಳು, ನೀರಾವರಿ ಸಮಸ್ಯೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಐದು‌ ತಾಲೂಕುಗಳನ್ನು ಬರ ಪೀಡಿತ ‌ತಾಲೂಕು ಎಂದು ಘೋಷಣೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಲು ಕ್ರಮ ವಹಿಸಲಾಗುತ್ತದೆ ಎಂದರು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಮುಂಜಾಗ್ರತಾ ವಹಿಸಿ, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಹೆ ತಲುಪಿಸಲು ಶ್ರಮಿಸಬೇಕು. ಮುಖ್ಯಮಂತ್ರಿಯವರು ರಾಯಚೂರು ಜಿಲ್ಲೆಗೆ ವಿಶೇಷ ಆದ್ಯತೆ ನೀಡಿದ್ದು, ಸರ್ಕಾರದ...
Image
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ, ಸರ್ಕಾರ ಸದಾ ನಿಮ್ಮೊಂದಿಗಿದೆ- ಸಚಿವ ಡಾ.ಅಜಯ್ ಧರ್ಮಸಿಂಗ್ ಜಯ ಧ್ವಜ ನ್ಯೂಸ್ ,ರಾಯಚೂರು ಆ. 31- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ  ಭೂಮಾನಂದ ಹದ್ದಿನಾಳ ಅವರನ್ನು ಇತ್ತೀಚೆಗೆ ಸುಂಕೇಶ್ವರಹಾಳ ಗ್ರಾಮದ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಆಗಸ್ಟ್ 31ರ ಸೋಮವಾರ ದಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲಾ ಉಸ್ತುವಾರಿ ಸಚಿವರಾದ ಡಾ.ಅಜಯ್ ಧರ್ಮಸಿಂಗ್ ಹದ್ದಿನಾಳ ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಸಚಿವರು ಮಾತನಾಡಿ, ಜಿಲ್ಲೆಯಲ್ಲಿ ನಡೆದಿರುವ ಈ ಅಹಿತಕರ ಕೃತ್ಯ ಮತ್ತು ಘಟನೆಯನ್ನು ಸರ್ಕಾರ ತೀವ್ರವಾಗಿ ಪರಿಗಣಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾದ  ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು‌ ಸುದೀರ್ಘ ಚರ್ಚೆ ನಡೆಸಿದ್ದೇವೆ. ಈ ಸಭೆಯಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಕೂಡ ಉಪಸ್ಥಿತರಿದ್ದು, ಘಟನೆಯ ವಿವರಗಳನ್ನು ಕಲೆಹಾಕಲಾಗಿದೆ ಎಂದರು. ಎಂಟು ಜನರ ಬಂಧನ: ಘಟನೆ ನಡೆದ ತಕ್ಷಣವೇ ಸಕ್ರಿಯವಾಗಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ...
Image
  ಎಸ್ಸಿ ಎಸ್ಟಿ  ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಂದ   ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ಮತ್ತು ಪರಿಶೀಲನೆ: ಪ್ರಕರಣವನ್ನು ನ್ಯಾಯಯುತವಾಗಿ ನಡೆಸಲು ಸೂಚನೆ- ಡಾ.ಮೂರ್ತಿ ಎಲ್. ಜಯ ಧ್ವಜ ನ್ಯೂಸ್ ,ರಾಯಚೂರು ಆ. 30- ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ ಎಲ್. ಮತ್ತು ಸದಸ್ಯರಾದ  ಸುನೀಲ್ ಎಂ.ಉಕ್ಕಲಿ, ಎನ್.ದಿವಾಕರ್, ಗೀತಾ ಥಾಂವಶಿ ಹಾಗೂ ಕಾರ್ಯದರ್ಶಿ ಡಾ.ಹೆಚ್.ಎಸ್.ಶಿವರಾಮು ಅವರು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸದಲ್ಲಿದ್ದು, ರವಿವಾರ ಮೊದಲ ದಿ‌ನ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣ ವಿಚಾರದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು. ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ  ವಸತಿ ಗೃಹದಿಂದ ನೇರವಾಗಿ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮಕ್ಕೆ ಭೇಟಿ ನೀಡಿ, ಮೃತ ಕು.ಅಶ್ವಿನಿ ಎಂಬುವವರ ಅತ್ಯಾಚಾರ ಹಾಗೂ ಕೊಲೆ ವಿಚಾರದ ಬಗ್ಗೆ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಿಂದ ಸ್ಥಳ ಪರಿಶೀಲನೆ ನಡೆಸಿದರು. ಅವರು ಮನೆಗೆ ಭೇಟಿ ನೀಡಿ ಮೃತ ಕು.ಅಶ್ವಿನಿ ಅವರ ಭಾವಚಿತ್ರಕ್ಕೆ ವಿವಿಧ ಗಣ್ಯರಿಂದ ಪುಷ್ಪ ನಮನ ಸಲ್ಲಿಸಿದ  ನಂತರ ಆಯೋಗದ ಅಧ್ಯಕ್ಷರಿಂದ ಕುಟುಂಬದ ಮಾಹಿತಿ ಪಡೆದರು. ಈ ವೇಳೆ ಆಯೋಗದ ಅಧ್ಯಕ್ಷರು ಮಾತನಾಡಿ, ಪ್ರಕರಣದಡಿ ಆರೋಪಿಗಳಿಗೆ ಕಾನೂನು ಪ್ರಕಾರ ಕಠಿಣವಾದ ಶಿಕ್ಷೆಯಾಗಲಿದೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ...
Image
  ಜುಬಿನ್ ಮಹೋಪಾತ್ರ ವರ್ಗಾವಣೆ.                                                                 ಜಯ ಧ್ವಜ ನ್ಯೂಸ್, ರಾಯಚೂರು,ಆ.29-                    ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮಹೋಪಾತ್ರ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ಜುಬಿನ್ ಮಹೋಪಾತ್ರರವರನ್ನು ಯಾದಗಿರಿ ಜಿ.ಪಂ ಸಿಇಓ ಆಗಿ ನಿಯುಕ್ತಿಗೊಳಿಸಲಾಗಿದೆ. ಜುಬಿನ್ ಮಹೋಪಾತ್ರ ಮಹಾನಗರ ಪಾಲಿಕೆ ಆಯುಕ್ತರಾಗಿ ಅನೇಕ ಬದಲಾವಣೆ ತಂದಿದ್ದರು.
Image
  ನವೋದಯ 88.4 ಎಫ್.ಎಮ್. ಬಾನುಲಿ ಕೇಂದ್ರ ಉಧ್ಘಾಟನೆ: ಎಸ್.ಆರ್.ರೆಡ್ಡಿ ಕನಸು ಕಂಡದ್ದನ್ನು ನನಸು ಮಾಡುವ ಛಲಗಾರ-ಬೋಸರಾಜು.                                                      ಜಯ ಧ್ವಜ ನ್ಯೂಸ್, ರಾಯಚೂರು,ಆ.29- ಎಸ್.ಆರ್.ರೆಡ್ಡಿ ಕನ‌ಸು ಕಂಡದ್ದನ್ನು ನನಸು ಮಾಡುವ ಛಲಗಾರ ಎಂದು ಮಾಜಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ಅವರಿಂದು ನವೋದಯ ಸಂಸ್ಥೆಯಲ್ಲಿ ನವೋದಯ 88.4 ಬಾನುಲಿ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಎಸ್ ಆರ್ ರೆಡ್ಡಿ ನವೋದಯ ಸಂಸ್ಥೆ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ನಗರಕ್ಕೆ ವಿದ್ಯಾರ್ಜನೆಗೆ ಆಗಮಿಸಿದ ಅವರು ತಮ್ಮದೇ ಬೃಹತ್ ಶಿಕ್ಷಣ ಸಂಸ್ಥೆ ರೂಪಿಸಿದ್ದು ಅತ್ಯಂತ ಶ್ಲಾಘನೀಯ ಎಂದರು. ಬಾನುಲಿ ಕೇಂದ್ರ ಸ್ಥಾಪಿಸುವ ಮೂಲಕ ಶಿಕ್ಷಣ, ಮನೋರಂಜನೆಗೆ ಹೊಸ ಹೆಜ್ಜೆಯಿರಿಸಿದ್ದು ಬಾನುಲಿ ಕೇಂದ್ರ ಜನರಿಗೆ ಉಪಯುಕ್ತ ಮಾಹಿತಿ ಒದಗಿಸಲಿ ಎಂದರು. ನಗರದಲ್ಲಿ ಮದುವೆ ಸಮಾರಂಭಗಳಿಗೆ ಅನೂಕೂಲವಾಗಲು ನಗರದ ಹೊರ ವಲಯದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ಕಟ್ಟಿಸುವ ಮೂಲಕ ಶುಭ ಕಾರ್ಯಗಳಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು. ಅವರ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಭಾರಿ ಪೈಪೋಟಿಯಿರು...
Image
  ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು:                                                              ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ . ಜಯ ಧ್ವಜ ನ್ಯೂಸ್ ,ರಾಯಚೂರು ಆಗಸ್ಟ್ 28 - ರಾಜ್ಯ ಸರ್ಕಾರವು ಅಲೆಮಾರಿ ನಿಗಮಕ್ಕೆ ಎಸ್‌ಸಿಪಿ ಅಡಿಯಲ್ಲಿ 100 ಕೋಟಿ ಹಾಗೂ ಟಿಎಸ್ಪಿ ಅಡಿಯಲ್ಲಿ 48 ಕೋಟಿ ವಿಶೇಷ ಅನುದಾನವನ್ನು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಕಾಯ್ದಿರಿಸುವ ಮೂಲಕ ಆ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಅವರು ಹೇಳಿದರು. ಅವರಿಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ  ಮಾತನಾಡಿದರು.  ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೊದಲು ಅಲೆಮಾರಿ ಕೋಶವನ್ನು ಸ್ಥಾಪಿಸಲಾಯಿತು. ನಂತರ 2022ರಲ್ಲಿ ನಿಗಮವಾಗಿ, 2024ರಲ್ಲಿ ಪ್ರಥಮ ಬಾರಿಗೆ ಅಲೆಮಾರಿ ಸಮುದಾಯದ ಹೆಣ್ಣುಮಗಳಿಗೆ ನಿಗಮದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿದೆ ಎಂದರು. ಕಂದಾಯ ಇಲಾಖೆಯ ಸಹಯೋಗದೊಂದಿಗೆ ಅಲೆಮಾರಿಗಳು...
