ಕಾಡ್ಲೂರಲ್ಲಿ ಶ್ರೀ ರಾಮೋತ್ಸವ ಆಚರಣೆ:                                           ಶ್ರೀ ರಾಮದೇವರ  ಆದರ್ಶ ನಾವೆಲ್ಲರೂ ಪಾಲಿಸೋಣ-  ಶ್ರೀ ವಿದ್ಯಾಕಣ್ವ ವಿರಾಜತೀರ್ಥ  ಶ್ರೀಪಾದಂಗಳವರು.                                                                      ಜಯ ಧ್ವಜ ನ್ಯೂಸ್ ,ರಾಯಚೂರು,ಮಾ.28-          ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ದೇವರ ಆದರ್ಶವನ್ನು ನಾವೆಲ್ಲರೂ ಪಾಲಿಸೋಣವೆಂದು ಕಣ್ವಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರು ನುಡಿದರು.

ಅವರು ಶುಕ್ರವಾರ ರಾಮನವಮಿ ಅಂಗವಾಗಿ ತಾಲೂಕಿನ ಕಾಡ್ಲೂರು ಗ್ರಾಮದ ಶ್ರೀ ಕೃಷ್ಣಾ ನದಿ ತೀರದ ಶ್ರೀವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಶ್ರೀ ಮುಖ್ಯಪ್ರಾಣದೇವರ ಸನ್ನಿಧಾನದಲ್ಲಿ ಶ್ರೀ ರಾಮೋತ್ಸವದಲ್ಲಿ ಸಾನಿಧ್ಯ ವಹಿಸಿದ್ದರು.

ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ್ದ ಅವರನ್ನು ಕಾಡ್ಲೂರು ಸಂಸ್ಥಾನ ಗೌರವಪೂರ್ವಕ ವಾದ್ಯ ವೈಭವದೊಂದಿಗೆ ಪೂರ್ಣ ಕುಂಭದ ಸ್ವಾಗತ ಕೋರಲಾಯಿತು. ನಂತರ ಕೃಷ್ಣಾ ನದಿಯಲ್ಲಿ ದಂಡಕಾಷ್ಟ ಸ್ನಾನ ನೆರವೇರಿಸಿದರು.

ಶ್ರೀ ವನವಾಸಿ ರಾಮದೆವರಿಗೆ, ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಿದರು.

ತದನಂತರ ಶ್ರೀ ವಿಠಲ ಕೃಷ್ಣ ದೇವರ ಸಂಸ್ಥಾನ ಪೂಜೆ, ಶ್ರೀ ರಾಮದೇವರ ತೊಟ್ಟಿಲೋತ್ಸವ ನೆರವೇರಿಸಿ ಅನುಗ್ರಹ ಸಂದೇಶ ನೀಡಿ, ನಾವೆಲ್ಲರೂ ಶ್ರೀ ರಾಮದೇವರ ಆದರ್ಶ ಪಾಲಿಸಬೇಕೆಂದು ಅವರು ಕಾಡ್ಲೂರು ಸಂಸ್ಥಾನ ನಿರ್ಮಿಸಿದ

ಈ ಪುರಾತನ ದೇವಸ್ಥಾನ ಅತ್ಯಂತ ಪ್ರಶಾಂತ ಮತ್ತು ಪಾವನ ಸ್ಥಳವಾಗಿದೆ ಇಲ್ಲಿ ಶ್ರೀ ರಾಮದೇವರು ಆಗಮಿಸಿದ ಕುರುಹುವಾಗಿ ರಾಮದೇವರ ಪಾದುಕೆ ನದಿಯಲ್ಲಿ ಮೂಡಿದೆ ಶ್ರೀ ಉಪೇಂದ್ರ ತೀರ್ಥರಿಂದ ಕರಾರ್ಚಿತವಾಗಿ ಪ್ರತಿಷ್ಟಾಪಿಸಲ್ಪಟ್ಟ ಪ್ರಾಣದೇವರ ಭವ್ಯ ಮೂರ್ತಿಯಿದೆ ಭಕ್ತಾದಿಗಳಿಗೆ ಅನೂಕೂಲವಾಗಲೆಂದು ವಿಶಾಲ ಸಭಾಂಗಣ ಸಹ ನಿರ್ಮಾಣವಾಗಿದ್ದು ಈ ಸ್ಥಳದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸೋಣವೆಂದರು.

ಶ್ರೀ ಪಾದಂಗಳವರಿಗೆ ಕಾಡ್ಲೂರು ಸಂಸ್ಥನದಿಂದ ಭಕ್ತಿಪೂರ್ವಕವಾಗಿ ಗೌರವಿಸಲಾಯಿತು. ಸಕಲ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗವಾಯಿತು.

ಈ ಸಂದರ್ಭದಲ್ಲಿ ರಂಗರಾವ್ ದೇಸಾಯಿ, ಜಯ ಕುಮಾರ್ ದೇಸಾಯಿ, ವಿಜಯ್ ಕುಮಾರ್, ಶ್ರೀ  ನಿವಾಸಮೂರ್ತಿ ಪುರೋಹಿತ, ವೆಂಕೋಬಾಚಾರ ಪುರಾಹಿತ , ದಮೋಧರ ಆಚಾರ ಪುರೋಹಿತ  ,  ಕಲ್ಯಾಣಿ ವಾಸುದೇವಾಚಾರ್, ಅನಂತ ಆಚಾರ ಕೊಪ್ಪರ, ಪ್ರಹ್ಲಾದ್ ಆಚಾರ ಜೋಷಿ, ಸುರೇಶ್ ಕುಲಕರ್ಣಿ, ಅಭಿಷೇಕ ದೇಸಾಯಿ,ಪ್ರಹಲ್ಲಾದ,  ಶ್ರೀನಿವಾಸ,  ಸುವರ್ಣ ಬಾಯಿ ದೇಸಾಯಿ, ಅಶ್ವಿನಿ ದೇಸಾಯಿ, ಅನಿತಾ ಕೊಪ್ಪರ, ಹೇಮಾ ಪುರೋಹಿತ,ಲಕ್ಷ್ಮಿಬಾಯಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Comments

Popular posts from this blog