ಬೋಸರಾಜುರವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಬೇಕು- ಬಾಲಸ್ವಾಮಿ ಕೊಡ್ಲಿ. ಜಯ ಧ್ವಜ ನ್ಯೂಸ್, ರಾಯಚೂರು, ಜೂ.16- ಎರಡನೆ ಹಂತದ ಸಚಿವ ಸಂಪುಟ ರಚನೆಯಲ್ಲಿ ಎನ್.ಎಸ್.ಬೋಸರಾಜುರವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕರಾದ ಬಾಲಸ್ವಾಮಿ ಕೊಡ್ಲಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಸಣ್ಣ ನೀರಾವರಿ ಸಚಿವರಾಗಿ ಉತ್ತಮ ಕಾರ್ಯ ಮಾಡಿರುವ ಬೋಸರಾಜು ರವರು ನಗರದಲ್ಲಿ ಹಾಗೂ ವಿವಿಧೆಡೆ ಅತಿ ಹೆಚ್ಚು ಅನುದಾನ ವಿನಿಯೋಗಿಸಿ ಕೆಲಸ ಮಾಡಿದ್ದಾರೆ ಎಂದರು. ಕೆರೆಗಳ ಅಭಿವೃದ್ಧಿ , ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯ ಒದಗಿಸಿದ್ದಾರೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯ ದೊರಕುವಂತೆ ಮಾಡಿದ್ದಾರೆ ಎಂದ ಅವರು ಮಾಡಿರುವ ಕಾರ್ಯಗಳ ಮಾಹಿತಿ ನೀಡಿದರು. ಭಾರತ ಜೋಡೋ ಯಾತ್ರೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ಹಾದು ಹೋಗುವಂತೆ ಮಾಡಿದರು. ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ವಿಶ್ವಾಸ ಗಳಿಸಿ ಪಕ್ಷವನ್ನು ಜಿಲ್ಲೆಯಲ್ಲಿ ಸಧೃಡಗೊಳಿಸಿದ್ದಾರೆ ಆದ್ದರಿಂದ ಎಐಸಿಸಿ ಅಧ್ಯಕ್ಷರು , ಪಕ್ಷದ ವರಿಷ್ಠರು, ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ರಾಜ್ಯ ಉಸ್ತುವಾರಿಗಳು ಬೋಸರಾಜು ರವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ಶೀಘ್ರದಲ್ಲೆ ಅವರ ಬೆಂಬಲಿಗರೊಂದಿಗೆ ದೆಹಲಿಗೆ ನಿಯೋಗ ತೆರಳಿ ವರಿಷ್ಠರ ಭೇಟಿ ಮಾಡುತ್ತೇವೆಂದರು. ಈ ಸಂದರ್ಭದಲ್ಲಿ ಮರಿಸ್ವಾಮಿ ಗಟ್ಟು ಬಿಚ್ಚಾಲಿ, ಅರುಣಚಂದ್, ಪ್ರೀತಮ್ ಕೊಡ್ಲಿ ಇದ್ದರು.

Comments
Post a Comment