ಶಾಸಕ ಬಸನಗೌಡ ದದ್ದಲ್ ಗೆ ಸಚಿವ ಸ್ಥಾನ ನೀಡಲು ಒತ್ತಾಯ.   
                                                                                ಜಯ ಧ್ವಜ ನ್ಯೂಸ್, ರಾಯಚೂರು, ಜೂ.2- ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ರವರಿಗೆ ಸಚಿವ ಸ್ಥಾನ ನೀಡಬೇಕೆಂದು ಗಿಲ್ಲೆಸುಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ ಮಟಮಾರಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎರೆಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನಪರ ಕಾರ್ಯಗಳನ್ನು ಮಾಡುತ್ತಿರುವ ದದ್ದಲ್ ರವರು ಕ್ಷೇತ್ರದಲ್ಲಿ ಕೆರೆ ತುಂಬುವ ಯೋಜನೆ, ಬ್ರಿಡ್ಜ್ ಕಂ ಬ್ಯಾರೇಜ್, ಏತ ನೀರಾವರಿ, ಸೇತುವೆಗಳು, ರಸ್ತೆಗಳು ಮುಂತಾದ ಮೂಲಭೂತ ಸೌಕರ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಅಲ್ಲದೆ ರಾಯಚೂರು ವಿವಿಗೆ ಮಹರ್ಷೀ ವಾಲ್ಮೀಕಿ ವಿವಿ ಯಂದು ನಾಮಕರಣ ಮಾಡಲು ಶ್ರಮಿಸಿದ್ದು ಕ್ಷೇತ್ರದಲ್ಲಿ ಎಲ್ಲಾ ಜನಾಂಗದ ಜನರೊಂದಿಗೆ ಸ್ನೇಹಮಯವಾಗಿದ್ದು ಕಾರ್ಯಕರ್ತರಿಗೂ ಪಕ್ಷ , ಸರ್ಕಾರದಲ್ಲಿ ಸ್ಥಾನಮಾನ ಸಿಗುವಲ್ಲಿ ಶ್ರಮಿಸುತ್ತಿದ್ದು ಅವರನ್ನು ಸಚಿವರನ್ನಾಗಿ ಮಾಡಿದರೆ ಮತ್ತಷ್ಟು ಅಭಿವೃದ್ಧಿ ಜೊತೆಗೆ ಜವಾಬ್ದಾರಿ ಹೆಚ್ಚುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಪವನ್ ಕಿಶೋರ್ ಪಾಟೀಲ್,ಬಸವರಾಜ ವಕೀಲರು, ಮಲ್ಲಿಕಾರ್ಜುನ ನಾಯಕ,ಶಿವಪ್ಪ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments

Popular posts from this blog