ಜಿಲ್ಲೆಗೆ ಸಚಿವ ಸ್ಥಾನ ದೆಹಲಿಯಲ್ಲಿ ಕಸರತ್ತು: ಸಚಿವಾಕಾಂಕ್ಷಿಗಳಿಂದ ಹೈಕಮಾಂಡ್ ಭೇಟಿ. ಜಯ ಧ್ವಜ ನ್ಯೂಸ್, ರಾಯಚೂರು,ಜೂ.1- ಡಿಕೆ ಶಿವಕುಮಾರ್ ರವರು ಜೂ.3ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕ ನಿಗದಿಯಾದ ಬೆನ್ನಲ್ಲೆ ಸಚಿವ ಸಂಪುಟ ರಚನೆ ಕಸರತ್ತು ವೇಗ ಪಡೆದಿದ್ದು ಸಚಿವಾಕಾಂಕ್ಷಿಗಳು ಹೈಕಮಾಂಡ್ ಭೇಟಿ ಮಾಡಿ ತಮಗೆ ಅವಕಾಶ ನೀಡುವಂತೆ ಕೋರುತ್ತಿದ್ದಾರೆ. ಜಿಲ್ಲೆಯ ಕೆಲ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದು ಮೊದಲ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಶೀಲರಾಗಿದ್ದಾರೆ. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ದೆಹಲಿಗೆ ದೌಡಾಯಿಸಿದ್ದು ತೀರ್ವ ಲಾಬಿ ನಡೆಸಿದ್ದಾರೆ ಎನ್ನಲಾಗಿದ್ದು ಸಿದ್ದರಾಮಯ್ಯ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ಸಿಗದ ಕಾರಣ ಈ ಬಾರಿಯಾದರೂ ಸಚಿವ ಸ್ಥಾನ ಪಡೆಯಲೇಬೇಕು ಎಂಬ ಛಲದಿಂದ ಕಸರತ್ತು ಮಾಡುತ್ತಿದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸಹ ಸಾಥ್ ನೀಡಿದ್ದಾರೆ . ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ಎರೆಡು ಬಣಗಳಿರುವುದು ಜಗಜ್ಜಾಹೀರಾಗಿದ್ದು ಸದ್ಯ ಯಾವ ಬಣಕ್ಕೆ ಸಚಿವ ಸ್ಥಾನ ದೊರೆಯುತ್ತದೆ ಎಂಬುದು ಒಂದೆರೆಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.

Comments
Post a Comment