ಆದಿಕವಿ ಶ್ರೀ ವಾಲ್ಮೀಕಿ ವಿವಿ : ಶ್ರೀ ಭಗೀರಥ ಜಯಂತಿ ಆಚರಣೆ
ತಪೋನಿಷ್ಠೆಗೆ ಆದರ್ಶ ಮಹರ್ಷಿ ಭಗೀರಥ - ಪ್ರೊ.ಪಿ.ಭಾಸ್ಕರ್
ಜಯ ಧ್ವಜ ನ್ಯೂಸ್. ರಾಯಚೂರು,ಏ.23-
ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತರುವಲ್ಲಿ ಮಹರ್ಷಿ ಭಗೀರಥರ ಪಾತ್ರ ಅಪ್ರತಿಮವಾದುದು, ಪೂರ್ವಜರ ಆತ್ಮಕ್ಕೆ ಶಾಂತಿ ಒದಗಿಸಿದ ಭಗೀರಥರ ಸಾಹಸವನ್ನು ಈ ದಿನವು ಅಸಾಧಾರಣ ಪರಿಶ್ರಮ, ಛಲ ಮತ್ತು ಸಮರ್ಪಣಾ ಮನೋಭಾವವನ್ನು ಸಂಕೇತಿಸುತ್ತದೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ವಾಣಿಜ್ಯ ನಿಕಾಯದ ಡೀನರಾದ ಪ್ರೊ.ಪಿಭಾಸ್ಕರ್ ಅವರು ತಿಳಿಸಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಲ್‌ನಲ್ಲಿ ಶ್ರೀ ಭಗೀರಥ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿ ಮಾತನಾಡಿದ ಅವರು, ಹಿಂದೂ ಪುರಾಣಗಳಲ್ಲಿ ಛಲಬಿಡದ ರಾಜಋಷಿಯಾಗಿ ಪರಿಚಿತರಾದ ಇವರು ಸಕಲ ಜೀವರಾಶಿಗೆ ಅನುಕೂಲವಾಗುವಂತೆ ನಮ್ಮ ದೇಶದ ಜೀವನದಿ ಅಷ್ಟೆ ಅಲ್ಲದೇ ಗಂಗೆಯನ್ನು ಹಿಮಾಲಯದಿಂದ ಭೂಮಿಗೆ ತಂದು ಜೀವಧಾತುಗಳಿಗೆ ಸನ್ಮಾರ್ಗವನ್ನು ಕಲ್ಪಿಸಿದ ಮಹಾಪುರುಷರು.
ಪ್ರಯತ್ನ ಪರಾಕಾಷ್ಠೆಯ ಭಗೀರಥ ಪ್ರಯತ್ನವೆಂದು ಜನಜನಿತವಾಗಿದ್ದು ತನ್ನ ಸಾಹಸಕ್ಕೆ ಗುರುಭಕ್ತಿಗೆ ತಪೋನಿಷ್ಠೆಗೆ ಆದರ್ಶವಾಗಿ ಕಂಗೊಳಿಸುತ್ತಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ನಿಕಾಯ ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಕಲಾ ನಿಕಾಯ ಡೀನರಾದ ಡಾ.ಲತಾ.ಎಮ್.ಎಸ್., ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಅನಿಲ್ ಅಪ್ರಾಳ್ ಸ್ವಾಗತಿಸಿ ವಂದಿಸಿದರು.


Comments
Post a Comment