ಕೊತ್ತದೊಡ್ಡಿ: ಸ್ವಚ್ಛ ಭಾರತ ಕಾರ್ಯಕ್ರಮ                            ಜಯಧ್ವಜ ನ್ಯೂಸ್ ರಾಯಚೂರು,ಏ.21-                      ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ವಿ ಎಸ್ ಟಿ ಮತ್ತು ಭವಿಷ್ಯ ಭಾರತ್ ಸಂಸ್ಥೆಯ ವತಿಯಿಂದ  ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮದಲ್ಲಿ ಭವಿಷ್ಯ ಭಾರತ್ ಸಂಸ್ಥೆಯ ರಾಯಚೂರಿನ ಸಂಯೋಜಕರಾದ ಎಸ್ ಪಿ ಪರಶುರಾಮ ಅವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಸಂಸ್ಥೆಯ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

ನಂತರ ಡಾ. ವನಿತಾ ಅವರು ಸಂಚಾರ ವೈದ್ಯಕೀಯ ವಾಹನದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು ಹಾಗೂ ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೇಳಿದರು.

ಈ ಸಂದರ್ಭದಲ್ಲಿ ಕೊತ್ತದೊಡ್ಡಿ ಗ್ರಾಮದ ಮುಖಂಡರಾದ ಉರುಕುಂದಪ್ಪ ,  ಭೂದೆಪ್ಪ ,  ಆಶಾ ಕಾರ್ಯಕರ್ತರು   ಸಾನಿಯಾ ಬೇಗಮ್ ,ಗೀತಾ ,ರೌಫ್ ಸೇರಿದಂತೆ ಕಾರ್ಯಕ್ರಮದಲ್ಲಿ ಒಟ್ಟು 56 ಜನರು ಭಾಗವಹಿಸಿದ್ದರು.

Comments

Popular posts from this blog