ತುಂಗಭದ್ರಾ ಎಡದಂಡೆ ನಾಲೆ ಒಡೆದಿದ್ದರಿಂದ ರೈತರಲ್ಲಿ ಆತಂಕ: ಎರೆಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಂಡ ನಾಲೆ- ಚಾಮರಸ್ ಮಾಲಿಪಾಟೀಲ. ಜಯ ಧ್ವಜ ನ್ಯೂಸ್ ರಾಯಚೂರು, ಮಾ.24- ತುಂಗಭದ್ರಾ ಎಡದಂಡೆ ನಾಲೆ ಒಡೆದಿದ್ದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಟಿಎಲ್ ಬಿಸಿ ಕಾಲುವೆ ಮೈಲು 13ರಲ್ಲಿ ಒಡೆದಿದ್ದು ರೈತರಲ್ಲಿ ಆತಂಕ ಮೂಡಿಸಿದೆ ಎಂದ ಅವರು ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗೆ ಕುಡಿಯುವ ನೀರಿನ ಸಲುವಾಗಿ ಎರೆಡು ಸಾವಿರ ಕ್ಯೂಸೆಕ್ ನೀರು ಕಾಲುವೆಗೆ ಹರಿಸಿದ ವೇಳೆ ಈ ಘಟನೆ ಜರುಗಿದ್ದು ಒಂದು ವೇಳೆ ನಾಲ್ಕು ಸಾವಿರ ಕ್ಯೂಸೆಕ್ ನೀರು ಹರಿಸಿದ ವೇಳೆ ಕಾಲುವೆ ಎಷ್ಟು ಕಡೆ ಒಡೆಯಬಹುದು ಎಂಬ ಆತಂಕ ಮನೆ ಮಾಡಿದೆ ಎಂದರು.
2010 ರಿಂದ ಇಲ್ಲಿಯವರೆಗೆ ಸುಮಾರು 2 ಸಾವಿರ ಕೋಟಿ.ರೂ. ವೆಚ್ಚದಲ್ಲಿ ನಾಲೆ ಆಧುನೀಕರಣಗೊಂಡ ನಂತರವೂ ಒಡೆದಿದೆ ಎಂದರೆ ಕಾಮಗಾರಿ ಗುಣಮಟ್ಟ ಯಾವ ರೀತಿ ಮಾಡಲಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು. ಕಾಲುವೆ ಗುಣಮಟ್ಟದಲ್ಲಿ ಕಳಪೆಯಾಗಿದೆ ನಾಲ್ಕು ಇಂಚು ಕಾಂಕ್ರೀಟ್ ಬದಲು ಎರೆಡು ಇಂಚು ಕಾಂಕ್ರೀಟ್ ಮಾಡಲಾಗಿದೆ ಎಂದು ದೂರಿದರು. ಜಿಲ್ಲೆಯಲ್ಲಿ ಜೋಳ ಖರೀದಿ ಕೇಂದ್ರಗಳು ತೆರೆದಿದ್ದರೂ ರೈತರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಜೋಳ ಕಾಳುಗಳು ಗುಣಮಟ್ಟದಲ್ಲಿ ಇಲ್ಲವೆಂದು ಹೇಳಿ ಖರೀದಿಗೆ ನಿರಾಕರಣೆ ಮಾಡಲಾಗುತ್ತಿದೆ ಎಂದರು. ಫೇಕ್ ಜಿಪಿಎಸ್ ಮಾಡಲಾಗಿದೆ ಎಂದು ನಾವು ಧ್ವನಿ ಎತ್ತಿದ ನಂತರ ಜಾನೇಕಲ್, ಸಿರವಾರ ಮುಂತಾದ ಭಾಗದಲ್ಲಿ ಜೋಳ ಬೆಳೆಯದ ಜಮೀನುಗಳಲ್ಲಿ ಜೋಳದ ಸೊಪ್ಪೆ ಹರಡಲಾಗುತ್ತಿದೆ ಎಂದರು. ನಗರದಲ್ಲಿ ಪರಿಸರ ಹಾನಿಕಾರಕ ಕೋನೋಕಾರ್ಪಸ್ ಗಿಡಗಳನ್ನು ಬೆಳೆಸಲಾಗುತ್ತಿದೆ ಇದು ವಾತಾವರಣದಲ್ಲಿ ಆಮ್ಲಜನಕ ಸೂಸುವ ಬದಲು ಇಂಗಾಲಡೈಯಾಕ್ಸೈಡ್ ಸೂಸುತ್ತದೆ ಇಂತಹ ಗಿಡಗಳನ್ನು ಬೆಳೆಯದಂತೆ ಸುಪ್ರೀಂ ಕೋರ್ಟ್ ನಿಷೇಧಿಸಿದೆ ನಗರದಲ್ಲಿ ನೆಡಲಾದ ಈ ಗಿಡಗಳನ್ನು ಮಹಾನಗರ ಪಾಲಿಕೆ ತೆರವು ಮಾಡಬೇಕೆಂದರು. ಈ ಸಂದರ್ಭದಲ್ಲಿ ದೇವರಾಜ್ ನಾಯಕ, ಸಿದ್ದಯ್ಯ ಸ್ವಾಮಿ, ಬಸವರಾಜ ಮಾಲಿಪಾಟೀಲ, ಬೂದಯ್ಯ ಸ್ವಾಮಿ, ಮಲ್ಲಣ್ಣ ದಿನ್ನಿ, ಲಕ್ಷ್ಮಣ ಇನ್ನಿತರರು ಇದ್ದರು.


Comments
Post a Comment