ಶ್ರೀಗಿರಿ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 52 ನೇ ಶರಣ ಚಿಂತನ ಶಿವಾನುಭವ ಗೋಷ್ಠಿ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಹೆಣ್ಣು ಸಂಸಾರದ ಕಣ್ಣಾಗಬೇಕು- ಅನಿತಾ ಹಿರೇಮನಿ
ಜಯ ಧ್ವಜ ನ್ಯೂಸ್ , ರಾಯಚೂರು, ಮಾ.23- ನಗರದ ಮಾರುತಿ ನಗರ ಬಡಾವಣೆಯಲ್ಲಿ ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ 52 ನೇ ಶರಣ ಚಿಂತನ ಶಿವಾನುಭವ ಗೋಷ್ಠಿ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಅನಿತಾ ಹಿರೇಮನಿ ರವರು ಸುಂದರ ಪರಿಸರದಲ್ಲಿ ದೇವಸ್ಥಾನ ನಿರ್ಮಿಸಿ 52ನೇ ಶರಣ ಚಿಂತನ ಗೋಷ್ಠಿ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಹಿಳೆಯರಿಗೆ ಪ್ರೋತ್ಸಾಹಿಸುತ್ತಾ ಬರುತ್ತಿರುವುದು ತುಂಬ ಶ್ಲಾಘನೀಯವಾಗಿದೆ. 12ನೇ ಶತಮಾನದ ಬಸವಣ್ಣ ರಾದಿಯಾಗಿ ಅಕ್ಕಮಹಾದೇವಿ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ಇನ್ನಿತರ ಶರಣೆಯರು ಗಂಡು ಹೆಣ್ಣು ಬೇದಭಾವವಿಲ್ಲದೆ ಅನೇಕ ವಚನಗಳನ್ನು ರಚಿಸಿದ್ದಾರೆ.ಸಂಸಾರದಲ್ಲಿ ಮಹಿಳೆ ಬೆಳಿಗ್ಗೆಯಿಂದ ರಾತ್ರಿ ವರೆಗೆ ಸಂಸಾರದ ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ನಿಸ್ವಾರ್ಥವಾಗಿ ಕುಟುಂಬದ ಏಳ್ಗೆಗಾಗಿ ಹಗಲಿರಲು ದುಡಿಯುತ್ತಿದ್ದಾಳೆ ಅಷ್ಟೇ ಅಲ್ಲ ಇಂದಿನ ವಿದ್ಯಾವಂತ ಮಹಿಳೆಯರು ಪುರುಷರ ಸರಿಸಮವಾಗಿ ಅನೇಕ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದ್ದಾಳೆ ಮಕ್ಕಳಿಗೆ ಸಮಾಜದಲ್ಲಿ ಬದುಕಲು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೊಡುವುದು ಅವಶ್ಯವಾಗಿದೆ . ಇಂದಿನ ಯುವ ಜನರು ತಪ್ಪು ದಾರಿ ಹಿಡಿಯುತ್ತಿರುವುದಕ್ಕೆ ಕಾರಣಗಳನ್ನು ತಾಯಂದಿರು ಹುಡುಕಬೇಕಾಗಿದೆ ಮಕ್ಕಳನ್ನು ಸರಿ ದಾರಿಗೆ ತರಲು ಶ್ರಮಿಸಿ ಉತ್ತಮ ಪ್ರಜೆಗಳನ್ನಾಗಿ ಸಮಾಜಕ್ಕೆ ನೀಡಬೇಕೆಂದು ಕರೆ ನೀಡಿದರು .
ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ ಶರಣರ ಚಿಂತನೆಗಳನ್ನು ಬಿತ್ತುತ್ತಾ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಕಾರ್ಯಕ್ರಮಗಳು ಸಹಕಾರಿಯಾಗಿವೆ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಮಹಿಳೆಯರಿಗೆ ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಡಾ ಅರುಣಾ ಹಿರೇಮಠ ಇವರು ಆಧುನಿಕ ಮಹಿಳೆ ಮತ್ತು ಸ್ವಾತಂತ್ರ್ಯ ವಿಷಯದ ಕುರಿತು ಮಾತನಾಡುತ್ತಾ ಆಧುನಿಕ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ ತನ್ನ ಕುಟುಂಬ ಮತ್ತು ಉದ್ಯೋಗ ಎರಡು ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಹಿಳೆಯರು ನಿರ್ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.ಇಂದಿನ ಆಧುನಿಕ ಮಹಿಳೆಯರು ಗಂಡನ ಮನೆಯಲ್ಲಿ ಅತ್ತೆ ಮಾವಂದಿರನ್ನು ತಮ್ಮ ಸ್ವಂತ ತಂದೆ ತಾಯಿಯಂತೆ ಕಾಣುವುದು ತುಂಬ ಅವಶ್ಯವಾಗಿದೆ. ಅತ್ತೆ ಕೂಡ ತನ್ನ ಮಗಳನ್ನು ಪ್ರೀತಿಸಿದಂತೆ ಸೊಸೆಯನ್ನು ಪ್ರೀತಿಸಿದಾಗ ಮಾತ್ರ ಸುಂದರ ಸಂಸಾರವಾಗುತ್ತದೆ ಈ ನಿಟ್ಟಿನಲ್ಲಿ ಅನೇಕ ಶರಣೆಯರು ಅನೇಕ ವಚನಗಳ ಮೂಲಕ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ತನ್ನ ಜವಾಬ್ದಾರಿಯನ್ನು ಅರಿತು ನಡೆಯುವುದರಿಂದ ಸುಖ ಸಂಸಾರವನ್ನು ನಡೆಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು ಕಳೆದ ನಾಲ್ಕು ವರ್ಷಗಳಿಂದ ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆನ್ನು ಹಮ್ಮಿಕೊಳ್ಳುವ ಮೂಲಕ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ಹಿಂದುಳಿದ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಾದ ಸುನೀತಾ ಘಟಕಾಂಬಳೆ ಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಬಾಲ್ಯ ವಿವಾಹಗಳು ಇನ್ನೂ ಸಮಾಜದಲ್ಲಿ ನಡೆಯುತ್ತಿರುವುದನ್ನು ಕಾಣುತ್ತೇವೆ ಹೆಣ್ಣಿಗೆ ಕನಿಷ್ಠ 18 ವರ್ಷ ಗಂಡಿಗೆ ಕನಿಷ್ಠ 21 ವರ್ಷ ಇರಬೇಕು ಎಂಬ ನಿಯಮವಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿಗಳು ನಡೆಯುತ್ತಿವೆ ನಮ್ಮ ಸುತ್ತ ಮುತ್ತ ಇಂಥ ನಡೆಯುತ್ತಿರುವ ಬಾಳಿ ವಿವಾಹ ತಡೆಯಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು. ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಈಶ್ವರಿ ವಿಶ್ವ ವಿದ್ಯಾಲಯ ಸಂಚಾಲಕರು ರಾಜಯೋಗಿನಿ ಸ್ಮಿತಾ ಅಕ್ಕನವರು ಮಾತನಾಡುತ್ತಾ ಪ್ರತಿ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ ಮಾಡುತ್ತ ಬರುತ್ತಿರುವುದು ಶ್ಲಾಘನೀಯ ಯಾವ ಮನೆಯಲ್ಲಿ ಮಹಿಳೆಯರಿಗೆ ಗೌರವ ಇಲ್ಲವೋ ಅಂಥ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ ಆದ್ದರಿಂದ ಮಹಿಳೆಯರನ್ನು ಗೌರವದಿಂದ ಕಾಣುವುದು ಅತ್ಯಂತ ಅವಶ್ಯವಾಗಿದೆ ಮಹಿಳೆಯರು ತಮ್ಮ ದಿನ ನಿತ್ಯದ ಕೆಲಸದ ಒತ್ತಡದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಬಾರದು ಪ್ರತಿ ದಿನ ಎದ್ದ ಕೂಡಲೇ ಐದು ನಿಮಿಷ ಶಿವನ ಧ್ಯಾನ ಮಾಡಿ ನಮಿಸಿ ದಿನ ನಿತ್ಯದ ಕೆಲಸ ಪ್ರಾಂಬಿಸಿದರೆ ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಮಹಿಳೆ ಮುಖ್ಯ ಪಾತ್ರವನ್ನು ವಹಿಸುತ್ತಾಳೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸತ್ ಪ್ರಜೆಗಳನ್ನಾಗಿ ಮಾಡಿರಿ ಎಂದು ಸಲಹೆ ನೀಡಿದರು.
ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ ಶರಣರ ಚಿಂತನ ಗೋಷ್ಠಿಗಳನ್ನು ಹಮ್ಮಿಕೊಂಡು ಇಂದಿನ ಆಧುನಿಕ ಜೀವನದ ಒತ್ತಡದ ಬದುಕಿನಲ್ಲಿ ಇಂಥ ಚಿಂತನ ಕಾರ್ಯಕ್ರಮಗಳು ಉತ್ತಮ ಜೀವನ ಸಾಗಿಸಲು ಸಹಕಾರಿಯಾಗಬಲ್ಲವು ಇಂಥ ಉತ್ತಮ ಪರಿಸರ, ಉತ್ತಮ ಚಿಂತನೆಗಳು,ಅನ್ನ ದಾಸೋಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಆಶೀರ್ವದಿಸಿದರು. ಶ್ರೀ ಗಿರಿ ಅಭಯ ಮಹಿಳಾ ಮಂಡಳಿ ಅಧ್ಯಕ್ಷರಾದ ಕಮಲಾಕ್ಷಮ್ಮ ವಲ್ಕಂದಿನ್ನಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಬಿ ಬಸವರಾಜ , ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ ಭಾಗವಹಿಸಿದ್ದರು. ನಂತರ ಶ್ರೀಮತಿ ಬಸಮ್ಮ ಚಂದ್ರಶೇಖರ ಪಾಟೀಲ್ ಗೃಹಿಣಿ , ಶ್ರೀಮತಿ ಮಲ್ಲಮ್ಮ ಜೆಸ್ಕಾಂ ಇಲಾಖೆ, ಡಾ ಸುಸ್ಮಿತಾ ವೈದ್ಯಕೀಯ ಕ್ಷೇತ್ರ, ಶ್ರೀಮತಿ ಹನುಮಂತಿ ಜೆಸ್ಕಾಂ ಇಲಾಖೆ ,ಶ್ರೀಮತಿ ಲಕ್ಷ್ಮೀ ವ್ಯಾಪಾರ ಕ್ಷೇತ್ರದಲ್ಲಿ, ಶ್ರೀಮತಿ ಯಲ್ಲಮ್ಮ ಆರೋಗ್ಯ ಇಲಾಖೆ , ಶ್ರೀಮತಿ ಮಾರೆಮ್ಮ ಚಂದಪ್ಪ ನಾಯಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಮತ್ತು ಅನ್ನ ದಾಸೋಹಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಮೇಲೆ ಅನ್ನ ದಾಸೋಹಿಗಳ ಸಂಯೋಜಕರಾದ ಶ್ರೀಮರಿ ತಾಯಮ್ಮ ಪಾಪಣ್ಣ ಉಪಸ್ಥಿತರಿದ್ದರು. ಶ್ರೀಮತಿ ಶಾರದಾ ಕರಿಬಸವ
ಪ್ರಾಸ್ತಾವಿಕವಾಗಿ ಮಾತನಾಡಿದರು,
ಶ್ರೀಮತಿ ಮೇಘಾ ನವೀನ ಕುಮಾರ ಕಾರ್ಯಕ್ರಮ ನಿರೂಪಿಸಿದರು.
ಪ್ರಾರ್ಥನೆಯನ್ನು ಶ್ರೀ ಮರಿಲಿಂಗಪ್ಪ ಮಡಿವಾಳ ಮಾಡಿದರು . ಸ್ವಾಗತವನ್ನು ಡಾ ಉಮಾ ಅಶೋಕ ಮಾಡಿದರು, ಕೊನೆಯಲ್ಲಿ ಶ್ರೀಮತಿ ಶಾರದಾ ವಿನೋದ ವಂದಿಸಿದರು.
ಕಾರ್ಯಕ್ರಮದಲ್ಲಿ ಮಾರುತಿ ನಗರ ಬಡಾವಣೆಯ ನಾಗರಿಕರು ಮಹಿಳೆಯರು ವಿದ್ಯಾರ್ಥಿಗಳು ವಾಕಿಂಗ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು .


Comments
Post a Comment