Posts

Image
  ಪಹಲ್ಗಾಮ್ ಉಗ್ರರ ಕೃತ್ಯಕ್ಕೆ ಮುಂದಿನ ದಿನಗಳಲ್ಲಿ ದಿಟ್ಟ ಉತ್ತರ -ಶ್ರೀ ರಾಮುಲು.                                                                                    ಜಯ ಧ್ವಜ ನ್ಯೂಸ್, ರಾಯಚೂರು,ಏ.23-            ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಗೆ ಭಾರತ ಸರ್ಕಾರ ಮುಂದಿನ ದಿನಗಳಲ್ಲಿ ದಿಟ್ಟ ಉತ್ತರ‌ ನೀಡಲಿದೆ ಎಂದು  ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.                                                      ಅವರಿಂದು ನಗರದಲ್ಲಿ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಾಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿ ಇದೊಂದು ಹೇಯ ಕೃತ್ಯವಾಗಿದ್ದು ಉಗ್ರವಾದವನ್ನು ಮಟ್ಟ ಹಾಕಲು ನಮ್ಮ ಪ್ರಧಾನ ಮಂತ್ರಿಗಳು ಮತ್ತು ಗೃಹ ಸಚಿವರು ಸಮರ್ಥರಿದ್ದು ನಾವೆಲ್ಲರೂ ಅವರಿಗೆ ಬೆಂಬಲವಾಗಿ ನಿಲ್ಲುತ್...
Image
  ಪಹಲ್ಗಾಮ್ ಉಗ್ರರ ಕೃತ್ಯ ಹಿನ್ನೆಲೆ ಜನಾಕ್ರೋಶ ಯಾತ್ರೆ ಮೊಟಕು:                                                      ಕಾಶ್ಮೀರದಲ್ಲಿ ಉಗ್ರವಾದ ಸಮಸ್ಯೆಗೆ ಕಾಂಗ್ರೆಸ್ ಕಾರಣ-ವಿಜಯೇಂದ್ರ.                                                                                      ಜಯಧ್ವಜ ನ್ಯೂಸ್, ರಾಯಚೂರು,ಏ.23-         ಕಾಶ್ಮೀರದಲ್ಲಿ ಇಂದಿನ ಉಗ್ರವಾದ  ಸಮಸ್ಯೆಗೆ ಕಾಂಗ್ರೆಸ್ ಕಾರಣ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಅವರಿಂದು ನಗರದಲ್ಲಿ ಆಯೋಜಿಸಿದ್ದ ಜನಾಕ್ರೋಶ ಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಭಾರತೀಯರಿಗೆ ಸಂತಾಪ ಸೂಚಿಸಿ ಮಾತನಾಡಿದರು. ಕಾಶ್ಮೀರದಲ್ಲಿ ಉಗ್ರವಾದ ಸಮಸ್ಯೆ ನಿವಾರಣೆಯಾಗದೆ ಹಾಗೆ ಉಳಿಯಲು ದೇಶವನ್ನು ಬಹು...
Image
ಪಹಲ್ಗಾಮ್ ಉಗ್ರರ ದಾಳಿ ದುರ್ಘಟನೆ : ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಹಾಯವಾಣಿ ಆರಂಭ ಜಯ ಧ್ವಜ ನ್ಯೂಸ್ ,ರಾಯಚೂರು, ಏ.23- ಜಮ್ಮು ಕಾಶ್ಮೀರದ ಪಹಲ್ಗಾಮ ನ ಮೇಲ್ಭಾಗದಲ್ಲಿರುವ ಬೈಸರನ್ ಹುಲ್ಲುಗಾವಲಿನ ಸುತ್ತಲಿನ ದಟ್ಟ ಕಾಡುಗಳಿಂದ ಹೊರಬಂದ ಭಯೋತ್ಪಾದಕ ಗುಂಪು ಏಪ್ರೀಲ್  22ರಂದು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು  ಜನರನ್ನು ಹತ್ಯೆ ಮಾಡಿದೆ. ಆದ್ದರಿಂದ ರಾಯಚೂರು ಜಿಲ್ಲೆಯಿಂದ ಜಮ್ಮು ಕಾಶ್ಮೀರ ಪ್ರವಾಸಕ್ಕಾಗಿ ತೆರಳಿ, ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗಳ ಅಥವಾ ಸಂಬಂಧಿಕರ ಮಾಹಿತಿಯನ್ನು  ಪೊಲೀಸ್ ಪೊಲೀಸ್ ಕಂಟ್ರೋಲ್ ರೂಮ್: 9480803800, ಡಿಎಸ್‌ಪಿ, ರಾಯಚೂರು ಉಪ ವಿಭಾಗ: 9480803820, ಪಿಐ, ಡಿಸಿಆರ್‌ಬಿ ಘಟಕ, ರಾಯಚೂರು: 9480803809 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.
Image
  ನಗರದಲ್ಲಿ ಎಸ್ಪಿಯವರಿಂದ ಸಿಸಿ ಕ್ಯಾಮೆರಾ ಉದ್ಘಾಟನೆ                                        ಜಯ ಧ್ವಜ ನ್ಯೂಸ್, ರಾಯಚೂರು,ಏ.21-                             ಸದರ್  ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಶೋಕ್ ಡಿಪೋ ಸರ್ಕಲ್ ಹತ್ತಿರ ನಾಲ್ಕು ಕ್ಯಾಮೆರಾಗಳನ್ನು ಹಾಗೂ ಉಸ್ಮಾನಿಯಾ ಮಸೀದಿ ಹತ್ತಿರ ನಾಲ್ಕು ಕ್ಯಾಮೆರಾಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಎಂ.ಪುಟ್ಟಮಾದಯ್ಯ ಉದ್ಘಾಟಿಸಿದರು. ಕಳೆದು ಹೋದ 13 ಮೋಬೈಲ್ ಗಳನ್ನು ಪತ್ತೆ ಹಚ್ಚಿ ಮೋಬೈಲ್ ಮಾಲೀಕರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸಿಪಿಐ ಉಮೇಶ್ ಕಾಂಬ್ಳೆ, ಸೇರಿದಂತೆ ಸದರ್ ಬಜಾರ್ ಪೊಲೀಸ್ ಠಾಣೆ ಸಿಬ್ಬಂದಿಗಳಿದ್ದರು.
Image
ಕೊತ್ತದೊಡ್ಡಿ: ಸ್ವಚ್ಛ ಭಾರತ ಕಾರ್ಯಕ್ರಮ                              ಜಯಧ್ವಜ ನ್ಯೂಸ್ ರಾಯಚೂರು,ಏ.21 -                      ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ವಿ ಎಸ್ ಟಿ ಮತ್ತು ಭವಿಷ್ಯ ಭಾರತ್ ಸಂಸ್ಥೆಯ ವತಿಯಿಂದ  ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದಲ್ಲಿ ಭವಿಷ್ಯ ಭಾರತ್ ಸಂಸ್ಥೆಯ ರಾಯಚೂರಿನ ಸಂಯೋಜಕರಾದ ಎಸ್ ಪಿ ಪರಶುರಾಮ ಅವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಸಂಸ್ಥೆಯ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ನಂತರ ಡಾ. ವನಿತಾ ಅವರು ಸಂಚಾರ ವೈದ್ಯಕೀಯ ವಾಹನದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು ಹಾಗೂ ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೇಳಿದರು. ಈ ಸಂದರ್ಭದಲ್ಲಿ ಕೊತ್ತದೊಡ್ಡಿ ಗ್ರಾಮದ ಮುಖಂಡರಾದ ಉರುಕುಂದಪ್ಪ ,  ಭೂದೆಪ್ಪ ,  ಆಶಾ ಕಾರ್ಯಕರ್ತರು   ಸಾನಿಯಾ ಬೇಗಮ್ ,ಗೀತಾ ,ರೌಫ್ ಸೇರಿದಂತೆ ಕಾರ್ಯಕ್ರಮದಲ್ಲಿ ಒಟ್ಟು 56 ಜನರು ಭಾಗವಹಿಸಿದ್ದರು.
Image
  ಜಾತಿ‌ ಜನಗಣತಿ ಅವೈಜ್ಞಾನಿಕವಾಗಿದೆ:          ಮುನ್ನೂರು ಕಾಪು ಸಮಾಜ ಜನಸಂಖ್ಯೆ ಸುಳ್ಳು ವರದಿ- ಎ.ಪಾಪಾರೆಡ್ಡಿ.                                                        ಜಯ ಧ್ವಜ ನ್ಯೂಸ್ ರಾಯಚೂರು,ಏ.21- ಸರ್ಕಾರ ನಡೆಸಿದ ಜಾತಿ ಜನಗಣತಿ ಅವೈಜ್ಞಾನಿಕವಾಗಿದೆ ಎಂದು ಮಾಜಿ ಶಾಸಕ ಹಾಗೂ ಮುನ್ನೂರು ಸಮಾಜದ ಮುಖಂಡರಾದ ಎ.ಪಾಪಾರೆಡ್ಡಿ ಹೇಳಿದರು. ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಮುನ್ನೂರು ಕಾಪು ಸಮಾಜ ರಾಜ್ಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆಯಿದ್ದು ಅದನ್ನು ಜನಗಣತಿಯಲ್ಲಿ ಉಲ್ಲೇಖಿಸಿಲ್ಲ ಬೀದರ್ , ಕಲಬುರ್ಗಿ, ಯಾದಗಿರಿ , ರಾಯಚೂರು ಜಿಲ್ಲೆಯಲ್ಲಿ ಸುಮಾರು 2 ಲಕ್ಷದಷ್ಟು ಜನ ಸಂಖ್ಯೆಯಿದೆ ನಮ್ಮ ಜನ ಸಂಖ್ಯೆಯ ನಿಖರ ಮಾಹಿತಿ ಒದಗಿಸದೆ ಕೇವಲ ನಾಲ್ಕು ಸಾವಿರ ವೆಂದು ಹೇಳುವುದು ಅಸಮಂಜಸ ವೆಂದ ಅವರು ಜಾತಿ ಗಣತಿ ವೈಜ್ಞಾನಿಕ ರೀತಿಯಲ್ಲಿ ಆಗಿಲ್ಲ ಮನೆ ಮನೆಗೆ ಆಗಮಿಸಿ ದಾಖಲೆ ಸಂಗ್ರಹಿಸಿಲ್ಲ ವಾಸ್ತವಾಂಶ ಮರೆಮಾಚಿ ವರದಿ ಸಿದ್ಧಪಡಿಸಲಾಗಿದೆ ಕುರುಬರ ಜನಸಂಖ್ಯೆಯನ್ನು 46ಲಕ್ಷವೆಂದು ಹೇಳುತ್ತಿದ್ದಾರೆ ಆದರೆ ಇತರ ಸಮಾಜಗಳ ಜನಸಂಖ್ಯೆಯನ್ನೇಕೆ ಕಡಿಮೆಯಂದು ಬಿಂಬಿಸುತ್ತಿದ್ದಾರೆ ಅರ್ಥವಾಗುತ್ತಿಲ್ಲವೆಂದ ಅವರ...
Image
ಜನಿವಾರ ತೆಗೆಸಿದ ಪ್ರಕರಣ ರಾಯರ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥರ ಖಂಡನೆ.                                                                                                                                 ಜಯ ಧ್ವಜ ನ್ಯೂಸ್ ರಾಯಚೂರು,ಏ.20- ಬೀದರ್ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಉಗ್ರವಾಗಿ ಖಂಡಿಸಿದ್ದಾರೆ.  ಜನಿವಾರವೆಂಬುದು ಅದೊಂದು ಪವಿತ್ರವಾದದ್ದು ಬ್ರಾಹ್ಮಣತ್ವದ ಪ್ರತೀಕವಾಗಿದೆ ಜನಿವಾರ ತೆಗೆಸಿದ್ದರಿಂದ ವಿದ್ಯಾ ರ್ಥಿಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದರ ಜೊತೆಗೆ ಧರ್ಮ ವಿರೋಧಿ ನಡೆ ಅನುಸರಿಸಲಾಗಿದ್ದು ಇದೊಂದು ಹೇಯ ಕೃತ್ಯವಾಗಿದ್ದು ಮುಂದೆ ಇದೆ ರೀತಿ‌ ಪುನರಾವರ್ತನೆಯಾದರೆ ಸರ್ಕಾರದ ವಿರುದ್ಧ ಸಮಸ್ತ ಹಿಂದೂಗಳು ...