ಜೂನ್ 4 ರಂದು ಕೇಂದ್ರ ಹಣಕಾಸು  ಸಚಿವೆ ನಿರ್ಮಲಾ ಸೀತಾರಾಮನ್  ರಾಯಚೂರು ಜಿಲ್ಲಾ ಪ್ರವಾಸ

ಜಯ ಧ್ವಜ ನ್ಯೂಸ್ ,ರಾಯಚೂರು ಜೂನ್ ,2- ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಜೂ 4 ರಂದು ರಾಯಚೂರು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಅಂದು ಬೆಳಿಗ್ಗೆ 11:15ಕ್ಕೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಬಡೆಪಲ್ಲಿ ಗ್ರಾಮದಿಂದ ನಿರ್ಗಮಿಸಿ, ಮಧ್ಯಾಹ್ನ 12 ಗಂಟೆಗೆ ರಾಯಚೂರಿನ ಶಕ್ತಿನಗರಕ್ಕೆ ಆಗಮಿಸಿ ಶಕ್ತಿ ನಗರದ ಆರ್.ಟಿ.ಪಿ.ಎಸ್. ಅತಿಥಿ ಗೃಹದಲ್ಲಿ ರಾಯಚೂರು ಮತ್ತು ಯಾದಗಿರಿ ಮಹತ್ವಾಕಾಂಕ್ಷೆ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸುವರು.

ನಂತರ ಮಧ್ಯಾಹ್ನ 2:30ಗಂಟೆಗೆ ಶಕ್ತಿನಗರದ ಆರ್.ಟಿ.ಪಿ.ಎಸ್ ಅತಿಥಿ ಗೃಹದಿಂದ ನಿರ್ಗಮಿಸಿ, ರಾಯಚೂರಿನ ನೂತನ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಭಾರತ ವನ ಪ್ಲಾಂಟೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ನಂತರ ಸಂಜೆ 4 ಗಂಟೆಗೆ ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ಕಡೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog