ಕಲ್ಯಾಣ ಕರ್ನಾಟಕ ಮನೋವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಡಾ. ಮನೋಹರ್ ಪತ್ತಾರ್ ಆಯ್ಕೆ.

 ಜಯ ಧ್ವಜ ನ್ಯೂಸ್ ,ರಾಯಚೂರು ಜೂ. 17-

 ರಾಯಚೂರು ನಗರದ ಮಾನಸಿಕ ಮತ್ತು ನರರೋಗ ತಜ್ಞರಾದ ಡಾ. ಮನೋಹರ್ ವೈ ಪತ್ತಾರ್ ಇವರು ಕಲ್ಯಾಣ ಕರ್ನಾಟಕ ಮನೋವೈದ್ಯಕೀಯ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಂದ ಮನೋರೋಗ ತಜ್ಞ ವೈದ್ಯರು ರಾಯಚೂರು ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಡಾ. ಮನೋಹರ್ ವೈ  ಪತ್ತಾರ್ ರಾಯಚೂರು, ಉಪಾಧ್ಯಕ್ಷರಾಗಿ ಡಾ. ಬಾಬುರಾವ್ ಮಾರ್ಕಲ್ ಬೀದರ್, ಗೌರವ ಕಾರ್ಯದರ್ಶಿಯಾಗಿ ಡಾ. ವಿನಯ್ ಕುಮಾರ್, ಖಜಾಂಚಿಯಾಗಿ ಡಾ. ಶರಣಬಸವರಾಜ ರಾಯಚೂರು, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments

Popular posts from this blog