ರಾಯಚೂರು ಮತ್ತು ಕೊಪ್ಪಳ ಆರ್ ಡಿ ಸಿ ಸಿ ಬ್ಯಾಂಕ್ ನೇಮಕಾತಿ ಹೊಸ ರೋಸ್ಟರ್ ಬಿಂದು ಅನ್ವಯ ಮಾಡಿ- ರವೀಂದ್ರನಾಥ ಪಟ್ಟಿ. ಜಯ ಧ್ವಜ ನ್ಯೂಸ್, ರಾಯಚೂರು,ಮೇ.17- ರಾಯಚೂರು ಮತ್ತು ಕೊಪ್ಪಳ ಆರ್ ಡಿ ಸಿ ಸಿ ಬ್ಯಾಂಕ್ (371ಜೆ) ನೇಮಕಾತಿ ಹೊಸ ರೋಸ್ಟರ್ ಬಿಂದು ಅನ್ವಯ ನೇಮಕಾತಿ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಕೋರ್ ಕಮೀಟಿ ಸದಸ್ಯರಾದ ರವೀಂದ್ರನಾಥ ಪಟ್ಟಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ತರಾತುರಿಯಲ್ಲಿ ನೇಮಕಾತಿ ಮಾಡುತ್ತಿದೆ ಈಗಾಗಲೆ ಮೌಖಿಕ ಸಂದರ್ಶನ ನಡೆಯುತ್ತಿದೆ ಹೊಸ ರೋಸ್ಟರ್ ಅಡಿ ಮೀಸಲಾತಿ ನೀಡದೆ ಅನ್ಯಾಯ ನಡೆಸುತ್ತಿದೆ ಎಂದು ಆರೋಪಿಸಿದ ಅವರು ರೋಸ್ಟರ್ ಮಾಡದೆ ನೇಮಕಾತಿ ಮಾಡಿದ್ದಲ್ಲಿ ಕಾನೂನಾತ್ಮಕ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ನರಸಿಂಹಲು ನೆಲಹಾಳ, ರಾಜು ಪಟ್ಟಿ, ಎಸ್. ಪ್ರಸಾದ್, ಎಂ.ವಸಂತಕುಮಾರ ಇತರರು ಉಪಸ್ಥಿತರಿದ್ದರು.


Comments
Post a Comment