ಮೇಘಾಲಯ ರಾಜ್ಯದ ಶಿಲಾಂಗ್ ನಲ್ಲಿ ಅಧ್ಯಯನ ಪ್ರವಾಸ ಶಿಬಿರ ಉದ್ಘಾಟಿಸಿದ ಆಯುಕ್ತ ಜುಬಿನ್ ಮಹೋಪಾತ್ರ.                                              ಜಯ ಧ್ವಜ ನ್ಯೂಸ್ , ರಾಯಚೂರು ,ಆ.20- ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವೈಜ್ಞಾನಿಕ ಹಂದಿ ಸಾಕಾಣಿಕೆ ಪದ್ಧತಿಗಳು,ಆಧುನಿಕ ಶೇಡ್ ನಿರ್ಮಾಣ ಹಾಗೂ ನಿರ್ವಹಣೆ,ಆಹಾರ ಮತ್ತು ಸಂತಾನೋತ್ಪತ್ತಿ ನಿರ್ವಹಣೆ,ಜೈವಿಕ ಸುರಕ್ಷತೆ, ತ್ಯಾಜ್ಯ ನಿರ್ವಹಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಹಲವಾರು ಪದ್ಧತಿಗಳನ್ನು ಅಧ್ಯಯನ ಮಾಡಿ ಉತ್ತೇಜಿಸುವ ನಿಟ್ಟಿನಲ್ಲಿ ಮೇಘಾಲಯ ರಾಜ್ಯದ ಶಿಲ್ಲಾಂಗ್ ಅನುಸರಿಸಲಗುತ್ತಿರುವ ಪದ್ಧತಿಯ ಅಧ್ಯಯನ ಕುರಿತು ಆ.19 ರಿಂದ 23 ರ ವರೆಗೆ ನಡೆಯಲಿರುವ ತರಬೇತಿ ಶಿಬಿರವನ್ನು ಮಾನ್ಯ ಆಯುಕ್ತರಾದ  ಜುಬಿನ್ ಮಹೋಪಾತ್ರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಹಲವು ತಿಂಗಳಗಳ ನಿರಂತರ ಮೇಘಾಲಾಯ ರಾಜ್ಯ ಸರಕಾರ ಕಾರ್ಯದರ್ಶಿಗಳ ಹಾಗೂ ಅಧಿಕಾರಿಗಳ ಸಂಪರ್ಕ ಹಾಗೂ ಸಮನ್ವಯದಿಂದಾಗಿ ಈ ತರಬೇತಿಯ ಪೂರ್ಣ ಫಲ ಸಿಗುವ ತರಬೇತಿಯಲ್ಲಿ ವಿನೂತನ ಪದ್ಧತಿಗಳ ಅರಿವು ಪಡೆದು ಇಂತಹ ಪದ್ಧತಿಗಳನ್ನು ನಮ್ಮ ಮಹಾನಗರದಲ್ಲಿ ಅಳವಡಿಸುವುದಲ್ಲದೆ ರಾಜ್ಯದ ಇನ್ನಿತರ ಜಿಲ್ಲೆಗಳಿಗೆ ಮಾದರಿಯಾಗುವುದು ಹಾಗೂ ಮಾರ್ಗದರ್ಶನ ನೀಡುವುದು ಎಂದು ಅಭಿಪ್ರಾಯ ಪಟ್ಟರು.


ಈ ತರಬೇತಿಯಲ್ಲಿ ಜಿಲ್ಲಾ ಪಶು ವೈದ್ಯರು ಹಾಗೂ ತಂಡ, ಮಹಾನಗರ ಪಾಲಿಕೆಯ ಆಡಳಿತಧಿಕಾರಿಗಳಾದ ಶ್ರೀ ಕೃಷ್ಣ ಶಾವಂತಗೆರಿ, ಡೇ- ನಲ್ಮ್ ಸಿಎಓ ಕ್ರಿಷ್ಣಾ  ಕಟ್ಟಿಮನಿ ಹಾಗೂ ನೈರ್ಮಲ್ಯ ನಿರೀಕ್ಷಿಕರಾದ ಹನುಮಂತ ಜಗಲಿ , ಪಶು ವೈದ್ಯಾಧಿಕಾರಿ ಶ್ರೀ ನಿವಾಸ ಕುಲಕರ್ಣಿ  ಹಾಗೂ ನಗರದ ಹಂದಿ ಸಾಕಾಣಿಕೆದಾರರು ಹಾಗೂ ವಿವಿಧ ರಾಜ್ಯದ ಪ್ರತಿನಿಧಿಗಳು ಉಪಸ್ಥಿತರಿದ್ದರು..

Comments