ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಹಿಳೆಯರು ಸ್ಪರ್ಧಿಸಲಿ-ರೇಖಾ ಬಡಿಗೇರ್
ಜಯ ಧ್ವಜ ನ್ಯೂಸ್ ,ರಾಯಚೂರು ಏ.26.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಚುನಾವಣೆ ಹತ್ತಿರ ಬರುತ್ತಿದ್ದು ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಮಹಿಳೆಯರು ಸ್ಪರ್ಧೆ ಮಾಡಲಿ ಎಂದು ಸಾಹಿತಿ ರೇಖಾ ಬಡಿಗೇರ್ ಮಹಿಳೆಯರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಅನೇಕ ಮಹಿಳಾ ಸಾಹಿತಿಗಳಿದ್ದಾರೆ.
ಅಲ್ಲದೇ ಕಸಾಪದಲ್ಲಿ ಇದುವರೆಗೆ ಜಿಲ್ಲೆಯ ಮಹಿಳೆಯರಿಗೆ ತಾಲೂಕು ಅಧ್ಯಕ್ಷ ಸ್ಥಾನ ಅಥವಾ ಪದಾಧಿಕಾರಿಗಳ ಸ್ಥಾನಕ್ಕಷ್ಡೇ ಸೀಮಿತಗೊಳಿಸುತ್ತಾ ಬರಲಾಗಿದೆ. ನಾಮಕೇವಾಸ್ತೆ ನೇಮಕ ಮಾಡುವುದು ನಡೆಯುತ್ತಿದೆ.
ಜಿಲ್ಲಾಧ್ಯಕ್ಷ ಚುನಾವಣೆಗೆ ಪುರುಷರೇ ಸ್ಪರ್ಧೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆ ಈ ಬಾರಿ ಹೆಚ್ಚಿನ ಸಂಖ್ಯೆಯ ಮಹಿಳೆಯರೂ ಸ್ಪರ್ಧೆ ಗಿಳಿಯಬೇಕಿದೆ. ಮಹಿಳೆಯರು ಜಿಲ್ಲಾಧ್ಯಕ್ಷರಾದಾಗ ಜಿಲ್ಲೆಯಲ್ಲಿ ಮಹಿಳೆಯರಿಗೂ ಒಂದು ಉನ್ನತ ಸ್ಥಾನಮಾನ ದೊರೆಯಲಿವೆ. ಹಾಗಾಗಿ, ಮಹಿಳೆಯರೂ ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಬರಬೇಕಿದೆ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಪ್ರತಿಯೊಬ್ಬ ಮಹಿಳೆಯರಿಗೂ ಇದೆ. ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಧ್ಯಕ್ಷರು ಮಹಿಳೆಯರು ಇದ್ದಾರೆ. ಹಾಗಾಗಿ , ಈ ಬಾರಿ ನಡೆಯುವ ಚುನಾವಣೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಜಿಲ್ಲೆಯ ಮಹಿಳೆಯರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲಿ ಎಂದು ಕಲಾ ಸಂಕುಲ ಸಂಸ್ಥೆ ಅಧ್ಯಕ್ಷೆ, ಲೇಖಕಿ, ಉಪನ್ಯಾಸಕಿಯೂ ಆಗಿರುವ ರೇಖಾ ಬಡಿಗೇರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments
Post a Comment