ಪತ್ರಿಕಾ ಭವನ ಸಂಪರ್ಕ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಸಂತಕುಮಾರ್ ಭೂಮಿ ಪೂಜೆ.                                                         ಜಯ ಧ್ವಜ ನ್ಯೂಸ್ ರಾಯಚೂರು, ಏ.27- ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ಹಿಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಹಾಗೂ ರಿಪೋರ್ಟರ್ಸ್ ಗೀಲ್ಡ್  ಸಂಪರ್ಕಿಸಲು ಸಿಸಿ ರಸ್ತೆ ನಿರ್ಮಾಣಕ್ಕೆ ಕೆಕೆಆರ್ ಡಿಬಿ ಅನುದಾನದಲ್ಲಿ ಭೂಮಿ ಪೂಜೆಯನ್ನು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ನೇರವೇರಿಸಿದರು.

ನಂತರ ಮಾತನಾಡಿದ  ಅವರು ನಗರದಲ್ಲಿ ಬೃಹತ್ ಡಾ.ಬಿ.ಆರ್.ಅಂಬೇಡ್ಕರ್  ಸಮುದಾಯ ಭವನ ನಿರ್ಮಾಣ ಮಾಡಲಾಗಿದ್ದು, ಅಲ್ಲಿಗೆ ಹೋಗಲು ಮತ್ತು ರಿಪೋರ್ಟರ್ಸ್ ಗಿಲ್ಡ್ (ಪತ್ರಿಕಾ ಭವನ)ಕ್ಕೆ ಸಂಪರ್ಕ ಕಲ್ಪಿಸಲು ಸಿಸಿ ರಸ್ತೆಯ ಅವಶ್ಯಕತೆ ಇರುವದರಿಂದ 15 ಲಕ್ಷ ರೂ. ಕೆಕೆಆರ್ ಡಿಬಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ, ಮುಂದಿನ‌ ದಿನಗಳಲ್ಲಿ ಇನ್ನೂ ಅಗತ್ಯ ಮೂಲ‌ ಸೌಲಭ್ಯ ಒದಗಿಸಲಾಗುವದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಕರೀಮ, ಜೆ. ಸತ್ಯನಾಥ, ಸೈಯದ ಸುಲ್ತಾನ, ದೀಪಕ್ ರೆಡ್ಡಿ, ಅಂಜಿನಕುಮಾರ, ಮೊಹಮ್ಮದ ಉಸ್ಮಾನ, ಸೈಯದ ಮುರ್ಷಿದ ಜಾನಿ ಹಾಗೂ ಇತರರು ಉಪಸ್ಥಿತರಿದ್ದರು. 


           
ಅಂಬೇಡ್ಕರ್ ಭವನ ನಿವೇಶನ ಕೌಂಪೌಂಡ್ ನಿರ್ಮಾಣಕ್ಕೆ ಭೂಮಿ ಪೂಜೆ:  ರಾಯಚೂರು ನಗರದ ಲಾಲ್‌ ಪಹಾಡಿ‌ ಪ್ರದೇಶದಲ್ಲಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿವೇಶನಕ್ಕೆ ಕಾಂಪೌಂಡ ಗೋಡೆ ನಿರ್ಮಾಣಕ್ಕೆ ಕೆಕೆಆರ್ ಡಿಬಿ ಅನುದಾನದಲ್ಲಿ ಭೂಮಿ ಪೂಜೆಯನ್ನು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ನೇರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎ.ವಸಂತಕುಮಾರ ಅವರು ನಗರದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅವರಿಗೆ ಸಮುದಾಯ ಭವನ ನಿರ್ಮಾಣ‌ ಸೇರಿದಂತೆ ಹಲವು ಚಟುವಟಿಕೆಗಳಿಗೆ ಸ್ಥಳಾವಕಾಶ ಅವಶ್ಯಕಯೆ ಇದ್ದು, ಸರಕಾರದಿಂದ ಮಂಜೂರಾದ ನಿವೇಶಗಳನ್ನು ಸ್ವಚ್ಚತೆಯಿಂದ ಉಳಿಸಿಕೊಳ್ಳುವ ಹಿನ್ನಲೆಯಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲಾಗುತ್ತಿದೆ, ಮುಂದಿನ‌ ದಿನಗಳಲ್ಲಿ ಸಮುದಾಯ ಭವನ ನಿರ್ಮಾಣ‌ ಸೇರಿದಂತೆ ಅಗತ್ಯ ಮೂಲ‌ ಸೌಲಭ್ಯ ಒದಗಿಸಲಾಗುವದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ‌ ಕರೀಂ, ಕೆಇ ಕುಮಾರ, ಮೋನಾ, ಹೇಮರಾಜ ಅಸ್ಕಿಹಾಳ, ರಾಮು, ಜೆ. ಸತ್ಯನಾಥ ಹಾಗೂ ಇತರರು ಉಪಸ್ಥಿತರಿದ್ದರು

Comments

Popular posts from this blog