ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ:
ಶಂಕರಾಚಾರ್ಯರು ಆಧ್ಯಾತ್ಮ ಲೋಕದ ಧರ್ಮೋದ್ದಾರಕರು - ಪ್ರೊ.ಶಿವಾನಂದ ಕೆಳಗಿನಮನಿ
ಜಯ ಧ್ವಜ ನ್ಯೂಸ್ ,ರಾಯಚೂರು,ಏ.೨೧-
ಆತ್ಮಜ್ಞಾನ ಎನ್ನುವುದು ಬ್ರಹ್ಮಜ್ಞಾನವಾಗಿ ಪ್ರತಿಯೊಬ್ಬರಲ್ಲೂ ಇರುವಂತಹದ್ದು ಎಂದು ತೋರಿಸಿಕೊಟ್ಟವರು ಶ್ರೀ ಶಂಕರಾಚಾರ್ಯರು ಭಾರತೀಯ ಧಾರ್ಮಿಕ ಪಂಥದೊಳಗೆ ವಿಶೇಷವಾಗಿ ಗುರುತಿಸಲ್ಪಡುತ್ತಾರೆ. ಮನುಷ್ಯ ಜಾತಿಯಲ್ಲಿ ಹುಟ್ಟಿದ ಪ್ರತಿಯೊಬ್ಬರು ಬ್ರಹ್ಮಜ್ಞಾನ ಹೊಂದಲು ಸಾಧ್ಯ ಎಂದು ಸಂದೇಶ ಸಾರಿದವರು ಶಂಕರಾಚಾರ್ಯರು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಹೇಳಿದರು.
ಅವರಿಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಶ್ರೀ ಆದಿಗುರು ಶಂಕರಾಚಾರ್ಯರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಜೀವಾತ್ಮ ಪರಮಾತ್ಮ ಎನ್ನುವುದರಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಜೀವಾತ್ಮ ಪರಮಾತ್ಮ ಮಧ್ಯೆ ಮಾಯೆ ಮುಸುಕಿಕೊಂಡಿದೆ ಮಾಯೆಯನ್ನು ಬಿಡಿಸಿಕೊಳ್ಳುವ ವ್ಯಕ್ತಿ ಪರಮಾತ್ಮನ ಸನ್ನಿಧಿಗೆ ಹೋಗಬಹುದು ಅಥವಾ ಪರಮಾತ್ಮನಾಗಬಹುದು ಎಂಬ ತತ್ವವನ್ನು ಸಾರಿದವರು ಮತ್ತು ಅಹಂಬ್ರಹ್ಮಾಸ್ಮಿ ಪರಿಕಲ್ಪನೆ ಹೇಳಿದವರು ಶಂಕರಾಚಾರ್ಯರು ಎಂದು ಅವರು ಹೇಳಿದರು.
ಶಂಕರಾಚಾರ್ಯರು ಅತಿ ಕಡಿಮೆ ವಯಸ್ಸಿನಲ್ಲೇ ದೇಶದಾದ್ಯಂತ ಸಂಚರಿಸಿ ಧಾರ್ಮಿಕ ತತ್ವಗಳನ್ನು ಬೋಧಿಸಿ ಭಾತರದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿದ ಕೀರ್ತಿಸಲ್ಲುತ್ತದೆ. ಕರ್ನಾಟಕದ ಶೃಂಗೇರಿಯಲ್ಲಿ ಮಠ ಸ್ಥಾಪನೆ ಮೂಲಕ ಧರ್ಮಪ್ರಚಾರಕ್ಕೆ ಹೊಸ ದಿಕ್ಕು ನೀಡಿದರು. ಭಾರತೀಯ ಧಾನ ಪರಂಪರೆಯಿಂದ ಹಿಡಿದು ಧಾರ್ಮಿಕ ಪರಂಪರೆ, ಆಧ್ಯಾತ್ಮ ಲೋಕದ ಧರ್ಮೋದ್ದಾರಕ ಮತ್ತು ತತ್ವಶಾಸ್ತ್ರ ಹಿನ್ನೆಲೆಯಲ್ಲಿ ಶಂಕರಾಚಾರ್ಯರನ್ನು ಗುರುತಿಸುತ್ತೇವೆ ಇವರು ಶಾಕ್ತ ಪರಂಪರೆಯ ನಿರ್ಮಾಪಕರಾಗಿದ್ದು, ಶಂಕರಾಚಾರ್ಯರ ಪ್ರವೇಶದಿಂದ ದೇವಿಆರಾಧನೆ ವಿಶಿಷ್ಟವಾದ ಬಹುದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿದೆ. ಇವರ ಆಚರಣೆ ನಮ್ಮ ವಿಶ್ವವಿದ್ಯಾಲಯವು ಶ್ಲಾಘನೀಯವಾಗಿ ಆಚರಿಸಲಾಗುತ್ತಿದೆ ಎಂದು ಕುಲಪತಿಗಳು ನುಡಿದರು.
ಈ ಸಂದರ್ಭದಲ್ಲಿ ಕುಲಸಚಿವರಾದ ಡಾ.ಎ.ಚನ್ನಪ್ಪ ಕೆ.ಎ.ಎಸ್., ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್, ಕಲಾ ನಿಕಾಯದ ಡೀನರಾದ ಡಾ.ಲತಾ.ಎಂ.ಎಸ್., ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ ಸ್ವಾಗತಿಸಿ ವಂದಿಸಿದರು.


Comments
Post a Comment