ವಿಧಾನಪರಿಷತ್ ಸದಸ್ಯರಾದ ಎ.ವಸಂತ್ ಕುಮಾರ್ ಅವರಿಂದ ನಗರ ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ದಿಡೀರ್ ಭೇಟಿ ಪರಿಶೀಲನೆ
ಜಯ ಧ್ವಜ ನ್ಯೂಸ್ ,ರಾಯಚೂರು,ಏ.28- ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ಎಲ್ ಬಿ ಎಸ್ ನಗರದ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ಸ್ವಚ್ಛತೆ, ಸಿಬ್ಬಂದಿ ಹಾಜರಾತಿ, ಮತ್ತು ಔಷದಗಳ ಲಭ್ಯತೆ ಬಗ್ಗೆ ವಿಚಾರಿಸಿದರು, ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಕರ್ತವ್ಯದ ಸಮಯದಲ್ಲಿ ಎಲ್ಲರು ಕಡ್ಡಾಯವಾಗಿ ಹಾಜರಾಗಿರಬೇಕೆಂದು ತಿಳಿಸಿದರು.
ತದನಂತರ ಹರಿಜನವಾಡ್ ನಗರ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆಗೆ ಬಂದಿದ್ದ ಸಾರ್ವಜನಿಕರಲ್ಲಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಸ್ಪಂದನೆ, ಚಿಕಿತ್ಸೆ, ಮತ್ತು ಔಷಧಗಳ ಸರಿಯಾದ ರೀತಿಯಲ್ಲಿ ವಿತರಿಸಲಾಗುತ್ತದಯೇ ಎಂದು ವಿಚಾರಿಸಿದರು, ರೋಗಿಗಳ ದಾಖಲಾತಿ ವಿವರ ಪರಿಶೀಲಿಸಿದರು.
ಕೆಲವು ವ್ಯಕ್ತಿಗಳು ಆಸ್ಪತ್ರೆಯ ಸಿಬ್ಬಂದಿಗಳ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿರುವ ಬಗ್ಗೆ ವೈದ್ಯರು ತಿಳಿಸಿದಾಗ ಕೂಡಲೇ ಡಿವೈಎಸ್ಪಿ ಮತ್ತು ಪಿ ಎಸ್ ಐ ಅವರಿಗೆ ಕರೆ ಮಾಡಿ ಸೂಕ್ತ ಭದ್ರತೆ ನೀಡಲು ಸೂಚಿಸಿದರು.
ರಾಯಚೂರಿನ ಆಮ್ ತಲಾಬ್ ನ ನಗರ ಪ್ರಸೂತಿ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿ, ಸಿಬ್ಬಂದಿಗಳ ಮತ್ತು ಚಿಕಿತ್ಸಾ ಪರಿಕರಗಳ ಕೊರತೆ ಬಗ್ಗೆ ಕೊಡಲೇ ಡಿ ಎಚ್ ಓ ಅವರ ಗಮನಕ್ಕೆ ತಂದು ಈ ಇಲ್ಲಾ ಚಿಕಿತ್ಸಾ ಕೇಂದ್ರಗಳ ಸಿಬ್ಬಂದಿ ಮತ್ತು ಔಷಧಿಗಳ ಕೊರತೆ ಇರದಂತೆ ಸೂಕ್ತ ಕ್ರಮವಹಿಸಲು ಸೂಚಿಸಿದರು.



Comments
Post a Comment