ಪಾದಯಾತ್ರೆ ಪ್ರಶ್ನಿಸಿದ್ದ ಮುಖ್ಯಮಂತ್ರಿಗೆ ಸವಾಲೆಸೆದ ಬಿಜೆಪಿ ರಾಜ್ಯಾಧ್ಯಕ್ಷ: ದಲಿತರ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು -ಬಿ.ವೈ. ವಿಜಯೇಂದ್ರ . ಜಯ ಧ್ವಜ ನ್ಯೂಸ್ ,ರಾಯಚೂರು , ಸೆ.1- ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟರಿಂದ, ಭ್ರಷ್ಟರಿಗಾಗಿ ಮತ್ತು ಭ್ರಷ್ಟರಿಗೋಸ್ಕರ ನಡೆಯುತ್ತಿರುವ ಸರ್ಕಾರ ಈ ಸರ್ಕಾರ ತೊಲಗುವವರೆಗೆ ಬಿಜೆಪಿ ಹೋರಾಟ ನಿಲ್ಲದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುಡುಗಿದರು . ಅವರಿಂದು ಲಿಂಗಸ್ಗೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ನಡೆಸುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ನೀಡಿದರೆ ಬಿಜೆಪಿ ಹೋರಾಟ ನಿಲ್ಲಿಸುತ್ತದೆ ಎಂದು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ ಬಿಜೆಪಿ ಹೋರಾಟ ನಿಲ್ಲದು. ಈ ಸರ್ಕಾರ ಮನೆಗೆ ಹೋದ ಮೇಲೆಯೇ ಬಿಜೆಪಿ ವಿಶ್ರಮಿಸಲಿದೆ ಎಂದು ಹೇಳಿದರು. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಪೂರ್ತಿ ಹಣ ವಾಪಸ್ ನಿಗಮಕ್ಕೆ ಬಂದ ನಂತರ, ಎಸ್‍ಸಿಟಿ/ಟಿಎಸ್‍ಪಿ ಹಣ ವಾಪಸ್ ದಲಿತರ ಕಲ್ಯಾಣಕ್ಕೆ ವಾಪಸ್ ಬಂದ ನಂತರ, ರಾಜ್ಯದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಕ್ಕೆ ನ್ಯಾಯ ಸಿಗುವವರೆಗೆ, ಅನ್ನದಾತರಿಗೆ ನ್ಯಾಯ ಸಿಗುವವರೆಗೆ ಬಿಜೆಪಿ ನಿರಂತರವಾಗಿ ಹೋರಾಟ ...