ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ತಾರಾನಾಥ ಶಿಕ್ಷಣ ಸಂಸ್ಥೆಯಿಂದ ನೂರಕ್ಕೂ ಅಧಿಕ ಸಿಬ್ಬಂದಿಗೆ ಉಚಿತ ಗೋಧಿ ವಿತರಣೆ 


ಜಯ ಧ್ವಜ ನ್ಯೂಸ್  ,ರಾಯಚೂರು, ಮಾ.20- ನಗರದ  ತಾರಾನಾಥ ಶಿಕ್ಷಣ ಸಂಸ್ಥೆಯ ವತಿಯಿಂದ  ಪ್ರತಿವರ್ಷದಂತೆ ಈ ವರ್ಷವೂ ನೂತನ ಸಂವತ್ಸರ ಯುಗಾದಿ ಹಾಗೂ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮಾನವೀಯತೆ ಮತ್ತು ಸಹಭಾಗಿತ್ವದ ಸಂಕೇತವಾಗಿ ವಿಶೇಷ ಕಾರ್ಯಕ್ರಮವನ್ನು ಚನ್ನಬಸಮ್ಮ.ಎಂ ನಾಗಪ್ಪ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಯಿತು. 

ಸಂಸ್ಥೆಯ ಅಧೀನದಲ್ಲಿರುವ ಎಲ್ಲಾ ಶಾಲಾ ಮತ್ತು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಕ್ಕೂ ಅಧಿಕ ಡಿ ಗ್ರೂಪ್ ನೌಕರರಿಗೆ ಸಂಸ್ಥೆಯ ಅಧ್ಯಕ್ಷರಾದ  ಪಾರಸಮಲ್ ಸುಖಾಣಿ  ಅವರು ಪ್ರತಿಯೊಬ್ಬರಿಗೂ ೩೫ ಕೆಜಿ ಗೋಧಿಯನ್ನು ಉಚಿತವಾಗಿ ವಿತರಿಸಿದರು. ಈ ಉಪಕ್ರಮವು ಸಿಬ್ಬಂದಿಯ ಆರ್ಥಿಕ ಭದ್ರತೆಗೆ ನೆರವಾಗುವುದರ ಜೊತೆಗೆ ಹಬ್ಬದ ಸಂಭ್ರಮವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿತು. 

ಈ  ಸಂದರ್ಭದಲ್ಲಿ ಚನ್ನಬಸಮ್ಮ ಎಂ ನಾಗಪ್ಪ ಬಾಲಕಿಯರ ಪದವಿಪೂರ್ವ ಕಾಲೇಜಿನ ಚೇರ್‌ಮನ್‌ಗಳಾದ  ಬಸ್ಸಪ್ಪ ತಿಪ್ಪಾರೆಡ್ಡಿ, ತಾರಾನಾಥ ಶಿಕ್ಷಣ ಸಂಸ್ಥೆಯ ಆಡಳಾತಾಧಿಕಾರಿಗಳಾದ  ಎಂ. ವಿರೇಶಪ್ಪ, ಸಿ ಎಂ ಎನ್ ಪ.ಪೂ ಕಾಲೇಜಿನ ಪ್ರಾಚಾರ್ಯರಾದ  ವೆಂಕಟೇಶ ದೊಡ್ಡಮನಿ, ಎಸ್ ಎಸ್ ಆರ್ ಜಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ  ಪೂಜೀತಾ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. 

ಸಂಸ್ಥೆಯ ಈ ಸಾಮಾಜಿಕ ಹೊಣೆಗಾರಿಕೆಯ ಕಾರ್ಯಕ್ಕೆ ಸಿಬ್ಬಂದಿ ಕೃತಜ್ಞತೆ ವ್ಯಕ್ತಪಡಿಸಿ ಹಬ್ಬದ ಸಂದರ್ಭದಲ್ಲಿ ಇಂತಹ ಸಹಾಯವು ತುಂಬ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. 


Comments

Popular posts from this blog