ಕಾಡ್ಲೂರಲ್ಲಿ ಭಕ್ತಿಯಿಂದ ಶ್ರೀ ಹನುಮದವ್ರತ ಆಚರಣೆ                                                ಜಯ ಧ್ವಜ ನ್ಯೂಸ್ , ರಾಯಚೂರು,ಡಿ.2-            ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣ ನದಿ ತೀರಿದ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಮುಖ್ಯಪ್ರಾಣ ದೇವರ, ಸ್ವಯಂಭು ರುದ್ರದೇವರ  ಸನ್ನಿಧಾನದಲ್ಲಿ ಭಕ್ತಿ ಹಾಗೂ ವೈಭವದಿಂದ ಶ್ರೀ ಹನುಮದ್ ವ್ರತ ಕಾರ್ಯಕ್ರಮ ನೆರವೇರಿತು.

 ಬೆಳಿಗ್ಗೆ  ಧ್ವಜಾರೋಹಣ,  ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ  ,ವಿಶೇಷ  ಪೂಜೆ ಹಾಗೂ ಹನುಮದ್ ವ್ರತ ಕಥಾ ಶ್ರವಣ ,  ಶ್ರೀ ವನವಾಸಿ ರಾಮದೇವರಿಗೆ, ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಮುಖ್ಯಪ್ರಾಣ ದೇವರಿಗೆ ಹಾಗೂ ಶ್ರೀ ಸ್ವಯಂಭೂ ರುದ್ರ ದೇವರಿಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.   


      ಪಲ್ಲಕ್ಕಿ ಉತ್ಸವ, ದೀಪೋತ್ಸವ,  ಮಂಗಳಾರತಿ   ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.   

                   ಈ ಕಾರ್ಯಕ್ರಮದಲ್ಲಿ  ಕಾಡ್ಲೂರು ಸಂಸ್ಥಾನದ ರಂಗರಾವ ದೇಸಾಯಿ, ಜಯ ಕುಮಾರ ದೇಸಾಯಿ, ವಿಜಯ ಕುಮಾರ ದೇಸಾಯಿ, ವೆಂಕೋಬಾಚಾರ ಪುರೋಹಿತ ದಾಮೋಧರ ಆಚಾರ ಪುರೋಹಿತ, ಸತ್ಯನಾರಾಯಣ ಆಚಾರ ಕಲ್ಯಾಣಿ, ವಾಸುದೇವಾಚಾರ್ ಕಲ್ಯಾಣಿ, ಅಭಿಷೇಕ ದೇಸಾಯಿ, ಕೃಷ್ಣಾಚಾರ ಸಂಗಮ, ರಾಮಾಚಾರ, ಪ್ರಹ್ಲಾದ್ ಆಚಾರ,ಸುವರ್ಣಬಾಯಿ ದೇಸಾಯಿ, ಅಶ್ವಿನಿ ದೇಸಾಯಿ, ಮಹಾದೇವ, ಸೂಗಪ್ಪ, ಚಂದ್ರು ಸಾಹುಕಾರ, ಶ್ರೀನಿವಾಸ, ಶಿವಪ್ಪ, ನಾಗಪ್ಪ, ಕಾಸಿಂ, ಜಮೀರ   ಸೇರಿದಂತೆ ಅನೇಕರು ಇದ್ದರು.

Comments

Popular posts from this blog