Image
  ದೇವದುರ್ಗ ಚಿನ್ನ–ತಾಮ್ರದ ಗಣಿಗಾರಿಕೆ ಬ್ಲಾಕ್‌ಗೆ ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಭೇಟಿ ಜಯ‌ ಧ್ವಜ ನ್ಯೂಸ್ ,ರಾಯಚೂರು,ಆ.27- ಕೇಂದ್ರ ಗಣಿ ಸಚಿವಾಲಯದ ಹರಾಜು ಪ್ರಕ್ರಿಯೆ ಮೂಲಕ ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕಾಲರೀಸ್ ಕಂಪನಿ ಲಿಮಿಟೆಡ್‌ ನವರು  ಜಿಲ್ಲೆಯ ದೇವದುರ್ಗದಲ್ಲಿ ಚಿನ್ನ ಮತ್ತು ತಾಮ್ರದ ಬ್ಲಾಕ್‌ಗಳ ಪರಿಶೋಧನಾ ಪರವಾನಗಿ ಪಡೆದಿರುವ ಹಿನ್ನೆಲೆಯಲ್ಲಿ, ತೆಲಂಗಾಣದ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಗುರುವಾರ ದೇವದುರ್ಗಕ್ಕೆ ಭೇಟಿ ನೀಡಿ ಸಿಂಗರೇಣಿ ಬ್ಲಾಕ್‌ನ ಪರಿಶೋಧನಾ ಪ್ರದೇಶವನ್ನು ಪರಿಶೀಲಿಸಿದರು. ಚಿನ್ನ ಮತ್ತು ತಾಮ್ರದ ನಿಕ್ಷೇಪಗಳಿರುವ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಪರಿಶೋಧನಾ ಕಾರ್ಯದ ಪ್ರಗತಿ ಹಾಗೂ ಮುಂದಿನ ಚಟುವಟಿಕೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರೊಂದಿಗೆ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಗಣಿಗಾರಿಕೆ ಪ್ರದೇಶವನ್ನು ಪರಿಶೀಲಿಸಿದರು. ನಿರ್ಣಾಯಕ ಖನಿಜಗಳ ಪರಿಶೋಧನಾ ಕ್ಷೇತ್ರಕ್ಕೆ ಸಿಂಗರೇಣಿ ಕಾಲರೀಸ್ ಕಂಪನಿ ಪ್ರವೇಶಿಸುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ತಿಳಿಸಿದರು. ನಂತರ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಮಾತನಾಡಿ, ಚಿನ್ನ ಹಾಗೂ ತಾಮ್ರ ಗಣಿಗಾರಿಕೆ  ಯೋಜನೆಯು ಸಿಂಗರೇಣಿ ಸಂಸ್ಥೆಯನ್ನು ಕಲ್ಲಿದ್ದಲು ಗಣಿಗಾರಿಕೆಯಾಚೆಗೆ ಹೊಸ...
Image
  ಜಿಲ್ಲೆಯಲ್ಲಿ ದಲಿತರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸದಿದ್ದರೆ ಹೋರಾಟ ತೀರ್ವ:                                                                      ಡಿಸಿ ,ಎಸ್ಪಿಯವರನ್ನು ಕೂಡಲೆ ವರ್ಗಾವಣೆಗೊಳಿಸಿ-  ಎಸ್. ಮಾರೆಪ್ಪ                                                                                            ಜಯಧ್ವಜ ನ್ಯೂಸ್, ರಾಯಚೂರು,ಆ.27- ಜಿಲ್ಲೆಯಲ್ಲಿ ನಡೆದಿರುವ ಮೂವರು ದಲಿತರ ಕಗ್ಗೊಲೆ ಪ್ರಕರಣವನ್ನು ಸಿಐಡಿಗೆ ಸರ್ಕಾರ ವಹಿಸದಿದ್ದರೆ ಹೋರಾಟ ತೀರ್ವ ಗೊಳಿಸಬೇಕಾಗುತ್ತದೆ ಎಂದು ರಾಯಚೂರು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಎಸ್.ಮಾರೆಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಒಂದೆ ತಿಂಗಳಲ್ಲಿ ಭೂಮಾನಂದ ಕೊಲೆ ಹಾಗೂ ಅಶ್ವಿನಿ, ರಾಣಿಮ್ಮ ಅತ್ಯಾಚಾರ ಕೊಲೆ...
Image
  ಸಾಧನೆಗೆ ಕಠಿಣ ಪರಿಶ್ರಮವೇ ಮೂಲಮಂತ್ರ- ವೆಂಕಟೇಶ ಬೇವಿನಬೆಂಚಿ ಜಯ ಧ್ವಜ ನ್ಯೂಸ್ ರಾಯಚೂರು, ಆ.26- ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ಸು  ಕಾಣಬೇಕಾದರೆ ಮತ್ತು ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮವೇ ಮೂಲ ಮಂತ್ರವಾಗಿದೆ. ಸಾಧನೆಗೆ ಕಠಿಣ ಪರಿಶ್ರಮ ಸ್ಪಷ್ಟವಾದ ಗುರಿ,  ಪ್ರಾಮಾಣಿಕ ಪ್ರಯತ್ನ ಇದ್ದರೆ  ಯಶಸ್ಸು ಕಾಣಲು ಸಾಧ್ಯ ಎಂದು ಆಕಾಶವಾಣಿಯ ಕಾರ್ಯಕ್ರಮ ನಿರ್ದೇಶಕರಾದ ವೆಂಕಟೇಶ್ ಬೇವಿನಬೆಂಚಿ ಹೇಳಿದರು.   ಅವರು ನಗರದ ಸರಕಾರಿ ಅಲ್ಪಸಂಖ್ಯಾತರ  ಮುರಾರ್ಜಿ ದೇಸಾಯಿ ಬಾಲಕಿಯತ ವಸತಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿದರು. ಎಷ್ಟೇ ಕಷ್ಟ ಬಂದರೂ ನಿರಂತರವಾಗಿ ಕೆಲಸ ಮಾಡುವುದರಿಂದ ಗುರಿ ಮುಟ್ಟಬಹುದು, ಸರಿಯಾದ ವೇಳಾಪಟ್ಟಿ ಮತ್ತು ಸಮಯದ ಸದುಪಯೋಗ ಸಾಧನೆಯನ್ನು ಸುಲಭಗೊಳಿಸುತ್ತದೆ‌  ಮಾಡುವ ಕೆಲಸದಲ್ಲಿ ಸಂಪೂರ್ಣ ಗಮನಹರಿಸಿದರೆ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ‌ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ಹನುಮೇಶ ರವರ ವಹಿಸಿದ್ದರು. ಕಾಲೇಜಿನ ಕನ್ನಡ ಉಪನ್ಯಾಸಕರಾದ  ಶ್ರೀ ಸುರೇಶ ಜಿ ಗುರುಗುಂಟ* ರವರು ಮಾತನಾಡಿ ತಾಳ್ಮೆ, ಕಷ್ಟಪಟ್ಟು ಕೆಲಸಮಾಡುವುದು ಗುರಿಸಾಧಿಸುವ  ಛಲ, ಸ್ವಯಂ ಪ್ರೇರಣೆ , ಸಮಯ ಪರಿಪ...
