ಭಾರತೀಯ ರೈಲ್ವೆ - ದಿವ್ಯಾಂಗಜನ ರಿಯಾಯಿತಿ ಕಾರ್ಡ್ ಆನ್ಲೈನ್ ನಲ್ಲಿ ಲಭ್ಯ - ಡಾ.ಬಾಬುರಾವ್
ಜಯ ಧ್ವಜ ನ್ಯೂಸ್ ,ರಾಯಚೂರು, ಜೂ.18- ಭಾರತೀಯ ರೈಲ್ವೆ ಈಗ ದಿವ್ಯಾಂಗಜನ ಪ್ರಯಾಣಿಕರಿಗೆ ರೈಲ್ವೆ ರಿಯಾಯಿತಿ ಫೋಟೋ ಗುರುತಿನ ಚೀಟಿ ನೀಡಿಕೆ ಮತ್ತು ನವೀಕರಣವನ್ನು ಸೌಲಭ್ಯವನ್ನು ಇನ್ನು ಮುಂದೆ ಸಂಪೂರ್ಣ ಆನ್ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಅವರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಅವರು, ಸಂಪೂರ್ಣ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ, ದಾಖಲೆ ಅಪ್ಲೋಡ್, ಸ್ಥಿತಿ ಪರಿಶೀಲನೆ, ಅನುಮೋದಿತ ಕಾರ್ಡ್ ಡೌನ್ಲೋಡ್ - ಎಲ್ಲವೂ ಡಿಜಿಟಲೀಕರಣ ಮಾಡಲಾಗಿದೆ.
ರೈಲ್ವೆ ಕಚೇರಿಗೆ ಹೋಗುವ ಅಗತ್ಯವಿಲ್ಲ:
ಮೊದಲು ರೈಲ್ವೆ ಕಚೇರಿಗೆ ಹೋಗಬೇಕಿತ್ತು. ಅಲ್ಲಿಂದ ಡಿವಿಜನಲ್ ಕಚೇರಿಗೆ ರವಾನೆ ಆಗಿ ಅಲ್ಲಿ ಪರಿಶೀಲನೆ ಮಾಡಿ ಕಾರ್ಡ್ ನೀಡಲಾಗುತ್ತಿತ್ತು. ಹಲವು ದಿನಗಳ ಕಾಲ ಕಾಯಬೇಕಾಗಿತ್ತು. ಈಗ ಡಿಜಿಟಲ್ ಆಗಿ ಆಗುತ್ತದೆ ರೈಲು ಟಿಕೆಟ್ನಲ್ಲಿ ರಿಯಾಯಿತಿ ಪಡೆಯಲು ಅರ್ಹರಾದ ದಿವ್ಯಾಂಗಜನ ಪ್ರಯಾಣಿಕರು ಆನ್ಲೈನ್ ಅರ್ಜಿ ಸಲ್ಲಿಸಲು ವೆಬ್ಸೈಟ್: http://divyangjanid.indianrail.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತ ಸರಕಾರದ ನೈಋತ್ಯ ರೈಲ್ವೆ ದಿವ್ಯಾಂಗಜನರಿಗೆ ಈಗ ಸಿಹಿ ಸುದ್ಧಿ ನೀಡಿದ್ದು ಕರ್ನಾಟಕವು ನೈಋತ್ಯ ರೈಲ್ವೆ ವಲಯದ ಅಡಿಯಲ್ಲಿ ಬರುತ್ತದೆ. ಅರ್ಜಿ ಸಲ್ಲಿಸಲು ಸಾಮಾನ್ಯವಾಗಿ ಆಧಾರ್, ಅಂಗವೈಕಲ್ಯ ಪ್ರಮಾಣಪತ್ರ, ಫೋಟೋ ಮತ್ತು ಹಳೆಯ ಕಾರ್ಡ್ ಬೇಕಾಗುತ್ತದೆ.
ಸೌಲಭ್ಯಗಳು:
1. ರೈಲ್ವೆ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ
2. ಹೊಸ ಕಾರ್ಡ್ / ನವೀಕರಣಕ್ಕಾಗಿ ಮನೆಯಿಂದಲೇ ಅರ್ಜಿ ಸಲ್ಲಿಸಬಹುದು
3. ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬಹುದು.
4. ಅರ್ಜಿಯ ಸ್ಥಿತಿಯನ್ನು ಆನ್ಲೈನ್ನಲ್ಲಿ ಟ್ರ್ಯಾಕ್ ಮಾಡಬಹುದು.
5. ಅನುಮೋದಿತ ಕಾರ್ಡ್ ಅನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಬಹುದು.
ರೈಲ್ವೆ ಟಿಕೆಟ್ನಲ್ಲಿ ರಿಯಾಯಿತಿ ಪಡೆಯಲು ಅರ್ಹರಾದ ದಿವ್ಯಾಂಗಜನ ಪ್ರಯಾಣಿಕರಿಗೆ ಅದರಲ್ಲೂ ಬೆಂಗಳೂರು ವಿಭಾಗದ ಪ್ರಯಾಣಿಕರಿಗೆ ಇದು ನೇರ ಅನ್ವಯವಾಗುತ್ತದೆ. ಈ ಸೌಲಭ್ಯದಿಂದಾಗಿ ದೂರದ ರೈಲ್ವೆ ಕಚೇರಿಗೆ ಅಲೆದಾಡುವ ತೊಂದರೆ ಉಳಿಯುತ್ತದೆ. ಕಾರ್ಡ್ ಅನುಮೋದನೆ ಆದ ನಂತರ PDF ಡೌನ್ಲೋಡ್ ಮಾಡಿ ಪ್ರಿಂಟ್ ಮಾಡಿಕೊಂಡರೆ ಸಾಕು ಎಂದು ನೈರುತ್ಯ ರೇಲ್ವೆ ತಿಳಿಸಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ವಿಕಲಚೇತನ ಪರವಾಗಿ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಈಗ ಅದಕ್ಕೆ ಸ್ಪಂದನೆ ಸಿಕ್ಕು ಕಾರ್ಯರೂಪಕ್ಕೆ ಬಂದಿರುವುದು ಸಂತಸಕರ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Comments
Post a Comment