ಜನರಿಗೆ ಸೇವೆ ಸಲ್ಲಿಸುತ್ತಿರುವುದು ತೃಪ್ತಿ ದಾಯಕವಾಗಿದೆ - ಶಾಸಕ ಡಾ. ಶಿವರಾಜ್ ಪಾಟೀಲ್

   

ಜಯ ಧ್ವಜ ನ್ಯೂಸ್ ರಾಯಚೂರು , ಜೂ.3- ಜನರಿಗೆ ಸೇವೆ ಸಲ್ಲಿಸುತ್ತಿರುವುದು ತೃಪ್ತಿದಾಯಕವಾಗಿದೆ ಎಂದು ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು. ಅವರಿಂದು ನಗರದ ನವೋದಯ ಆಸ್ಪತ್ರೆ ಹತ್ತಿರದ ಸಿದ್ದನಾಥ್ ಕಾಲೋನಿಯಲ್ಲಿನ ಬ್ರಾಹ್ಮಣ ಸಮಾಜದ ಮಹತ್ವಾಕಾಂಕ್ಷೆಯ ಗಾಯತ್ರಿ ಭವನದ ಮೊದಲನೆಯ ಮಹಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ  ನೆರವೇರಿಸಿ ಮಾತನಾಡಿದರು. 25 ಲಕ್ಷ  ರೂಪಾಯಿಗಳ ಕಾಮಗಾರಿಗೆ  ಚಾಲನೆ ನೀಡಲಾಗುತ್ತಿದ್ದು ಬ್ರಾಹ್ಮಣ ಸಮಾಜವು ತಮ್ಮ ಮೇಲೆ ಇಟ್ಟಂತಹ ವಿಶ್ವಾಸ, ಅಭಿಮಾನಕ್ಕೆ ಯಾವತ್ತೂ ಚಿರಋಣಿಯಾಗಿದ್ದು, ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಲು ಸಮಾಜದ ಕೊಡುಗೆ ಅಪಾರವಾಗಿದ್ದು ಆ ಒಂದು ಸಮಾಜಕ್ಕೆ ಉಪಯೋಗವಾಗುವಂತಹ ಗಾಯಿತ್ರಿ ಭವನ ನಿರ್ಮಾಣ ತನ್ನ ಹೊಣೆ ಎಂದು ಭರವಸೆ ನೀಡಿದಂತೆ ಇಂದು ಅದರ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ ಮಾತು ಉಳಿಸಿಕೊಂಡಿದ್ದೇನೆ ಎಂದು ಹೇಳಿದರು.


ಮುಂದೆಯೂ ಸಹ ಇದೇ ರೀತಿ ಇನ್ನೂ ಹತ್ತು ಹಲವು ಸೇವೆಗಳನ್ನು ಮಾಡುತ್ತಾ ಈ ಸಮಾಜದೊಂದಿಗೆ ಬೆಂಬಲವಾಗಿ ಇರುತ್ತೇನೆ ಎಂದು ಸಹ ನುಡಿದರು.
ಈ ಸಂದರ್ಭದಲ್ಲಿ ಪಂಡಿತರು , ಜಿಲ್ಲಾ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ, ಸಮಸ್ತ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಮಾಜಿ ಸದಸ್ಯರು, ಸಮಾಜದ ಗಣ್ಯರು, ಹಿರಿಯರು,  ಯುವಕರು ಮತ್ತಿತರರು ಪಾಲ್ಗೊಂಡಿದ್ದರು.

Comments

Popular posts from this blog