ಸಿಇಟಿ ಪರೀಕ್ಷೆಯಲ್ಲಿ ಜನಿವಾರ ನಿರ್ಬಂಧ ಖಂಡನೀಯ- ಪಲಗುಲ ನಾಗರಾಜ


ಜಯ ಧ್ವಜ ನ್ಯೂಸ್ , ರಾಯಚೂರು, ಏ.24- ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಧರಿಸಿದ್ಧ ಜನಿವಾರ ತೆಗೆಸಿದ್ದು ರಾಜ್ಯ ಸರ್ಕಾರದ ನೀತಿ ಖಂಡನೀಯ  ಎಂದು ಆರ್ಯವೈಶ್ಯ ಸಮಾಜದ ಚಿಂತಕ ಪಲುಗುಲ ನಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ದೇಶ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳ ಭೂಮಿ ಆಗಿರುತ್ತದೆ. ಆಯಾ ಜಾತಿಗಳಲ್ಲಿ ಅವರದೇ ಆದ ಸಂಪ್ರದಾಯ ಇರುತ್ತದೆ ಹಾಗಂತ ಪರೀಕ್ಷೆ ಬರೆಯುವಾಗ ಹೀಗೆಯೇ ಬರಬೇಕು ಎಂದು ಮುಂಚೆಯೇ ಆದೇಶ ಹೊರಡಿಸಬೇಕು ಅದು ಬಿಟ್ಟು ಪರೀಕ್ಷೆ ಪ್ರವೇಶಿಸುವಾಗ ಜನಿವಾರ ಹಾಕಬಾರದು,ಉಡುದಾರ ಹಾಕಬಾರದು ಎನ್ನುವ ಕಟ್ಟಪ್ಪಣೆ ಒಂದು ಸಮುದಾಯವನ್ನು ಅವಮಾನ ಮಾಡಿದಂತೆ ಆಗುತ್ತದೆ. ಇತ್ತೀಚೆಗೆ ವಿಶೇಷ ತಂತ್ರಜ್ಞಾನದ ಸಲಕರಣೆ ಬಂದು ಪರೀಕ್ಷೆಯಲ್ಲಿ ಗೊಂದಲ ಸೃಷ್ಟಿಸುತ್ತವೆ ಆದರೆ ಅದೇ ಮಾನದಂಡ ಇಟ್ಟುಕೊಂಡು ಜನಿವಾರ ಹಾಕಬಾರದು ಎನ್ನುವ ನೀತಿ ಸರಿಯಲ್ಲ, ಜನಿವಾರದಲ್ಲಿ ಏನಾದರೂ ತಂತ್ರಜ್ಞಾನದ ಸಾಧನ ಇಟ್ಟುಕೊಂಡು ಬರಲು ಸಾಧ್ಯವೇ ?.

ಪರೀಕ್ಷೆ ಹೆಸರಲ್ಲಿ ಜಾತಿಗೆ ಅವಮಾನ ಮಾಡುವುದು ಖಂಡಿಸಲಾಗುತ್ತದೆ. ಜನಿವಾರ , ಉಡುದಾರ ಪರೀಕ್ಷೆಗೆ ಅಡ್ಡ ಬರುವುದೇ ಈ ಹಿಂದೆಯೂ ಜನಿವಾರ ತೆಗೆಸಿದರೆ ಮಾತ್ರ ಪರೀಕ್ಷೆಗೆ ಅವಕಾಶ ಎಂದಿದ್ದರು ಆದರೆ ಭವಿಷ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಇರುವ ವಿದ್ಯಾರ್ಥಿಗಳು ತಮ್ಮ ಸಂಪ್ರದಾಯಗಳನ್ನು ಬಿಡುವ ಮನಸ್ಸಿಲ್ಲದಿದ್ದರು ಬದುಕು ಕಟ್ಟಿಕೊಳ್ಳಲು ಪರೀಕ್ಷೆ ಬರೆದು ನಂತರ ತಾವು ಜನಿವಾರ ತೆಗೆದು ತಪ್ಪು ಮಾಡಿದೆವಾ ಎನ್ನುವ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.

ಸಾಮಾನ್ಯ ವರ್ಗದ ಮೇಲೆ ಈ ರೀತಿಯ ಅವಮಾನಗಳು ನಿರಂತರವಾಗಿ ನಡೆಯುತ್ತಿವೆ. ಮಾಧ್ಯಮಗಳಲ್ಲಿ ವಿಷಯ ಪ್ರಸ್ತಾಪ ಆದಾಗ ಸಂಬಂಧಿಸಿದ ಸಚಿವರು ಕಾಟಾಚಾರಕ್ಕೆ ಏನೋ ಸಮಜಾಯಿಷಿ ಉತ್ತರ ಕೊಟ್ಟು ಜಾರುತ್ತಾರೆ . ಈ ಬಗ್ಗೆ ಹಿಂದೆ ವಿವಿಧ ಸಮುದಾಯಗಳು ಪ್ರತಿಭಟನೆ ಮಾಡಿದ ಉದಾಹರಣೆಗಳು ಇವೆ ಆದರೂ ಸರಕಾರ ತನ್ನ ಮೊಂಡುತನ ಪ್ರದರ್ಶಿಸುತ್ತಿರುವುದು ಖಂಡನೀಯವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog