ಗಿಡ ನೆಡುವ ಮೂಲಕ ಜನ್ಮದಿನ ಆಚರಣೆ ಸ್ಪೂರ್ತಿದಾಯಕ- ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ್

ಜಯ ಧ್ವಜ ನ್ಯೂಸ್ ರಾಯಚೂರು , ಜೂ.16-ಗ್ರೀನ್ ರಾಯಚೂರು ಗೌರವಾಧ್ಯಕ್ಷರಾದ ಶ್ರೀ ಕೊಂಡ ಹನುಮೇಶ್ ಕುಮಾರ್ ಅವರು ತಮ್ಮ 52ನೇ ಜನ್ಮದಿನದ ಅಂಗವಾಗಿ 52 ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಿದರು.

ರಾಯಚೂರು ವಲಯ ಅರಣ್ಯಾಧಿಕಾರಿ ಶ್ರೀ ರಾಜೇಶ್ ನಾಯಕ್ ಅವರು ಮಾತನಾಡಿ, “ಗಿಡ ನೆಟ್ಟು ಜನ್ಮದಿನ ಆಚರಿಸುವುದು ಅತ್ಯಂತ ಸ್ಪೂರ್ತಿದಾಯಕ ಕಾರ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಜನ್ಮದಿನ ಹಾಗೂ ಇತರೆ ವಿಶೇಷ ಸಂದರ್ಭಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು. ಇಂತಹ ಕಾರ್ಯಗಳಿಂದ ಹಸಿರೀಕರಣ ಹೆಚ್ಚಾಗಿ ಆರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು” ಎಂದು ಹೇಳಿದರು.

ಶ್ರೀ ಕೊಂಡ ಹನುಮೇಶ್ ಕುಮಾರ್ ಅವರು ತಮ್ಮ ತಂದೆ, ಗ್ರೀನ್ ರಾಯಚೂರು ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಶ್ರೀ ಕೊಂಡ ಕೃಷ್ಣಮೂರ್ತಿ ಅವರ ಆದರ್ಶಗಳನ್ನು ಅನುಸರಿಸಿಕೊಂಡು ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಈ ಬಾರಿಯೂ ತಮ್ಮ 52ನೇ ಜನ್ಮದಿನವನ್ನು 52 ಗಿಡಗಳನ್ನು ನೆಡುವ ಮೂಲಕ ವಿಶೇಷವಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಗ್ರೀನ್ ರಾಯಚೂರು ಸದಸ್ಯರು, ಮದರ್ ಇಂಡಿಯಾ ಸಿಬ್ಬಂದಿ, ಶ್ರೀಮತಿ ಕೊಂಡ ಹಿಮಾಬಿಂದು, ಶ್ರೀ ಕೊಂಡ ಆಶೀಷ್, ಶ್ರೀಮತಿ ಸ್ನೇಹಲ್ ಕೊಂಡಾ ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಅನೇಕ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದು, ವೃಕ್ಷಾರೋಪಣೆಯಲ್ಲಿ ಭಾಗವಹಿಸಿದರು.


Comments

Popular posts from this blog