ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ ಯುಕೆಜಿ ಪ್ರಾರಂಭಿಸಲು ಒತ್ತಾಯಿಸಿ ಮಾರ್ಚ್ 23 ರಿಂದ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳು ಬಂದ್ - ಹೆಚ್ .ಪದ್ಮಾ
ಜಯ ಧ್ವಜ ನ್ಯೂಸ್ , ರಾಯಚೂರು ,ಮಾ.20- ಶಿಕ್ಷಣ ಇಲಾಖೆ ಯಿಂದ ಪ್ರಾರಂಭಿಸಿದ ಎಲ್ ಕೆ ಜಿ ಯುಕೆಜಿ ರದ್ದು ಪಡಿಸಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ ಯುಕೆಜಿ ಪ್ರಾರಂಭಿಸಲು ಒತ್ತಾಯಿಸಿ ಮಾರ್ಚ್ 23 ರಿಂದ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರ ಬಂದ್ ಮಾಡಿ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷೆ ಹೆಚ್ .ಪದ್ಮಾ ತಿಳಿಸಿದ್ದಾರೆ
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಸತತವಾಗಿ ಹೋರಾಟ ನಡೆಸಿ ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗಳಾಗಿ ಪರಿವರ್ತಿಸಲು ಒತ್ತಾಯಿಸಲಾಗುತ್ತಿದ್ದರು ಸರ್ಕಾರವು ಅದಕ್ಕೆ ಸ್ಪದಿಸದೇ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ.ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿದು ಕೂಡಲೇ ಅದನ್ನು ಕೈ ಬಿಟ್ಟು ಅಂಗನವಾಡಿ ಕೇಂದ್ರಗಳಲ್ಲೇ ಎಲ್ ಕೆಜಿ -ಯುಕೆಜಿ ಪ್ರಾರಂಭಿಸಲು ಮತ್ತು ಎಫ್ ಆರ್ ಎಸ್ ( ಫೇಸ್ ಕ್ಯಾಪ್ಚರ್) ಪದ್ದತಿ ಕೈಬಿಡಲು.ಇವತ್ತಿನ ಬೆಲೆ ಏರಿಕೆ ಅನುಗುಣವಾಗಿ ಕನಿಷ್ಟ ವೇತನ 36000 ಜಾರಿಗೆ.ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ಪದಾರ್ಥಗಳು ಸ್ಥಳೀಯ ಮತ್ತು ಪ್ರಾದೇಶಿಕ.ಆಹಾರವನ್ನು ಪೂರೈಸಲು.ಮತ್ತು ಎಲ್ಲಾ ನೌಕರರಿಗೆ ಇಎಸ್ಐ ಪಿಎಫ್ ನೀಡಲು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ರಾಜ್ಯ ಮಟ್ಟದಲ್ಲಿ ಮಾರ್ಚ್ 23 ರಿಂದ ಬೆಂಗಳೂರಿನ ಫ್ರೀಡಮ್ ಪಾರ್ಕ್ ನಲ್ಲಿ ಅನಿರ್ದಿಷ್ಟ ಹೋರಾಟ ನಡೆಯಲಿದೆ.
ಅದ್ದರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ನೌಕರರು ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಬೆಂಗಳೂರು ಚಲೋ ಹೋರಾಟದಲ್ಲಿ ಭಾಗವಹಿಸಬೇಕು ಮತ್ತು ಈ ಹೋರಾಟದ ಯಶಸ್ವಿಗೆ ಮಕ್ಕಳ ಪಾಲಕರು ಬೆಂಬಲಿಸಿ ಹೋರಾಟ ಮುಗಿಯುವರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಸದಿರಲು ಪ್ರಕಟಣೆ ಮೂಲಕ ಮನವಿ ಮಾಡಲಾಗಿದೆ.

Comments
Post a Comment