ಗಾಯತ್ರಿ ಭವನ: ಬಾಗಿಲು ಚೌಕಟ್ಟು ಸ್ಥಾಪನೆ. 
                                                              ಜಯ ಧ್ವಜ ನ್ಯೂಸ್ , ರಾಯಚೂರು, ಏ.23- ಇಂದು ನಗರದ ನವೋದಯ ಆಸ್ಪತ್ರೆ ಹತ್ತಿರ ಇರುವ ಬ್ರಾಹ್ಮಣ ಸಮಾಜದ ಹೆಮ್ಮೆಯ ಗಾಯತ್ರಿ ಭವನದ ನೂತನ ಬಾಗಿಲು ಚೌಕಟ್ಟು ಕೂಡಿಸಲಾಯಿತು. ಈಗಾಗಲೆ ಅನೇಕ ಜನಪ್ರತಿನಿಧಿಗಳ ಅನುದಾನ ಹಾಗೂ ಸಮಾಜದ ಹಿರಿಯರ ಸಹಕಾರದೊಂದಿಗೆ ಗಾಯತ್ರಿ ಭವನ ಕಟ್ಟಡದ ಕಾಮಗಾರಿ ಭರದಿಂದ ಸಾಗಿದ್ದು ಇಂದು ಮುಖ್ಯ ದ್ವಾರ ಚೌಕಟ್ಟು ಸ್ಥಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ  ಸಂದರ್ಭದಲ್ಲಿ ಎಕೆಬಿಎಂಎಸ್ ರಾಯಚೂರು ಜಿಲ್ಲಾ ಪ್ರತಿನಿಧಿ ರಮೇಶ ಕುಲಕರಣಿ, ಜಿಲ್ಲಾ ಸಂಚಾಲಕ  ವೇಣುಗೋಪಾಲ ಇನಾಮ್ದಾರ್, ಕಾರ್ಯಧ್ಯಕ್ಷರಾದ ವೆಂಕಟೇಶ್ ದೇಸಾಯಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಜಯಕುಮಾರ ಗಬ್ಬೂರು, ನಗರ ಸಂಚಾಲಕರಾದ ರಾಮರಾವ್ ಗಣೆಕಲ್, ಹಿರಿಯರಾದ ನಂದಾಪುರ ಶ್ರೀನಿವಾಸ, ಪ್ರಾಣೇಶ ಮುತಾಲಿಕ್, ಡಾ.ಆನಂದ್ ತೀರ್ಥ ಪಡ್ನೀಸ್ ,ಟಿ ರಮೇಶ್ ,ಕೋಲಾರ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಹಾಗೂ ವಿಷ್ಣು ತೀರ್ಥ ಸಿರವಾರ, ರಮಾಕಾಂತ್ ರಾವ್ ಗುಂಜಳ್ಳಿ, ಕಿಶನ್ ರಾವ್ ಎಲ್.ಕೆ. ದೊಡ್ಡಿ, ಸುಬ್ಬರಾವ್ ಮಟಮಾರಿ, ಶ್ರೀನಿವಾಸ ದೇಸಾಯಿ, ವಿನೋದ ಕಕ್ಕೇರಿ ಸೇರದಂತೆ ಸಮಾಜದ ಹಲವಾರು ಹಿರಿಯರು, ಯುವಕರು ಭಾಗವಹಿಸಿ ಯಶಸ್ವಿಗೊಳಿಸಿದರು.

Comments

Popular posts from this blog