ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳ ಖಾಸಗಿಕರಣಕ್ಕೆ ಆಕ್ಷೇಪಣೆ  

 


 ಜಯ ಧ್ವಜ ನ್ಯೂಸ್ ರಾಯಚೂರು , ಜೂ.15- ಮುಂಬೈಯ ಟಾಟಾ ಪವರ್ ಕಂಪನಿಯು ನಮ್ಮ ರಾಜ್ಯದ ವಿದ್ಯುತ್ ಕ್ಷೇತ್ರಗಳಲ್ಲಿ ಆದಾಯ ತರುವಂತ ಜಿಲ್ಲೆಗಳಾದ ಜೆಸ್ಕಾಂ ಕಂಪನಿ ವ್ಯಾಪ್ತಿಯ ರಾಯಚೂರು, ಬಳ್ಳಾರಿ, ಯಾದಗಿರಿ, ಕಲ್ಬುರ್ಗಿ. ಮತ್ತು ಮೆಸ್ಕಾಂ ಕಂಪನಿ  ವ್ಯಾಪ್ತಿಯ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ.ಹೆಸ್ಕಾಂ ಕಂಪನಿ  ವ್ಯಾಪ್ತಿಯ ಹುಬ್ಬಳ್ಳಿ, ಬೆಳಗಾವಿ, ಸಿರಸಿ.ಬೆಸ್ಕಾಂ ಕಂಪನಿ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ , ಕೋಲಾರ, ರಾಮನಗರ, ತುಮಕೂರು, ಚಿತ್ರದುರ್ಗ. ಚೆಸ್ಕಾಂ ಕಂಪನಿ ವ್ಯಾಪ್ತಿಯ ಮೈಸೂರು, ಹಾಸನ, ಚಾಮರಾಜನಗರ ಒಟ್ಟು 19 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡಲು ಪರವಾನಿಗೆ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಅಕ್ಷೇಪಣೆಯನ್ನು ಕೋರಿರುವುದಕ್ಕೆ ಕವಿಪ್ರನಿ ನೌಕರರ ಕನ್ನಡ ಸಂಘ ರಾಯಚೂರು ವತಿಯಿಂದ ತೀವ್ರ ವಿರೋಧ ವ್ಯಕ್ತಪಡಿಸಿದೆ.


ಶತಮಾನಗಳಿಂದ ವಿದ್ಯುತ್ ಜಾಲ ನಿರ್ಮಿಸಲು ಅನೇಕ ನೌಕರರು ತಮ್ಮ ಪ್ರಾಣವನ್ನು ಬಲಿ ಕೊಟ್ಟು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿರುತ್ತಾರೆ ಈ ಖಾಸಗಿಕರಣದಿಂದ ನೌಕರರ ಸೇವಾ ಭದ್ರತೆಗೆ ಧಕ್ಕೆ ಉಂಟಾಗಲಿದ್ದು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಉಂಟಾಗಿ ಬಡ, ದೀನ ದಲಿತರಿಗೆ ಮೀಸಲಾತಿ ಇಲ್ಲದಂತಾಗುತ್ತದೆ ಈಗಾಗಲೇ ರಾಜ್ಯ ಸರ್ಕಾರದಿಂದ ಜಾರಿಯಲ್ಲಿರುವ ಗ್ರಹ ಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳು ರದ್ದಾಗಿ ರೈತರಿಗೆ ಸಬ್ಸಿಡಿ ಇಲ್ಲದಂತಾಗುತ್ತದೆ ಜನಸಾಮಾನ್ಯರಿಗೆ ವಿದ್ಯುತ್ ದರ ಹೆಚ್ಚಿಸಲಾಗುತ್ತದೆ, ವಿದ್ಯುತ್ ಗುತ್ತಿಗೆದಾರರು ಕೆಲಸ ಕಳೆದುಕೊಂಡು ಬೀದಿಗೆ ಬರುತ್ತಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸೇವಾ ಮನೋಭಾವ ಹೊಂದಿರುವ  ವಿದ್ಯುತ್ ಶಕ್ತಿ, ನೀರು, ಆರೋಗ್ಯ, ಲೋಕೋಪಯೋಗಿ ಮುಂತಾದ ಸಂಸ್ಥೆಗಳು ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರಬೇಕು. ಈ ಸೇವಾ ವಲಯಗಳು ಖಾಸಗಿಯವರ ಪಾಲಾದರೆ ಜನಸಾಮಾನ್ಯರ ಜೀವನ ಬಹಳ ದುಃಸ್ತರವಾಗಿ, ದೇಶದಲ್ಲಿ ಶಾಂತಿ ಕದಡಿ, ಗಲಭೆಗಳಾಗುವ ಸಂಭವವಿರುತ್ತದೆ  ಎಂದಿದ್ದಾರೆ. ಈ ಖಾಸಗಿಕರಣವು ಸಂವಿಧಾನ ಆಶಯಗಳಿಗೆ ವಿರುದ್ಧವಾಗಿರುತ್ತದೆ 

 ಆದುದರಿಂದ ವಿದ್ಯುತ್ ದೇಶದ ಭದ್ರತೆ ಮತ್ತು ಜನರ ಬದುಕಿಗೆ ಅತ್ಯಗತ್ಯ ವಾಗಿದ್ದು , ನಮ್ಮ ಇಂಧನ ಇಲಾಖೆಯ ನೌಕರರ, ನಿರುದ್ಯೋಗಿ ಯುವಕರ, ಬಡವ ದೀನ ದಲಿತರ, ರೈತರ, ಗುತ್ತಿಗೆದಾರರ ನಮ್ಮ ಕನ್ನಡ ನಾಡಿನ  ಜನತೆಯ ಹಿತದೃಷ್ಟಿಯಿಂದ ಟಾಟಾ ಪವರ್ ಕಂಪನಿಯು ಸಲ್ಲಿಸಿದ ಅರ್ಜಿಗೆ ಪರವಾನಿಗೆಯನ್ನು ನೀಡಬಾರದೆಂದು ಕವಿಪ್ರನಿ ನೌಕರರ ಕನ್ನಡ ಸಂಘ ಅಧ್ಯಕ್ಷರಾದ ಜೆ.ಎಲ್.ಗೋಪಿ ಪ್ರಕಟಣೆ ಮೂಲಕ  ಅಕ್ಷೇಪಣೆ ವ್ಯಕ್ತಪಡಿಸಿದ್ದಾರೆ.



 

Comments

Popular posts from this blog