ಕಾಡ್ಲೂರಿಗೆ ಶ್ರೀ ಪೇಜಾವರ ಶ್ರೀಗಳ ದಿಗ್ವಿಜಯ.                                                             ಜಯ ಧ್ವಜ ನ್ಯೂಸ್, ರಾಯಚೂರು,ಮೇ.21- ತಾಲೂಕಿನ ಕಾಡ್ಲೂರು ಗ್ರಾಮಕ್ಕೆ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಬುಧುವಾರ ದಿಗ್ವಿಜಯಗೈದರು.

ಗ್ರಾಮಕ್ಕೆ ಆಗಮಿಸಿದ ಅವರನ್ನು ಗ್ರಾಮಸ್ಥರು, ವಿಪ್ರ ಬಾಂಧವರು ವಾದ್ಯ ವೈಭವ ಬಾಣ ಬಿರುಸುಗಳಿಂದ ಪೂರ್ಣಕುಂಭದಿಂದ ಸ್ವಾಗತಿಸಿದರು. ಅನೇಕ ಭಕ್ತಾದಿಗಳು ತಮ್ಮ ಮನೆಗಳಲ್ಲಿ ಶ್ರೀಗಳ ಪಾದಪೂಜೆ ನೆರವೇರಿಸಿದರು.

ನಂತರ ಗ್ರಾಮದ ಪುರಾತನ ಹಾಗೂ ವಿಶಿಷ್ಟ ವಾಸ್ತುಶಿಲ್ಪವುಳ್ಳ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸಂಸ್ಥಾನ ಪೂಜೆ ನೆರವೇರಿಸಿದರು. ಬಂದ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ವಿತರಿಸಿದರು.

ಕಲ್ಯಾಣಿ ವಾಸುದೇವಾಚಾರ್ಯ ಕುಟುಂಬಸ್ಥರು ಭಕ್ತಾದಿಗಳಿಗೆ  ಸಕಲ ವ್ಯವಸ್ಥೆ ಹಾಗೂ ತೀರ್ಥ ಪ್ರಸಾದ ವ್ಯವಸ್ಥೆ ಮಾಡಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. 

                 
ಕೃಷ್ಣಾನದಿ ತೀರಕ್ಕೆ ಭೇಟಿ: ಸಾಯಿಂಕಾಲ ಗ್ರಾಮದ ಕೃಷ್ಣಾನದಿ ತೀರದ  ಶ್ರೀವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರ ತೀರ್ಥ

ಕರಾರ್ಚಿತ ಮುಖ್ಯ ಪ್ರಾಣ ದೇವರ ಸನ್ನಿದಾನಕ್ಕೆ ಭೇಟಿ ನೀಡಿ ಮಂಗಳಾರತಿ ನೆರವೇರಿಸಿ ನದಿ ತೀರದಲ್ಲಿ ಕೆಲ ಹೊತ್ತು ವಿಹರಿಸಿದರು.

ಕಾಡ್ಲೂರು ಸಂಸ್ಥಾನದಿಂದ ಶ್ರೀಪಾದಂಗಳವರಿಗೆ
ಭಕ್ತಿಪೂರ್ವಕವಾಗಿ ಗೌರವ ಸಮರ್ಪಣೆ ಮಾಡಲಾಯಿತು.

Comments

Popular posts from this blog