ಸ್ಟೇಶನ್ ರಸ್ತೆಯಲ್ಲಿ ಅಪಘಾತಗಳು ಮುಂದುವರಿಕೆ : ಸಾರ್ವಜನಿಕರಿಂದ ರಿಂಗ್ ರೋಡ್ ಕನವರಿಕೆ. ಜಯ ಧ್ವಜ ನ್ಯೂಸ್ ರಾಯಚೂರು, ಏ.22- ನಗರದ ಸ್ಟೇಶನ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟಿದ್ದು ಸ್ಟೇಶನ್ ರಸ್ತೆ ಸಾವಿನ ದಾರಿಯಾಗಿ ಮಾರ್ಪಡುತ್ತಿದ್ದು ಜನರಲ್ಲಿ ಭಯ ಮೂಡಿಸುತ್ತಿದೆ. ಯಮ ಸ್ವರೂಪಿ ಲಾರಿ ಮತ್ತು ಬೃಹತ್ ವಾಹನಗಳು ಸ್ಟೇಶನ್ ರಸ್ತೆಯಲ್ಲಿ ಸಂಚರಿಸುತ್ತಿದ್ದು ಬಹುಮಹಡಿ ವಾಣಿಜ್ಯ ಮಳಿಗೆಗಳು ಇನ್ನಿತರ ವ್ಯಾಪಾರ ಚಟುವಟಿಕೆಗಳ ಭರಾಟೆಯಿಂದ ಜನ ಮತ್ತು ವಾಹನಗಳಿಂದ ಸದಾ ಗಿಜಿಗುಡುತ್ತಿರುತ್ತದೆ .
ಅಂಗಡಿ ಮುಂಗಟ್ಟುಗಳು ಮುಂದೆ ವಾಹನ ನಿಲುಗಡೆ ಮತ್ತು ಇದೆ ರಸ್ತೆಯಲ್ಲಿ ಲಾರಿ, ಬಸ್ಸು ಮುಂತಾದ ವಾಹನ ಸಂಚಾರದಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿಯಿದೆ ಸಾಯಿಂಕಾಲವಾದರಂತು ಈ ರಸ್ತೆ ಅಕ್ಷರಶಃ ವಾಹನಮಯವಾಗಿರುತ್ತದೆ ಒಂದೆಡೆ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಿರಲಾಗಿರುತ್ತದೆ ಉಳಿದ ಜಾಗದಲ್ಲಿ ನುಸುಳಿಕೊಂಡು ಇತರೆ ವಾಹನಗಳು ಸಂಚರಿಸಬೇಕು ಬೃಹತ್ ವಾಹನಗಳು ಬಂದರಂತೂ ಸಂಚಾರದಟ್ಟನೆ ಏರ್ಪಡುತ್ತಿರುತ್ತೆ ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಕೆಳಗೆ ಬಿದ್ದರೆ ಬಸ್ಸೋ,ಲಾರಿಯೋ ಸವಾರರ ಮೇಲೆ ಹಾಯುದಂತು ನಿಶ್ಚಿತ ಇಷ್ಟೆಲ್ಲ ಅಪಘಾತಗಳು ನಡೆದು ಸಾವು ನೋವಾಗುತ್ತಿದ್ದರೂ ಇದನ್ನು ನಿಯಂತ್ರಿಸಲು ಮಾರ್ಗೋಪಾಯಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಜನ ಪ್ರತಿನಿಧಿಗಳು ಯೋಚಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ ಇನ್ನಾದರೂ ಅಪಘಾತಗಳು ತಡೆಯಲು ರಿಂಗ್ ರೋಡ್ ಬಗ್ಗೆ ಗಂಭೀರ ಚಿಂತನೆ ಮಾಡುವತ್ತ ಸರ್ಕಾರ ಹಾಗೂ ಜಿಲ್ಲಾಡಳಿತ ಹೆಜ್ಜೆ ಹಾಕಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


Comments
Post a Comment