ತೈಲ ಸರಬರಾಜಿನಲ್ಲಿ ಅಭಾವ ವದಂತಿ :
  ಪೆಟ್ರೋಲ್ ಪಂಪ್ ಗಳಲ್ಲಿ ಸಾಲುಗಟ್ಟಿದ ವಾಹನಗಳು  
                                                                                                                                                                                                       ಜಯ ಧ್ವಜ ನ್ಯೂಸ್, ರಾಯಚೂರು,ಮಾ.26-                      ಪಶ್ಚಿಮ‌ ಏಷ್ಯಾದಲ್ಲಿ ಯುದ್ಧ ಹಿನ್ನಲೆಯಲ್ಲಿ  ದೇಶದಲ್ಲಿ ತೈಲ ಅಭಾವ ಆತಂಕ ಶುರುವಾದಂತಾಗಿದೆ.          ಪ್ರಾರಂಭಿಕವಾಗಿ ಅನಿಲ ಸಿಲಿಂಡರ್ ಪೂರೈಕೆ ವ್ಯತ್ಯಯ ಉಂಟಾಯಿತು ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ವದಂತಿ ಹಿನ್ನೆಲೆಯಲ್ಲಿ ನಗರದ ಪೆಟ್ರೋಲ್ ಪಂಪ್ ಗಳಲ್ಲಿ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳು ಸಾಲುಗಟ್ಟಿ ನಿಂತಿವೆ.

ನಗರದ ಬಹುತೇಕ ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳು ಸಾಲುಗಟ್ಟಿನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಪಂಪ್ ಗಳಲ್ಲಿ ನೋ ಸ್ಟಾಕ್ ಎಂದು ಹೇಳಿ ಬಂದ್ ಮಾಡಲಾಗಿದೆ.                       

ಮಧ್ಯ ಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಕಾರಣದಿಂದ ಹಾರ್ಮೋಜ್ ಜಲ ಸಂಧಿಯಲ್ಲಿ ಹಡಗುಗಳ ಸಂಚಾರ ನಿರ್ಬಂಧ ಹಿನ್ನೆಲೆ ಜಗತ್ತಿನಾದ್ಯಂತ ತೈಲ ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ  ತೈಲ ಸರಬರಾಜು ಸರಾಗವಾಗಿ ನೆರವೇರದ ಕಾರಣ ಇಂಧನ ಬಿಕ್ಕಟ್ಟು ಎದುರಾಗಿದೆ ಆದ್ದರಿಂದ ದೇಶಾದ್ಯಂತ ಅನಿಲ ಮತ್ತು ಪೆಟ್ರೋಲಿಯಂ ತೈಲೋತ್ಪನ್ನ ಪೂರೈಕೆಯಲ್ಲಿ ಅನಿಶ್ಚಿತತೆ ಉಂಟಾಗಿದೆ ಇದರ ಪರಿಣಾಮ ಪೆಟ್ರೋಲ್ ಡಿಸೇಲ್ ಗೆ ತಟ್ಟಿದೆ ಎನ್ನಲಾಗುತ್ತಿದೆ

ಮತ್ತೊಂದೆಡೆ ಸರ್ಕಾರ ಯಾವುದೇ ತೈಲ ಅಭಾವವಿಲ್ಲ ವಾಹನ ಮಾಲೀಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಮತ್ತು ಅಸುರಕ್ಷಿತವಾಗಿ ತೈಲ ಸಂಗ್ರಹ ಮಾಡಿಕೊಳ್ಳದಂತೆ ಸೂಚನೆ ನೀಡಿದೆ . ಒಟ್ಟಾರೆ ವಾಹನ ಮಾಲೀಕರು ಆತಂಕಕ್ಕೊಳಗಾಗಿರುವದಂತು ಸತ್ಯ.     
                                                                                                                                                               " ವಾಹನ ಮಾಲೀಕರು ಆತಂಕ ಪಡುವ ಅಗತ್ಯವಿಲ್ಲ ಪೆಟ್ರೋಲ್ ಪೂರೈಕೆಯಲ್ಲಿ ಯಾವುದೇ ಅಭಾವವಿಲ್ಲ ಗ್ರಾಹಕರು ವದಂತಿಗಳಿಗೆ ಕಿವಿಗೊಡಬಾರದು.".   -ಗೋವರ್ಧನ ಯಾದವ, ಯಂಕಣ್ಣ ಯಾದವ ಪೆಟ್ರೋಲ್ ಪಂಪ್ , ರಾಯಚೂರು.                                   " ಚೈನ್ನೈನಿಂದ ಮುಂಬೈಗೆ ಹೊರಟಿದ್ದೇನೆ ಇದೀಗ ನನ್ನ ವಾಹನದಲ್ಲಿ ಡಿಸೆಲ್ ಖಾಲಿಯಾಗಿದೆ ಮುಂಬೈ ವರೆಗೂ ಹೋಗುವುದು ಹೇಗೆ ಎಂಬ ಆತಂಕ ಮೂಡಿದೆ.         -ಮೆಹಬೂಬ್, ಲಾರಿ ಚಾಲಕ, ಮುಂಬೈ.

Comments

Popular posts from this blog