ಎನ್ ಹೆಚ್ 748ಎ ನಿರ್ಮಾಣ  ರೈತರ ಜಮೀನುಗಳಿಗೆ ಸಂಪರ್ಕ ರಸ್ತೆ ಒದಗಿಸಲು ಆಗ್ರಹ- ಶರಣಪ್ಪ ಉದ್ಬಾಳ.                                                       ಜಯ ಧ್ವಜ ನ್ಯೂಸ್, ರಾಯಚೂರು, ಜೂ.1- ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 748ಎ ಯಲ್ಲಿ ರೈತರ ಜಮೀನುಗಳಿಗೆ ಸಂಪರ್ಕ ರಸ್ತೆ ಒದಗಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ 748ಎ  ಜಮೀನುಗಳ ರಸ್ತೆ ವಂಚಿತ ರೈತರ ಹೋರಾಟ ಸಮಿತಿ ಸಂಚಾಲಕ ಶರಣಪ್ಪ ಉದ್ಬಾಳ ಹೇಳಿದರು.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಸ್ಕಿ ತಾಲೂಕಿನ ಗೋನವಾರ, ಮುಸ್ಲಿ ಕಾರ್ಲಕುಂಟಿ, ಬಸ್ಸಾಪುರ ಮುಂತಾದ ಗ್ರಾಮಗಳ ಕೆಲ ಜಮೀನುಗಳು ರಾಷ್ಟ್ರೀಯ ಹೆದ್ದಾರಿ ಪಕ್ಕಯಿದ್ದು ಅವುಗಳಿಗೆ ಸಂಪರ್ಕ್ ರಸ್ತೆ ಒದಗಿಸದ ಕಾರಣ ರೈತರಿಗೆ ಜಮೀನುಗಳಿಗೆ ಹೋಗಲು ಟ್ರಾಕ್ಟರ್ ಇನ್ನಿತರ ಕೃಷಿ ಉಪಕರಣ ಹೋಗಲು ಅನಾನುಕೂಲತೆಯಿದ್ದು  ಈ ಹಿಂದೆ ನೀಡಿದ ಭರವಸೆಯಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಂಪರ್ಕ ರಸ್ತೆ ಒದಗಿಸುವುದಾಗಿ ತಿಳಿಸಿದ್ದರು ಆದರೆ ಇದೀಗ ಅವರು ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಈ ಹಿಂದಿನ ಜಿಲ್ಲಾಧಿಕಾರಿಗಳಿಗೂ ನಮ್ಮ ಸಮಸ್ಯೆ ವಿವರಿಸಿದಾಗ ಅವರು ಸ್ಪಂದಿಸದ ಕಾರಣ ರೈತರಿಗೆ ಅನ್ಯಾಯವಾಗಿದ್ದು ಈ ಬಗ್ಗೆ ಹಂತ ಹಂತವಾಗಿ ಹೋರಾಟ ರೂಪಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಮರೇಗೌಡ, ಶರಣಗೌಡ, ಶಂಕ್ರಣ್ಣ, ಸಿದ್ರಾಮಪ್ಪ, ದೇವರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog