ವಸಂತ ಕುಮಾರ್ ರಿಂದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
                                                                               ಜಯ ಧ್ವಜ ನ್ಯೂಸ್ ,ರಾಯಚೂರು, ಏ.26 - ನಗರ ವಿಧಾನ ಸಭಾ ಕ್ಷೇತ್ರದ ಬಾಯಿದೊಡ್ಡಿ ಗ್ರಾಮದಲ್ಲಿ ಕೆಕೆಆರ್ ಡಿಬಿ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಭೂಮಿ ಪೂಜೆ ನೆರವೇರಿಸಿದರು.

ಬಾಯಿದೊಡ್ಡಿ ಗ್ರಾಮದಲ್ಲಿ ಕೆಕೆಆರ್ ಡಿಬಿ ಯ 30 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ‌ ಮಾಡಲು ಇಂದು ಭೂಮಿ‌ ಪೂಜೆ‌ ನೆರವೇರಿಸಿ ಮಾತನಾಡಿದ ಎ.ವಸಂತಕುಮಾರ ಅವರು ಇಂದಿಗೂ ನಗರ ವಿಧಾನ‌ ಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಮೂಲಭೂತ‌ ಸೌಕರ್ಯಗಳ ಕೊರತೆ ಸಾಕಷ್ಟು ಇದ್ದು, ನಾಗರೀಕರಿಗೆ ರಸ್ತೆ, ಚರಂಡಿ, ಕುಡಿಯುವ‌ ನೀರು ಒದಗಿಸುವದು ನಮ್ಮ ಸರಕಾರದ‌ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇನ್ನೂ ಹಚ್ಚಿನ‌ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ‌ ಕರೀಮ, ಯೋಜನಾ ಆಯೋಗದ ಸದಸ್ಯ ಡಾ.ರಝಾಕ ಉಸ್ತಾದ, ಜೆ.ಸತ್ಯನಾಥ, ದೀಪಕ ರೆಡ್ಡಿ, ಜಿ.ಆನಂದ ರೆಡ್ಡಿ, ಮೊಹಮ್ಮದ ಉಸ್ಮಾನ, ಸೈಯದ ಸುಲ್ತಾನ, ಮೊಹಮ್ಮದ ರಫಿ, ಬಿ.ಮಲ್ಲೇಶ, ಜಿ.ಶಿವಪ್ಪ, ಕುರುಬ ಜಯಪ್ಪ, ಕುಂಬಾರ ರಂಗಪ್ಪ, ಕುಂಬಾರ ಸೋಮಪ್ಪ, ಕುರುಬರ ಸಿದ್ದಪ್ಪ, ಎಸ್.ಹನುಂತರೆಡ್ಡಿ, ಜಿ.ಅಂಜನರೆಡ್ಡಿ, ಎಸ್.ಗೋವಿಂದ ಹಾಗೂ ಇತರರು‌ ಉಪಸ್ಥಿತರಿದ್ದರು.                     


 
ಬಿಲ್ವ ಮಂದಿರ ಉದ್ಯಾನ: 
ರಾಯಚೂರು ನಗರ ವಿಧಾನ ಸಭಾ ಕ್ಷೇತ್ರದ ವಾರ್ಡ ನಂ 21ರ‌ ಕೃಷ್ಣ ದೇವರಾಯ ಕಾಲೋನಿಯ ಬಿಲ್ವ ಮಂದಿರ ಗಾರ್ಡನ್ ಅಭಿವೃದ್ಧಿ ಗೆ ಕೆಕೆಆರ್ ಡಿಬಿ ಅನುದಾನದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಭೂಮಿ ಪೂಜೆ ನಡೆಸಿದರು.

ವಾರ್ಡ ನಂ.21ರ ಕೃಷ್ಣ ದೇವರಾಯ ಕಾಲೋನಿಯ ಬಿಲ್ವ ಮಂದಿರ ಗಾರ್ಡನ್ ಅಭಿವೃದ್ಧಿ ಗೆ ಕೆಕೆಆರ್ ಡಿಬಿ ಯ 30 ಲಕ್ಷ ರೂ ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಇಂದು ಭೂಮಿ‌ ಪೂಜೆ‌ ನೆರವೇರಿಸಿ ಮಾತನಾಡಿದ  ಅವರು ಇಂದಿಗೂ ನಗರ ವಿಧಾನ‌ ಸಭಾ ಕ್ಷೇತ್ರದ ಹಲವಾರು ಬಡಾವಣೆಗಳಲ್ಲಿ ಇರುವ ಗಾರ್ಡನಗಳಲ್ಲಿ ಮೂಲಭೂತ‌ ಸೌಕರ್ಯಗಳ ಕೊರತೆ ಸಾಕಷ್ಟು ಇದ್ದು, ನಾಗರೀಕರಿಗೆ ವಾಯು‌ ವಿಹಾರ,‌ ಮಕ್ಕಳಿಗೆ ಆಡಲು ಸೂಕ್ತ ಸೌಲಭ್ಯ ಒದಗಿಸುವದು ನಮ್ಮ ಸರಕಾರದ‌ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇನ್ನೂ ಹಚ್ಚಿನ‌ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ‌ ಕರೀಮ, ಮಾಹನಗರ ಪಾಲಿಕೆ ಮಾಜಿ ಸದಸ್ಯ ನಾಗರಾಜ್, ಯೋಜನಾ ಆಯೋಗದ ಸದಸ್ಯ ಡಾ.ರಝಾಕ ಉಸ್ತಾದ, ಜೆ.ಸತ್ಯನಾಥ, ದೀಪಕ ರೆಡ್ಡಿ, ಅಂಜಿನಕುಮಾರ, ಮೊಹಮ್ಮದ ಉಸ್ಮಾನ, ಸೈಯದ ಸುಲ್ತಾನ, ಮೊಹಮ್ಮದ ರಫಿ,ನಿವೃತ್ತ ಇಂಜಿನಿಯರ್ ವೆಂಕಟೇಶ ಹಾಗೂ ಇತರರು‌ ಉಪಸ್ಥಿತರಿದ್ದರು.

Comments

Popular posts from this blog