Image
  ಆ.29 ರಂದು ನಗರದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಹಾಕಿ ಟೂರ್ನಮೆಂಟ್:                                                                              16 ಜಿಲ್ಲೆಗಳ ತಂಡಗಳು ಭಾಗಿ-ರವೀಂದ್ರ ಜಲ್ದಾರ್ .                                          ಜಯ ಧ್ವಜ ನ್ಯೂಸ್, ರಾಯಚೂರು,ಆ.26- ನಗರದಲ್ಲಿ ಆ.29 ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಹಾಕಿ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಹಾಕಿ ಅಸೋಸಿಯೇಷನ್ ಅಧ್ಯಕ್ಷರಾದ ರವೀಂದ್ರ ಜಲ್ದಾರ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ಹಾಕಿ ಅಸೋಸಿಯೇಷನ್ 25ನೇ ವಾರ್ಷಿಕೋತ್ಸವ ಅಂಗವಾಗಿ  ಆ.29ರಂದು ನಗರದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದ ಬಾಸ್ಕೇಟ್ ಬಾಲ್ ಕೋರ್ಟ್ ನಲ್ಲಿ ಬೆಳಿಗ್ಗೆ 10ಕ್ಕೆ ಟೂರ್ನಮೆಂಟ್ ಉದ್ಘಾಟನೆಯನ್ನು ಮಾಜಿ ಸಚಿವ ಹಾಗೂ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಧ್ಯಕ್ಷರಾದ ಕುಮಾರ್ ಬಂಗಾರಪ್ಪ ನೆರವೇರಿಸಲಿದ್ದು , ನಗರ ಶಾಸಕ ಡಾ.ಶಿವರಾಜ ಪ...
Image
  ಅಶ್ವಿನಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ- ಸಿಎಂ ಜಯ ಧ್ವಜ ನ್ಯೂಸ್, ರಾಯಚೂರು,ಆ.25-   ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಅಶ್ವಿನಿ ಅವರ ಕುಟುಂಬಕ್ಕೆ ಸೂಕ್ತ ನ್ಯಾಯ ಹಾಗೂ ಅಗತ್ಯ ನೆರವು ಒದಗಿಸುವಂತೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಸಿಂಗ್ ಹಾಗೂ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರ ನೇತೃತ್ವದಲ್ಲಿ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಿಯೋಗವು ಅಶ್ವಿನಿ ಹತ್ಯೆ ಪ್ರಕರಣದ ಕುರಿತು ಸಮಗ್ರವಾಗಿ ಚರ್ಚಿಸಿ, ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ ಸಂತ್ರಸ್ತ ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿತು. ಕುಟುಂಬದ ಅಸಹನೀಯ ನೋವಿನ ಸಂದರ್ಭದಲ್ಲಿ ಸರ್ಕಾರವು ಅಗತ್ಯ ನೆರವು ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಅಜಯ್ ಸಿಂಗ್ ಅವರು ಪ್ರಕರಣದ ಹಿನ್ನೆಲೆ, ತನಿಖೆಯ ಪ್ರಗತಿ ಹಾಗೂ ಸಂತ್ರಸ್ತ ಕುಟುಂಬದ ಪ್ರಸ್ತುತ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳಿಗೆ ವಿವರವಾದ ಮಾಹಿತಿ ನೀಡಿದರು. ಕುಟುಂಬಕ್ಕೆ ತಕ್ಷಣದ ಆರ್ಥಿಕ ನೆರವು, ಭದ್ರತೆ ಹಾಗೂ ಅಗತ್ಯವಿರುವ ಇತರ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವಂತೆ ಅವರು ಮನವಿ ಮಾಡಿದರು. ಅಲ್ಲದೆ, ಪ್ರಕ...
Image
  ದಲಿತರ ಕಗ್ಗೊಲೆ ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ: ಸಿಐಡಿ ತನಿಖೆಗೆ ಆಗ್ರಹ .                              ಜಯ ಧ್ವಜ ನ್ಯೂಸ್, ರಾಯಚೂರು, ಆ.25 - ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಮೂವರು ದಲಿತರ ಕಗ್ಗೊಲೆ ಘಟನೆ ಖಂಡಿಸಿ ರಾಯಚೂರು ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಹಸ್ರಾರು ದಲಿತ ಸಂಘಟನೆಗಳ ಮುಖಂಡರು, ಹದ್ದಿನಾಳ ಭೂಮಾನಂದ ಕೊಲೆ, ಸಿರವಾರದ ಹೊಕ್ರಾಣಿಯಲ್ಲಿ ಅಶ್ವಿನಿ ಅತ್ಯಾಚಾರ ಕೊಲೆ, ರಾಣಿಮ್ಮ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಲ್ಲಾ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ದಲಿತರ ಮೇಲಿನ ದಬ್ಬಾಳಿಕೆ ಕೊನೆಯಾಗಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒಕ್ಕೂರಲಿನಿಂದ ಒತ್ತಾಯಿಸಲಾಯಿತು. ಈ ಪ್ರತಿಭಟನೆಯಲ್ಲಿ ಮುಖಂಡರಾದ ಎಸ್.ಮಾರೆಪ್ಪ ವಕೀಲರು, ರವೀಂದ್ರ ನಾಥ್ ಪಟ್ಟಿ, ಎಂ.ಆರ್.ಭೇರಿ, ಅಂಬಣ್ಣ ಅರೋಲಿಕರ್, ಹೇಮರಾಜ್ ಅಸ್ಕಿಹಾಳ,ಪಿ.ಯಲ್ಲಪ್ಪ, ವಿಶ್ವನಾಥ್ ಪಟ್ಟಿ ಸೇರಿದಂತೆ ದಲಿತ ಪರ ಸಂಘಟನೆಗಳ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಸಮಾಜ ಬಾಂಧವರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಕ್ರಾಂತಿ ಗೀತೆ ಮೊಳಗಿದವು.
Image
  ಆ.27 ರಿಂದ ಸೆ.2ರವರೆಗೆ ರಾಯರ 355ನೇ ಆರಾಧನಾ ಸಪ್ತರಾತ್ರೋತ್ಸವ:                                                                          ತಿರುಮಲ ಮಾದರಿಯಲ್ಲಿ ಶ್ರೀ ಮಠದಿಂದ ಮಂತ್ರಾಲಯದಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಪ್ರಾಯೋಗಿಕ  ಹೆಜ್ಜೆ- ಶ್ರೀ ಸುಬುಧೇಂದ್ರತೀರ್ಥರು.                                                                                                ಜಯ ಧ್ವಜ ನ್ಯೂಸ್, ರಾಯಚೂರು,ಆ.24- ಕಲಿಯುಗದ ಕಾಮಧೇನು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಸಪ್ತ ರಾತ್ರೋತ್ಸವ ಕಾರ್ಯಕ್ರಮ ಆ.27 ರಿಂದ ಸೆ.2ರವರೆಗೆ ನಡೆಯಲಿದೆ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂ...
Image
  ಆ.26 ರಂದು ನಗರದಲ್ಲಿ ಭಕ್ತಿಭಾವದಿಂದ ಭಗವಾನ್ ಶ್ರೀ ಜಿಹ್ವೇಶ್ವರ ಜಯಂತೋತ್ಸವ ಆಚರಣೆ ಜಯ ಧ್ವಜ ನ್ಯೂಸ್ ,ರಾಯಚೂರು, ಆ. 24- ನಗರದ ತಿಮ್ಮಾಪೂರು ಪೇಟೆಯಲ್ಲಿರುವ ಶ್ರೀ ದತ್ತಾತ್ರೇಯ ಮಂದಿರದ ಆವರಣದಲ್ಲಿ ಭಗವಾನ್ ಆ. 26 ರಂದು ಶ್ರೀ ಜಿಹ್ವೇಶ್ವರ ಜಯಂತೋತ್ಸವವನ್ನು ಭಕ್ತಿಭಾವ ಹಾಗೂ ಸಡಗರದಿಂದ ಆಚರಿಸಲಾಗುವುದು ಎಂದು ಸ್ವಕುಳ ಸಾಳಿ ನೇಕಾರ ಸಮಾಜ (ರಿ) ಪ್ರಕಟಣೆಯಲ್ಲಿ ತಿಳಿಸಿದೆ. ಜಯಂತೋತ್ಸವದ ಅಂಗವಾಗಿ ಅಂದು ಬೆಳಗ್ಗೆ 7 ಗಂಟೆಯಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಗವಾನ್ ಶ್ರೀ ಜಿಹ್ವೇಶ್ವರ ಮೂರ್ತಿಗೆ ವಿಶೇಷ ರುದ್ರಾಭಿಷೇಕ ಹಾಗೂ ಪೂಜಾ ವಿಧಿವಿಧಾನಗಳು ನೆರವೇರಲಿದ್ದು, ನಂತರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗುವುದು. ಬಳಿಕ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಸಮಾಜದ ಮಹಿಳಾ ಮಂಡಳಿಯ ವತಿಯಿಂದ ತೊಟ್ಟಿಲೋತ್ಸವವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಜಯಂತೋತ್ಸವದಲ್ಲಿ ಸಮಾಜದ ಬಾಂಧವರು, ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಗವಾನ್ ಶ್ರೀ ಜಿಹ್ವೇಶ್ವರರ ದರ್ಶನ ಪಡೆದು ಪುನೀತರಾಗುವಂತೆ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರು ತನು, ಮನ, ಧನದಿಂದ ಸೇವೆ ಸಲ್ಲಿಸಿ, ಭಗವಂತನ ಕೃಪೆಗೆ ಪಾತ್ರರಾಗಬೇಕು. ಕಾರ್ಯಕ್ರಮದ ನಂತರ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಪ್ರಸಾದ ...
Image
  ವೈಟಿಪಿಎಸ್ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಸಡಿಲಿಕೆ: ೨೭೦ ಕೋಟಿ ರೂ. ಅವ್ಯವಹಾರ ತನಿಖೆ ಕೈಗೊಳ್ಳದಿದ್ದರೆ ರಾಜ್ಯದಂತ ಹೋರಾಟ- ವಿನೋದ್ ರೆಡ್ಡಿ ಜಯ ಧ್ವಜ ನ್ಯೂಸ್ ,ರಾಯಚೂರು,ಆ.24-  ವೈಟಿಪಿಎಸ್ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಸಡಿಲಿಕೆ ಮಾಡಿ 270  ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ  ಕರ್ನಾಟಕ ರಕ್ಷಣಾ ವೇದಿಕೆ ರಾಯಚೂರು ಜಿಲ್ಲಾ ಘಟಕದ ಜಿಲ್ಲಾಧ್ಯರಾದ ಎಂ. ವಿನೋದರೆಡ್ಡಿಯವರು   ತನಿಖೆ ಕೈಗೊಳ್ಳದಿದ್ದರೆ ರಾಜ್ಯಾದಂತ ಹೋರಾಟ ಮಾಡಲಾಗುವುದು ಎಂದು   ಕೆಪಿಸಿಎಲ್ ಎಂಡಿ ಗೆ ಮನವಿ ಮಾಡಿದ್ದಾರೆ.   ರಾಯಚೂರು ತಾಲೂಕಿನ ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ನಿರ್ವಹಣೆ ಹಾಗೂ ಕಾರ್ಯಾಚರಣೆ ಪ್ರಕ್ರಿಯೆಯಲ್ಲಿ ಭಾರಿ ಅಪರಾತಪರಾವಾಗಿದ್ದು, ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಉನ್ನತ ಮಟ್ಟದ ತಂಡ ರಚನೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು.    ಜಿಲ್ಲೆಯ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಈ ಎರಡು ಕೇಂದ್ರಗಳು ರಾಜ್ಯಕ್ಕೆ ಶೇ.40 ಕ್ಕಿಂತ ಅಧಿಕ ವಿದ್ಯುತ್ ಪೂರೈಸಲಾಗುತ್ತಿದೆ. ಯಾವ ಉದ್ದೇಶದ ಅನ್ವಯ ಜಿಲ್ಲೆಯ ಜನರು ವಿದ್ಯುತ್ ಘಟಕಗಳ ಸ್ಥಾಪನೆಗೆ ಜಮೀನು ನೀಡಿದರು? ಸರಕಾರ ಯಾವ ಕಾರಣಕ್ಕೆ ಇಲ್ಲಿ ಘಟಕ ಸ್ಥಾಪನೆ ಮಾಡಿದೆ? ಇದರ ಉದ್ದೇಶವೇ ಸಂಪೂರ್ಣ ಬುಡಮೇಲಾಗಿದೆ.   ವೈಟಿಪಿಎಸ್ ಕಂಪನಿ ಕೇರಳ ಮೂಲದ ಭವಾನಿ...
Image
  ರಾಯಚೂರು ಜಿಲ್ಲೆಯಲ್ಲಿ ಒಟ್ಟು 13,93,163 ಮತದಾರರ ಕರಡು ಪಟ್ಟಿ ಪ್ರಕಟ- ಜಿಲ್ಲಾಧಿಕಾರಿ ಪೂವಿತಾ ಎಸ್. ಜಯ ಧ್ವಜ ನ್ಯೂಸ್ ,ರಾಯಚೂರು, ಅ. ‌24 -  ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ 2026ನೇ ಸಾಲಿನ ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 13,93,163 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು. ಅವರಿಂದು ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಯಚೂರು ಜಿಲ್ಲೆಯಲ್ಲಿ ಒಟ್ಟು 13,93,163 (ಪುರುಷ, ಮಹಿಳೆ ಮತ್ತು ಇತರೆ ಮತದಾರರು ಒಳಗೊಂಡಂತೆ) ಮತದಾರರು ಇದ್ದಾರೆ. ಹಿಂದಿನ ಮತದಾರರ ಪಟ್ಟಿಯಿಂದ ಒಟ್ಟು 3,21,396 ಮತದಾರರನ್ನು ತೆಗೆದುಹಾಕಲಾಗಿದೆ. ಅದರಲ್ಲಿ ಮರಣ ಹೊಂದಿದವರು 61,385, ಫರ್ಮನೆಂಟ್  ಆಗಿ ಶಿಫ್ಟ್ ಆದವರು 1,87,941, ಆಬ್ಸೆಂಟಿ ಮತದಾರರು 30,733 ಹಾಗೂ ಇತರರು: 365 ಒಳಗೊಂಡಿದೆ ಎಂದರು. 2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಈ ಬಾರಿಯ ಕರಡು ಪಟ್ಟಿಯಲ್ಲಿ 3,21,396 (ಶೇಕಡಾ 18.75%) ಮತದಾರರ ವ್ಯತ್ಯಾಸವಿದೆ. ಯುವ ಮತದಾರರು (18-19 ವಯಸ್ಸು): 11,56,627 ಜನರು ಕರಡು ಪಟ್ಟಿಯಲ್ಲಿದ್ದಾರೆ. ಅಲ್ಲದೆ ‌17,048 ಮತದಾರರು ವಿವಿಧ ರೀತಿಯಲ್ಲಿ ...
Image
  ದಲಿತರ ವಿಮೋಚನೆಗೆ ಶಿಕ್ಷಣವೇ ಅಸ್ತ್ರ- ವೆಂಕಟೇಶ ಬೇವಿನಬೆಂಚಿ ಜಯ ಧ್ವಜ ನ್ಯೂಸ್ ,ರಾಯಚೂರು, ಆ.23-  ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ದಲಿತರು ಜಾತಿ ದೌರ್ಜನ್ಯ, ಅತ್ಯಾಚಾರ, ಕೊಲೆ - ಸುಲಿಗೆಗೆ ಬಲಿಯಾಗುತ್ತಾ ಬಂದಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದಂತೆ ಶಿಕ್ಷಣವು ಹುಲಿಯ ಹಾಲುದ್ದಿಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಎನ್ನುವಂತೆ ದಲಿತರ ಸರ್ವ ವಿಮೋಚನೆಗೆ ಶಿಕ್ಷಣವೇ ಅಸ್ತ್ರ  ಎಂದು ಸಾಮಾಜಿಕ ಚಿಂತಕರು ಹಾಗೂ ರಾಯಚೂರು ಆಕಾಶವಾಣಿ ಕೇಂದ್ರ ಕಾರ್ಯಕ್ರಮ ಪ್ರಸಾರ ನಿರ್ವಾಹಕರಾದ ವೆಂಕಟೇಶ ಬೇವಿನಬೆಂಚಿ ಅಭಿಮತ ವ್ಯಕ್ತಪಡಿಸಿದರು. ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಹನುಮಂತಿ ದಿ. ಕೋಳಿ ಹುಸೇನಪ್ಪ ಮ್ಯಾತ್ರಿ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿ ಹಾಗೂ ಜನತಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ) ಬಲ್ಲಟಗಿ ವತಿಯಿಂದ ಶನಿವಾರ ಆಯೋಜಿಸಿದ್ದ 127 ನೇ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹೋರಾಟಗಾರ ರಾಘವೇಂದ್ರ ಭೋರೆಡ್ಡಿ ಮನ್ಸಾಲಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ವಿಚಾರಗಳನ್ನು ಮತ್ತು ಅವರ ಮಾರ್ಗ ಹಾಗೂ ಆಶಯಗಳನ್ನು ಮನೆ ಮನೆಗೆ ತಲುಪಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.  ಖ್ಯಾತ ಬಹುಜನ ಚಿಂತಕರಾದ ಶ್ರೀನಿವಾಸ ಮರೆಡ್ಡಿ, ಉಪನ್ಯಾಸಕ ಎಸ್.ಪ್ಯಾಟೆಪ್ಪ, ರಾಯಚೂರಿನ ಕ...
