ವಿಶ್ವಕರ್ಮರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪಂಜಿನ ಮೆರವಣಿಗೆ
ಜಯ ಧ್ವಜ ನ್ಯೂಸ್ ,ರಾಯಚೂರು, ಮಾ. 26-ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ ರಾಯಚೂರು ಇವರಿಂದ ಬುಧವಾರ ಸಂಜೆ ರಾಯಚೂರು ನಗರದಲ್ಲಿ ವಿಶ್ವಕರ್ಮ ಸಮಾಜದ ಬೇಡಿಕೆಗಳಿಗೆ ಒತ್ತಾಯಿಸಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ನಗರದ ನೇತಾಜಿ ನಗರ ವೃತ್ತದಿಂದ ತೀನ್ ತೀನ್ ಕಂದೀಲ್ ಜಾಕಿರ್ ಹುಸೇನ್ ಸರ್ಕಲ್ ಬಸ್ ನಿಲ್ದಾಣ,ಅಂಬೇಡ್ಕರ್ ವೃತ್ತದ ವರೆಗೆ ರಾತ್ರಿ 9ಗಂಟೆ ವರೆಗೆ ಪಂಜಿನ ಮೆರವಣಿಗೆಯು ನಡೆಯಿತು .ಸಮಾಜದ ಮುಖಂಡರು ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆಗಮಿಸಿದ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.. ಸಮಾಜದ ಪರವಾಗಿ ಸರ್ಕಾರಕ್ಕೆ ಒತ್ತಾಯಿಸಲು ವಿವಿಧ ಘೋಷಣೆಗಳನ್ನು ಹಾಕಿ ಶಾಂತಿಯುತ ಪ್ರತಿಭಟನೆಯನ್ನು ಮಾಡಲಾಯಿತು.
ವಿಶ್ವಕರ್ಮ ಸಮಾಜವನ್ನು ಎಸ್ಟಿಗೆ ಸೇರಿಸಬೇಕು ಕುಲಶಾಸ್ತ್ರ ಅಧ್ಯಯನ ಪುನರ್ ರಚನೆ ಆಗಬೇಕು. ತಿಂಥಣಿ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಆಗಬೇಕು. ಈ ಮೂರು ಸಮಾಜದ ಬೇಡಿಕೆಗಳನ್ನು ಸರಕಾರಕ್ಕೆ ಈಡೇರಿಸುವಂತೆ ಒತ್ತಾಯಿಸಿ ವಿಶ್ವಕರ್ಮ ಸಮಾಜದವರು ಪಂಜನ ಮೆರವಣಿಗೆಯನ್ನು ಮೊದಲ ಬಾರಿಗೆ ಮಾಡಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಜಿಲ್ಲಾಧ್ಯಕ್ಷರಾದ ಮಾರುತಿ ಬಡಿಗೇರ್ ಈ ಹೋರಾಟದ ನೇತೃತ್ವವನ್ನು ವಹಿಸಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬ್ರಹ್ಮ ಗಣೇಶ್. ಸೋಮಣ್ಣ ಸುಕಾಲಪೇಟೆ. ಜಿಲ್ಲಾ ಯುವ ಅಧ್ಯಕ್ಷರಾದ ಸುರೇಶ್ ಸಂಗಾಪುರ್. ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ಉದಯ್ ಕುಮಾರ್ ಮಸ್ಕಿ ಜಿಲ್ಲಾ ಗೌರವಾಧ್ಯಕ್ಷರಾದ ಮಲ್ಲಪ್ಪ ದೇವದುರ್ಗ. ಜಿಲ್ಲೆಯ ಏಳು ತಾಲೂಕಿನ ಅಧ್ಯಕ್ಷರೂ ಪದಾಧಿಕಾರಿಗಳು ಮತ್ತು ಕಾಳಿಕಾ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎ. ಈಶ್ವರ. ವಿಶ್ವಕರ್ಮ ಕಾರ್ಪೆಂಟರ್ ಸಂಘದ ಅಧ್ಯಕ್ಷರಾದ ಬ್ರಹ್ಮಯ್ಯ. ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ವೆಂಕಟೇಶ್ ಅನ್ವರಿ ಮತ್ತು ಮೋನಪ್ಪ ವಡವಾಟಿ ಕೆ ಲಕ್ಷ್ಮಿಪತಿ ಯರಗೇರಾ. ಗಿರಿ ಬಾಬು. ನಾಗರಾಜ ಪತ್ತಾರ. ನರಸಪ್ಪ. ಮನೋಹರ್ ಬಡಿಗೇರ್. ವೀರೇಶ್ ಕಾರಟಗಿ. ಮೌನೇಶ ವಡವಾಟಿ. ಸುರೇಶ ಸಗಮಕುಂಟ. ಪ್ರಕಾಶ ನವೋದಯ ಇನ್ನಿತರರು ಸೇರಿದಂತೆ ಸಾವಿರಾರು ಜನ ಸೇರಿದ್ದರು.




Comments
Post a Comment