ದರ್ವೇಶ ಕಂಪನಿ ಹೂಡಿಕೆದಾರರಿಗೆ ಪಾರದರ್ಶಕವಾಗಿ ಹಣ ಮರುಪಾವತಿಯಾಗಬೇಕು- ಅಂಬಾಜಿ ಮೈದರ್ಕರ್. ಜಯ ಧ್ವಜ ನ್ಯೂಸ್, ರಾಯಚೂರು,ಜೂ.1- ದರ್ವೇಶ ಕಂಪನಿ ಹೂಡಿಕೆದಾರರಿಗೆ ಪಾರದರ್ಶಕವಾಗಿ ಹಣ ಮರುಪಾವತಿ ಮಾಡಬೇಕೆಂದು ಸಮಾಜ ಸೇವಕ ಅಂಬಾಜಿ ಮೈದರ್ಕರ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ನಂತರ ಹೂಡಿಕೆದಾರರಿಗೆ ಡಿಜಿಪೆಕ್ಸ್ ಮುಖಾಂತರ ಮಾಸಿಕ ಹಣ ಮರುಪಾವತಿಸಲು ಯೋಜನೆ ಜಾರಿಗೊಳಿಸಲಾಗಿದ್ದು ಅದನ್ನು ಸಮರ್ಪಕವಾಗಿ ಪಾರದರ್ಶಕವಾಗಿ ಮಾಡಿದರೆ ಮಾತ್ರ ಸಂಕಷ್ಟದಲ್ಲಿರುವ ಹೂಡಿಕೆದಾರರಿಗೆ ನ್ಯಾಯ ಸಿಗುತ್ತದೆ ಎಂದರು.
ಡಿಜಿಪೆಕ್ಸ್ ಮರುಪಾವತಿ ದರ್ವೇಶ್ ಸಂಸ್ಥೆ ಆಡಿಯಲ್ಲೆ ನಡಿಯಬೇಕು ಬೇರೆಯವರಿಗೆ ವಹಿಸಿದರೆ ಅದು ಸರಿಯಾಗಿ ನಡೆಯುವುದಿಲ್ಲವೆಂದು ಹೇಳಿದರು. ತಕ್ಷಣ ದರ್ವೇಶ ಕಂಪನಿ ಮಾಲೀಕರು, ಏಜೆಂಟರು ಹೂಡಿಕೆದಾರರಿಗೆ ಮರುಪಾವತಿ ಪ್ರಾರಂಭಿಸಬೇಕು ಎಂದರು. ಈ ಸಂದರ್ಭದಲ್ಲಿ ಮಸೂದ ಅಲಿ, ಮತೀನ್, ಶಂಶುದ್ದೀನ್ ಇನ್ನಿತರರು ಉಪಸ್ಥಿತರಿದ್ದರು.


Comments
Post a Comment