Image
  ಜಿಲ್ಲೆಯಲ್ಲಿ ಕೊಲೆ ಪ್ರಕರಣ ಹೆಚ್ಚಳ; ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ವಿಫಲ-ಬಸವರಾಜ ಭಂಡಾರಿ.                                                                                            ಜಯ ಧ್ವಜ ನ್ಯೂಸ್, ರಾಯಚೂರು,ಆ.22-  ಜಿಲ್ಲೆಯಲ್ಲಿ ಕೊಲೆ ಪ್ರಕರಣ ಹೆಚ್ಚಳವಾಗಿದ್ದು  ನಿಯಂತ್ರಣ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಬಹುಜನ ಸಮಾಜ ಪಕ್ಷ ರಾಜ್ಯ ಕಾರ್ಯದರ್ಶಿ ಬಸವರಾಜ ಭಂಡಾರಿ ಆರೋಪಿಸಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಮೂವರು ದಲಿತರ ಕಗ್ಗೊಲೆಗಳಾಗಿವೆ ಅಪರಾಧಿಗಳಿಗೆ ಕಾನೂನು ಭಯವಿಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಾತಾವರಣವಿದೆ ಎಂದು ದೂರಿದರು. ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ‌ ದೊರೆಯುತ್ತಿದೆ ಅಲ್ಲದೆ ಗಾಂಜಾ ಹಾವಳಿಯಿಂದ ಯುವಕರು ನಶೆಯಲ್ಲಿ ಉನ್ಮತ್ತ ರಾಗಿ ಕೊಲೆ ,ಅತ್ಯಾಚಾರದಂತ ಪ್ರಕರಣ ಹೆಚ್ಚಾಗಲು ಪ್ರೇರೇಪಣೆ ನೀಡುತ್ತಿವೆ‌ ಎಂದರು. ಕಾನೂನು ಬಾಹಿರವಾಗಿ ಮದ್ಯದಂಗಡಿಗಳು ತಲೆಯತ್ತುತ್ತಿದ್ದು ಸರ್ಕಾರ ಅ...
Image
  ಯುವತಿ ಕೊಲೆ ಪ್ರಕರಣ: ಕಠಿಣ ‌ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಧರ್ಮಸಿಂಗ್ ‌ಸೂಚನೆ ಜಯ‌ ಧ್ವಜ ನ್ಯೂಸ್ ,ರಾಯಚೂರು. ಆ. 21- ರಾಯಚೂರು ಜಿಲ್ಲೆಯ ‌ಸಿರವಾರ ಪೊಲೀಸ್ ಠಾಣೆ‌ ವ್ಯಾಪ್ತಿಯ ಹೊಕ್ರಾಣಿಯಲ್ಲಿ  ಅಶ್ವಿನಿ ಎಂಬ ಯುವತಿಯ ಕೊಲೆ‌ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಅಜಯ್ ಧರ್ಮ  ಸಿಂಗ್ ರವರು ತಿಳಿಸಿದ್ದಾರೆ. ಈ ದುರದೃಷ್ಟಕರ ಘಟನೆಯ ವಿಷಯ ತಿಳಿಯುತ್ತಿದಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆಗೆ ತಕ್ಷಣವೇ ದೂರವಾಣಿ ಮುಖಾಂತರ ಮಾತನಾಡಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದು. ಈಗಾಗಲೇ ಪ್ರಕರಣ ದಾಖಲಾಗಿದ್ದು ಮೂರು ಆರೋಪಿಗಳನ್ನು ಬಂದಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಈ ಪ್ರಕರಣವು ಅತ್ಯಂತ ಅಮಾನವೀಯ ಘಟನೆಯಾಗಿದ್ದು. ಇದರಲ್ಲಿ ಯಾರೇ ತಪ್ಪು ಮಾಡಿದರು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ಥ ಯುವತಿಯ ಪಾಲಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಯುವತಿ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು. ಸರ್ಕಾರ ಸದಾ ಕಾಲ ಈ ಸಂಕಷ್ಟದಲ್ಲಿರುವವರ ಬೆಂಬಲಕ್ಕಿದೆ. ದುಷ್...
Image
    ರಾಯಚೂರಲ್ಲಿ   ರಾಜ್ಯಮಟ್ಟದ  ಪತ್ರಕರ್ತರ  ಸಮ್ಮೇಳನ ಯಶಸ್ವಿಗೆ ಸಂಪೂರ್ಣ ಸಹಕಾರ: ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಸಿಂಗ್ ಭರವಸೆ   ಜಯ ಧ್ವಜ ನ್ಯೂಸ್ ,ರಾಯಚೂರು,ಆ.21 - ಮಂಬರುವ ದಿನಗಳಲ್ಲಿ ರಾಯಚೂರಿನಲ್ಲಿ ನಡೆಯಲಿರುವ 41ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ತಿಳಿಸಿದರು.        ಬೆಂಗಳೂರಿನಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದಲ್ಲಿ ಭೇಟಿಯಾದ ರಾಯಚೂರು ಜಿಲ್ಲೆಯ ಪತಕರ್ತರ ಜೊತೆ ಸಮ್ಮೇಳನ ಪೂರ್ವಭಾವಿಯಾಗಿ ಮಾತುಕತೆ ನಡೆಸಿದರು. ರಾಯಚೂರಿನಲ್ಲಿ ಸಮ್ಮೇಳನ ನಡೆಯುತ್ತಿರುವುದು ಬಹಳ ಖುಷಿಯ ವಿಚಾರ. ಸಮ್ಮೇಳನದ ಎಲ್ಲಾ ಸಿದ್ಧತೆಗಳನ್ನು ಶೀಘ್ರದಲ್ಲಿ ಆರಂಭಿಸುವ ಕುರಿತು ಸಭೆ ನಡೆಸಲಾಗುವುದು. ಸಮ್ಮೇಳನದ ಎಲ್ಲಾ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ನಿರ್ವಹಿಸೋಣ. ಎಲ್ಲರ ಸಹಕಾರದೊಂದಿಗೆ ಒಗ್ಗೂಡಿ  ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.   ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಕಳೆದ ಬಾರಿ ಬೀದರ್ ನಲ್ಲಿ ನಡೆದ 40ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಯಶಸ್ವಿಯಾಗಿದ್ದು, ರಾಯಚೂರಿನಲ್ಲಿ ಕೂಡ ಅದ್ದೂರಿಯಾಗಿ ಸಮ್ಮೇಳನ ನಡೆಸಬೇಕಿದೆ. ಸಮ್ಮೇಳನಕ್ಕೆ ಈಗಿನಿಂದಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂ...
