ಹರಿದಾಸ ಸಾಹಿತ್ಯಕ್ಕೆ ವಿಶಿಷ್ಟ  ಕೊಡುಗೆ ನೀಡಿದವರು ಶ್ರೀಶೇಷ ದಾಸರು -ಮುರಳಿಧರ ಕುಲಕರ್ಣಿ

 ಜಯ ಧ್ವಜ ನ್ಯೂಸ್ , ರಾಯಚೂರು, ಏ.25- ಗದ್ವಾಲ ಸಂಸ್ಥಾನ ರಾಜನಿಂದ ಅವಮಾನಿತಗೊಂಡು, ಜೀವನದಲ್ಲಿ  ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದಂತ ಶೇಷಪ್ಪನವರು  ಚಿಂತ್ರವಲ್ಲಿಯ ಪ್ರಾಣದೇವರ ಸೇವೆಯನ್ನು ಮಾಡಿ ಶ್ರೀ ವಿಜಯದಾಸರ ಅನುಗ್ರಹದಿಂದ ಶೇಷ ದಾಸರಾಗಿ ದಾಸ ಸಾಹಿತ್ಯಕ್ಕೆ ವಿಶೇಷ ಶ್ರೇಷ್ಠ ಕೊಡುಗೆ ನೀಡಿದ ಮಹನೀಯರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು. 


ಅವರು ನಿನ್ನೆ ದಾಸ ಶ್ರೇಷ್ಠರಾದ ಶ್ರೀ ಶೇಷ ದಾಸರ 208ನೆಯಆರಾಧನೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. 

   ಶ್ರೀಶೇಷ ದಾಸರು 43 ಸುಳಾದಿಗಳನ್ನು, 14 ಉಗಾ ಭೋಗ ಗಳನ್ನು, 4 ಪದ್ಯಗಳನ್ನು, ಪಂಚ ಪ್ರಮೇಯಗಳನ್ನು ,ಗದ್ಯಗಳನ್ನು ,ಶ್ರೀ ವಿಜಯರಾಯರ  ಚಕ್ರಾಬಾಜ್ಜ ಮಂಡಲ ವಿವರವನ್ನು ರಚಿಸಿದ್ದಾರೆ. ಇವುಗಳಲ್ಲಿ ಪ್ರಾರ್ಥನಾ ಸುಳಾದಿ, ಜ್ಞಾನ ಯಜ್ಞ ಸುಳಾದಿ,ವಾರದ ಸುಳಾದಿ, ಶ್ರೀ ಲಕ್ಷ್ಮೀದೇವಿ ,ಸುಳಾದಿ ಮುಂತಾದವುಗಳೆಲ್ಲ ತುಂಬಾ ಪ್ರಸಿದ್ಧಿಯನ್ನು ಪಡೆದಿವೆ, ಎಂದು ಹೇಳಿದರು. 


 ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರುರವರು ಮಾತನಾಡಿ, ದೈವಾಂಶ ಸಂಭೂತರಾದ ಶ್ರೀ ಶೇಷ ದಾಸರು ಜನಸಾಮಾನ್ಯರಿಗೆ ಸನ್ಮಾರ್ಗದ ಹಾದಿ ತೋರಿಸುವ ಕಾರ್ಯವನ್ನು ಮಾಡಿದರು ಅದರ ಜೊತೆಗೆ ಹಲವಾರು ಪವಾಡಗಳನ್ನು ಸಹ ಮಾಡಿ ಮದ್ವಸಿದ್ದಾಂತವನ್ನು ಪ್ರಚುರಪಡಿಸಿದರು. ಶ್ರೀವಿಜಯದಾಸರಿಂದ ಸ್ಪಪ್ನದಲ್ಲಿಶ್ರೀ ಗುರು ವಿಜಯ ವಿಠಲ ಎಂಬ ಅಂಕಿತವನ್ನು ಪಡೆದುಕೊಂಡು ಹಲವಾರು ಮೌಲ್ಯಯುಕ್ತ ಕೃತಿಗಳನ್ನು ರಚಿಸಿದರು, ಎಂದು ಹೇಳಿದರು. 

 ಕಾರ್ಯಕ್ರಮವನ್ನು ಮಂತ್ರಾಲಯ ಮಠದ ವಿಭಾಗಿಯ ವ್ಯವಸ್ಥಾಪಕರಾದ ಶ್ರೀಸೇತು ಮಾಧವ ಕನಕವೀಡು ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. 

 ಶ್ರೀ ಶೇಷ ದಾಸರ ಸಂಕೀರ್ತನೆಗಳನ್ನು ಹಾಡುವರ ಮೂಲಕ ಹಿರಿಯ ಕಲಾವಿದ ಶ್ರೀ ಸುರೇಶ್ ಕಲ್ಲೂರ್ ಅವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. 


 ಬಯಲು ಆಂಜನೇಯ ದೇವಸ್ಥಾನದ ಅರ್ಚಕರಾದ ಶ್ರೀ ಶ್ರೀಧರಾಚಾರ್ಯ ಮುಂಗಲಿ  ಅವರು ಶ್ರೀ ಶೇಷ ದಾಸರ ಭಾವಚಿತ್ರಕ್ಕೆ ಪೂಜಿಯನ್ನು ಸಲ್ಲಿಸಿ ಮಂಗಳಾರತಿಯನ್ನು ಮಾಡಿದರು. 

  ಈ ಸಂದರ್ಭದಲ್ಲಿ ವೆಂಕಟೇಶ ಕೋಲಾರ್, ಮಾರುತಿ ಭಜನಾ ಮಂಡಳಿ, ಹಿರಿಯ ಕಲಾವಿದಶ್ರೀ ಸುರೇಶ್ ಕಲ್ಲೂರ್,  ಕುಮಾರಿ ವಾಸುಕಿರಣಂ, ಇವರಿಂದ ದಾಸವಾಣಿ ಜರುಗಿತು. 

ಕಾರ್ಯಕ್ರಮದಲ್ಲಿ  ಪ್ರಸನ್ನ ಆಲಂಪಲ್ಲಿ, ಕೃಷ್ಣಮೂರ್ತಿ ಹುಣಸಿಗಿ, ಕೇಶರಾವ ಕುಲ್ಕರ್ಣಿ, ಪಾಂಡುರಂಗ ದೇಸಾಯಿ, ರಾಘವೇಂದ್ರ ದೇಶಪಾಂಡೆ, ಶ್ರೀಮತಿ ನಾಗರತ್ನ ಕಲ್ಲೂರ್, ಶ್ರೀಮತಿ ಪ್ರತಿಭಾ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು. 

ಕೊನೆಯಲ್ಲಿ ಭಜನಾ ಮಂಡಳಿಗಳಿಂದ ಶ್ರೀಶೇಷ ದಾಸರು ರಚಿಸಿದ ಸಂಕೀರ್ತನೆಗಳು ಜರಗಿದವು.

Comments

Popular posts from this blog