ಹೆಲ್ಮೆಟ್ ಧರಿಸಿ ಜೀವ ಕಾಪಾಡಿಕೊಳ್ಳಿ - ಎಸ್ಪಿ ಅರುಣಾಂಗ್ಶು ಗಿರಿ
ಜಯ ಧ್ವಜ ನ್ಯೂಸ್ ರಾಯಚೂರು, ಏ.23- ಬೈಕ್ ಸವಾರರು ತಮ್ಮ ಅಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶುಗಿರಿ ಹೇಳಿದರು.
ಅವರಿಂದು ರಾಯಚೂರು ಜಿಲ್ಲಾ ಪೊಲೀಸ್ ಮತ್ತು ರಾಯ್ ಕೆಮ್ ಮೆಡಿಕೇರ್ ಲಿಮಿಟೆಡ್ ಕಂಪನಿ ಸಹಯೋಗದಲ್ಲಿ ವಡ್ಲೂರು ಸರ್ಕಲ್ ಎಸ್ ಬಿ ಐ ಬ್ಯಾಂಕ್ ಆವರಣದಲ್ಲಿ ಉಚಿತ ಹೆಲ್ಮೆಟ್ ವಿತರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಹದ ಯಾವುದೇ ಭಾಗಕ್ಕೂ ಪೆಟ್ಟಾದರೂ ಚಿಕಿತ್ಸೆ ಪಡೆಯಬಹುದು, ಆದರೆ ಮನುಷ್ಯನ ತಲೆಗೆ ಪೆಟ್ಟಾದರೆ ಜೀವ ಹೋಗುವ ಸಂಭವವಿರುತ್ತದೆ ಎಲ್ಲರೂ ಹೆಲ್ಮೆಟ್ ಧರಿಸಬೇಕು ಬೈಕ್ ಸವಾರನಾ ತಲೆ ಒಂದು ಮೊಟ್ಟೆ ಇದ್ದಂತೆ ಮೊಟ್ಟೆ ಒಡೆದರೆ ಅದನ್ನು ಜೋಡಿಸಲು ಆಗುವುದಿಲ್ಲವೋ ಅದೇ ರೀತಿಯಾಗಿ ಮನುಷ್ಯನ ತಲೆಯೂ ಒಂದು ಮೊಟ್ಟೆ ಇದ್ದಂತೆ ಆದ್ದರಿಂದ ತಲೆಗೆ ಪೆಟ್ಟಾಗದಂತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಬೈಕ್ ಸವಾರನ ಕರ್ತವ್ಯವಾಗಿದೆ ಎಂದು ಹೇಳಿದರು. ಪೊಲೀಸರು ಎಷ್ಟೇ ಬೈಕ್ ಸವಾರರಿಗೂ ದಂಡ ಹಾಕಿದರು ಹೆಲ್ಮೆಟ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿಲ್ಲ ಅದು ಕಾನೂನು ಬಾಹಿರ, ಇಡೀ ಕುಟುಂಬವೇ ನಿಮ್ಮ ಮೇಲೆ ನಿಂತಿರುತ್ತದೆ ಏನಾದರೂ ಬೈಕ್ ಮೇಲಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿದರೆ ಇಡೀ ನಿಮ್ಮನ್ನು ಅವಲಂಬಿಸಿದ ಕುಟುಂಬವು ಬೀದಿಗೆ ಬೀಳುತ್ತದೆ ಹಾಗೂ ನಿಮ್ಮ ಅಮೂಲ್ಯವಾದ ಜೀವ ಕಳೆದುಕೊಳ್ಳುತ್ತೀರಿ ಆದ್ದರಿಂದ ದಯವಿಟ್ಟು ಎಲ್ಲರೂ ಹೆಲ್ಮೆಟ್ ಧರಿಸಬೇಕು ಎಂದು ಹೇಳಿದರು.
ರಾಯ್ ಕೆಮ್ ಮೆಡಿಕೇರ್ ಕಂಪನಿಯ ಮುಖ್ಯಸ್ಥರಾದ ಪ್ರಹ್ಲಾದ್ ರಾವ್ ಕುಲಕರ್ಣಿ ಮಾತನಾಡುತ್ತಾ ಪ್ರತಿಯೊಬ್ಬ ಬೈಕ್ ಸವಾರರು ದಯಮಾಡಿ ಹೆಲ್ಮೆಟ್ ಧರಿಸಬೇಕು ಕೋಟಿ ಕೊಟ್ಟರು ಜೀವ ಬರುವುದಿಲ್ಲ ಹೆಲ್ಮೆಟ್ ಧರಿಸದೆ ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಬೈಕ್ ಸವಾರರು ಸಾವನ್ನಪ್ಪಿದ್ದಾರೆ ಯುವಕರು ಹೆಚ್ಚಾಗಿ ಅಪಘಾತಕ್ಕೆ ಈಡಾಗುತ್ತಿದ್ದಾರೆ ದಯಮಾಡಿ ಎಲ್ಲರೂ ಹೆಲ್ಮೆಟ್ ಧರಿಸಬೇಕು, ನಮ್ಮ ಕಂಪನಿಯ ವತಿಯಿಂದ 500 ಹೆಲ್ಮೆಟ್ ಉಚಿತವಾಗಿ ಬೈಕ್ ಸವಾರರಿಗೆ ನೀಡುತ್ತಿದ್ದೇವೆ ಹಾಗೂ 50 ಬ್ಯಾರಿ ಕೇಡ್ ಗಳನ್ನು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಗೆ ಉಚಿತವಾಗಿ ನೀಡುತ್ತಿದ್ದೇವೆ, ದಯಮಾಡಿ ಎಲ್ಲರೂ ಉಚಿತವಾಗಿ ಕೊಡುತ್ತಿರುವ ಹೆಲ್ಮೆಟ್ ಧರಿಸಿ ಜೀವ ಕಾಪಾಡಿಕೊಳ್ಳಬೇಕು ಎಂಬುದೇ ನನ್ನ ಮನವಿ ಎಂದು ಹೇಳಿದರು.
ಹೆಲ್ಮೆಟ್ ಧರಿಸದೆ ಬೈಕ್ ಸವಾರರು ಯಾವ ರೀತಿ ಬೈಕ್ ಮೇಲಿಂದ ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪುತ್ತಾರೆ ಹಾಗೂ ಹೆಲ್ಮೆಟ್ ಧರಿಸುವುದರಿಂದ ಜೀವಕ್ಕೆ ರಕ್ಷಾಕವಚ ಇದ್ದಂತೆ ಎನ್ನುವ ಕಿರು ಚಿತ್ರವನ್ನು ಕಾರ್ಯಕ್ರಮದಲ್ಲಿ ತೋರಿಸಲಾಯಿತು. ಉಚಿತ ಹೆಲ್ಮೆಟ್ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೈಕ್ ಸವಾರರು ಭಾಗಿಯಾಗಿದ್ದರು, ಹಾಗೂ ಎಲ್ಲರಿಗೂ ಹೆಲ್ಮೆಟು ವಿತರಣೆ ಮಾಡಿ ಹೆಲ್ಮೆಟಿ ಜಾಗೃತಿ ಕಾರ್ಯಕ್ರಮ ಅಡಿಯಲ್ಲಿ ಎಸ್ ಬಿ ಐ ಬ್ಯಾಂಕ್ ನಿಂದ ರಾಯ್ ಕೆಮ್ ಮೆಡಿಕೇರಿ ಕಂಪನಿ ಹೊರಗೆ ಹೆಲ್ಮೆಟ್ ಜಾಗೃತಿ ಬೈಕ್ ರ್ಯಾಲಿ ಮಾಡಲಾಯಿತು,
ಈ ಸಂದರ್ಭದಲ್ಲಿ ರಾಯಚೂರು ಡಿವೈಎಸ್ಪಿ ಶಾಂತವೀರ, ಗ್ರಾಮೀಣ ಸಿಪಿಐ ಸಾಹಿತ್ಯ ನಾಯಕ, ಪಿಎಸ್ಐ ಪ್ರಕಾಶ್ ಡಂಬಳ, ಕಲ್ಯಾಣ ಕರ್ನಾಟಕ ರೈತ ಸಂಘ ರಾಜ್ಯದ್ಯಕ್ಷರಾದ ಜಿಂದಪ್ಪ, ಮುಖಂಡರಾದ ಶರಣಪ್ಪ ನಾಮಾಲಿ, ಶಿವಶರಣ ಗೌಡ, ಸೂಗೂರೆಡ್ಡಿ ಗೌಡ, ಶಿವರಾಜ್, ವಡ್ಲೂರು, ಹೆಗ್ಗಸನಹಳ್ಳಿ, ಚಿಕ್ಕಸೂಗೂರು ಗ್ರಾಮದ ಮುಖಂಡರು ಹಾಗೂ ರಾಯ್ ಕೆಮ್ ಮೆಡಿಕೇರ್ ಲಿಮಿಟೆಡ್ ಕಂಪನಿಯ ಪದಾಧಿಕಾರಿಗಳಾದ ರಂಗನಾಥ್, ನಾಗಭೂಷಣ್, ಕಿಶೋರ್ ರೆಡ್ಡಿ, ವೆಂಕಟರಾವ್, ವಿ ಎಚ್ ಪ್ರಸಾದ್, ರೇಣುಕಾ, ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು.




Comments
Post a Comment