Image
  ಜಿಲ್ಲೆಯಲ್ಲಿಯೇ ಏಮ್ಸ್ ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಿಸಿದ ಎನ್ಎಸ್ ಬೋಸರಾಜು ಜಯ ಧ್ವಜ ನ್ಯೂಸ್ ,ರಾಯಚೂರು,ಆ.21- ಜಿಲ್ಲೆಯ ನೀರಾವರಿ, ತುಂಗಭದ್ರಾ ಜಲಾಶಯ ಪ್ರದೇಶದ ಸಮಸ್ಯೆಗಳು ಹಾಗೂ ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಸ್ಥಾಪನೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರು ವಿಧಾನ ಪರಿಷತ್‌ನಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು. ತುಂಗಭದ್ರಾ ಜಲಾಶಯದ ಕೆಳಭಾಗದಲ್ಲಿ ಪ್ರವಾಹ ನಿಯಂತ್ರಣ ಹಾಗೂ ಕಾಲುವೆಗಳ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಬೋಸರಾಜು ಅವರು ಮಾಹಿತಿ ಕೋರಿದರು. ಇದಕ್ಕೆ ಉತ್ತರಿಸಿದ ಸರ್ಕಾರ, ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ಕಾಲುವೆಗಳಲ್ಲಿನ ಹಳೆಯ ಹಾಗೂ ಹಾನಿಗೊಳಗಾದ ರಚನೆಗಳ ದುರಸ್ತಿ ಮತ್ತು ಬಲವರ್ಧನೆ ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಪರಿಶೀಲನೆ ಹಾಗೂ ಅನುಮೋದನಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಸರ್ಕಾರ ತಿಳಿಸಿದೆ. ರಾಯಚೂರು ಜಿಲ್ಲೆಯ ನೀರಾವರಿ ಯೋಜನೆಗಳ ವೆಚ್ಚ ಹಾಗೂ ಯೋಜನೆಗಳ ಪ್ರಗತಿ ಕುರಿತೂ ಬೋಸರಾಜು ಅವರು ಪ್ರಶ್ನಿಸಿದರು. ವಿವಿಧ ಯೋಜನೆಗಳ ಕಾಮಗಾರಿಗಳ ಪ್ರಗತಿ ಹಾಗೂ ಅಂದಾಜು ವೆಚ್ಚದ ಕುರಿತು ಸರ್ಕಾರ ಸದನಕ್ಕೆ ಮಾಹಿತಿ ನೀಡಿದೆ. ರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆಗೆ ಒತ್ತು ಇದೇ ವೇಳೆ ರಾಯಚೂರು ನಗರದಲ್ಲಿ ಅಖಿಲ ...
Image
  ಹೊಕ್ರಾಣಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದ ರವಿ ಬೋಸರಾಜು ಎನ್ಎಸ್ ಬೋಸರಾಜು,  ಹಂಪಯ್ಯ ನಾಯಕರಿಂದ ಸಂತ್ರಸ್ತ ಕುಟುಂಬಕ್ಕೆ ₹2 ಲಕ್ಷ ರೂ. ನೆರವು ಜಯ ಧ್ವಜ ನ್ಯೂಸ್ ,ರಾಯಚೂರು,ಆ.20- ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾರೆ ಎನ್ನಲಾದ ಯುವತಿಯ ಕುಟುಂಬಕ್ಕೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಮತ್ತು ಶಾಸಕ ಹಂಪಯ್ಯ ನಾಯಕ್ ಅವರ ಪರವಾಗಿ ಕಾಂಗ್ರೆಸ್ ರಾಜ್ಯ ಯುವ ಮುಖಂಡ ರವಿ ಬೋಸರಾಜು ಅವರು ₹2 ಲಕ್ಷ ಆರ್ಥಿಕ ನೆರವು ನೀಡಿದರು. ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎನ್.ಎಸ್. ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ್ ಅವರು ಖುದ್ದಾಗಿ ಗ್ರಾಮಕ್ಕೆ ಬರಲು ಸಾಧ್ಯವಾಗದ ಕಾರಣ, ಪ್ರಕರಣ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಪರವಾಗಿ ರವಿ ಬೋಸರಾಜು ಅವರು ಒಕ್ರಾಣಿ ಗ್ರಾಮಕ್ಕೆ ತೆರಳಿ ಸಂತ್ರಸ್ತ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದರ ಅವರು, “ಅಶ್ವಿನಿ ಅವರ ಕುಟುಂಬದ ನೋವು ಮತ್ತು ದುಃಖವನ್ನು ಅರ್ಥಮಾಡಿಕೊಳ್ಳುವುದು ಕಷ್ಟ  ಆ ಭಗವಂತ ಅಶ್ವಿನಿ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ.“ಅಶ್ವಿನಿ ಸಾವಿಗೆ ನ್ಯಾಯ ದೊರಕಬೇಕು. ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ...