ಶ್ರೀ ಕನಕದಾಸರ ಪುತ್ಥಳಿ ಅನಾವರಣ: ಆಮ್ ಆದ್ಮಿ ಪಕ್ಷದ ಡಾ.ಸುಭಾಷ್‌ಚಂದ್ರರಿಂದ ಮಾಲಾರ್ಪಣೆ
ಶ್ರೀ ಕನಕದಾಸರ ಪುತ್ಥಳಿ ಅನಾವರಣ: ಡಾ.ಸುಭಾಷ್‌ಚಂದ್ರರಿಂದ ಮಾಲಾರ್ಪಣೆ
ರಾಯಚೂರು,ಆ.೨೯-ರಾಯಚೂರು ನಗರದ ನೂತನ ಶ್ರೀಕನಕ ವೃತ್ತದಲ್ಲಿ ದಾಸ ಶ್ರೇಷ್ಠ ಶ್ರೀ ಕನಕದಾಸರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಆಮ್ ಆದ್ಮಿ ಪಕ್ಷದ ರಾಯಚೂರು ಗ್ರಾಮೀಣ ಮತ ಕ್ಷೇತ್ರದ ಆಕಾಂಕ್ಷಿ ಡಾ. ಸುಭಾಷ್‌ಚಂದ್ರ ಸಂಭಾಜಿ ಅವರು ಶ್ರೀ ಕನಕದಾಸರ ಪುತ್ಥಳಿಗೆ ಬೃಹತ್ ಮಾಲಾರ್ಪಣೆ ಮಾಡಿದರು.
ಆರಂಭದಲ್ಲಿ ಅವರು ಗ್ರಾಮೀಣ ಮತ ಕ್ಷೇತ್ರದ ತಮ್ಮ ಆಮ್ಆದ್ಮಿ ಪಕ್ಷದ ಕಛೇರಿಯಿಂದ ನೂರಾರು ಕಾರ್ಯಕರ್ತರ ಬೈಕ್‌ರಾಲಿ ಮೂಲಕ ಶ್ರೀ ಕನಕದಾಸರ ಪುತ್ಥಳಿ ಅನಾವರಣ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಡಿ.ವೀರೇಶ್, ಕೆ.ಭೀಮಣ್ಣ ಸಂಗವಾರ, ಸಾಬಣ್ಣ ಗಟ್ಟುಬಿಚ್ಚಾಲಿ,ರತ್ನಾಕರ,ಕೃಷ್ಣ ಸೇರಿದಂತೆ ಇನ್ನಿತರರು ಇದ್ದರು.
Comments
Post a Comment