ಜು. 8 ರಂದು 'ಮಾಗಿದ ಮುತ್ಸದ್ದಿ' ಗ್ರಂಥ ಲೋಕಾರ್ಪಣೆ  ಹಾಗೂ ಅಭಿನಂದನಾ ಸಮಾರಂಭ:          ಎಂ.ಎಸ್.ಪಾಟೀಲರು ರಾಜಕೀಯ ಎದುರಾಳಿಗೂ ಒಳ್ಳೇದನ್ನೇ ಬಯಸಿದ್ದರು- ಪಾಪಾರೆಡ್ಡಿ.                                       ಜಯ ಧ್ವಜ ನ್ಯೂಸ್, ರಾಯಚೂರು,ಜು.6- ಹಿರಿಯ ಮುತ್ಸದ್ದಿ ರಾಜಕಾರಣಿ ಹಾಗೂ ಮಾಜಿ ಸಚಿವ ಎಂ.ಎಸ್. ಪಾಟೀಲರವರ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವನ್ನು ಜು.8ರಂದು ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷರು  ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಮತ್ತು ಗೌರವಾಧ್ಯಕ್ಷರು ಹಾಗೂ ಶಾಸಕರಾದ ಡಾ.ಶಿವರಾಜ ಪಾಟೀಲ್ ಹೇಳಿದರು. ಅವರೀರ್ವರು  ಜಂಟಿಯಾಗಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪಾಪಾರೆಡ್ಡಿ ಮಾತನಾಡಿ ಎಂ.ಎಸ್.ಪಾಟೀಲರು 70ರ ದಶಕದಿಂದಲೆ ರಾಜಕೀಯ ಮುನ್ನೆಲೆಗೆ ಬಂದವರು ಶಾಸಕರಾಗಿ, ಸಚಿವರಾಗಿ ವಿವಿಧ ಸ್ಥಾನಮಾನಗಳಿಸಿ ಉತ್ತಮ ನಡೆ ನುಡಿಯುಳ್ಳ ಸಜ್ಜನ ರಾಜಕಾರಣಿ ಎಂದು ಜನಿಜನಿತರಾದವರು ಎಂದರು. ವಿಧಾನಸಭೆ ನಗರ ಕ್ಷೇತ್ರದ  ಅನೇಕ ಚುನಾವಣೆಗಳಲ್ಲಿ ನಾನು ಅವರ ವಿರುದ್ಧ ಸ್ಪರ್ಧಿಸಿದ್ದೆ ಅವರ ಬಗ್ಗೆ ಚುನಾವಣೆ ಬಹಿರಂಗ ಸಮಾವೇಶಗಳಲ್ಲಿ ಅವರ ಬಗ್ಗೆ ರಾಜಕೀಯವಾಗಿ ವಾಗ್ದಾಳಿ ನಡೆಸಿದ್ದರೂ ಅವರು ನನ್ನ ಬಗ್ಗೆ ಎಂದು ಕೇಡು ಬಯಸದಿರುವುದು ಅವರ ದೊಡ್ಡಗುಣವೆಂದು ಕೊಂಡಾಡಿದರು. ನಾನು ನಗರಸಭೆ ಅಧ್ಯಕ್ಷನಾಗಿದ್ದ ವೇಳೆ ಅನೇಕ ಆಡಳಿತಾತ್ಮಕ ಅಚಾತುರ್ಯವಾದಾಗ ಅದನ್ನು ರಾಜಕೀಯವಾಗಿ ಬಳಸಿಕೊಳ್ಳದೆ ಜನರ ಪರ ನಿಲುವು ತಳೆದು ಜನಮಾನಸದಲ್ಲಿ ಉಳಿಯುವಂತೆ ಅನೇಕ ಕಾರ್ಯಗಳನ್ನು ಮಾಡಿದರು ಕೃಷ್ಣಾ ನದಿ ಕುಡಿಯುವ  ನೀರು ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಅಂದಿನ ಅವರ ರಾಜಕೀಯ ಘಟನಾವಳಿಗಳನ್ನು ಮೆಲುಕು ಹಾಕಿದರು. ಇತ್ತೀಚೆಗೆ ಅವರ ಆರೋಗ್ಯ ವಿಚಾರಿಸಲು ಹೋದ ವೇಳೆ ಅವರು ವಯೋಸಹಜವಾಗಿ ಬಳಲಿದ್ದು   ರಾಜಕೀಯ ವೈಭವ ಕಂಡ ಅವರು ಇಂದು ಸರಳವಾಗಿ ಇರುವುದನ್ನು ನೋಡಿದರೆ ಅವರ ಬಗ್ಗೆ ಕನಿಕರವು ಮೂಡಿತು ಮತ್ತು ಅವರು ಉತ್ತಮ ಸಂಸದೀಯ ಪಟು ಎಂಬುದಕ್ಕೆ ಇಂಬು ನೀಡಿತು ಅಂದೆ ಅವರು ಬಗ್ಗೆ ಅಭಿನಂದನಾ ಗ್ರಂಥ ಪ್ರಕಟಣೆ ನಿರ್ಧಾರ ಮಾಡಿದೆವು ಎಂದರು. ಜು.8 ರಂದು ಬೆಳಿಗ್ಗೆ  10.30ಕ್ಕೆ ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಎಂ.ಎಸ್.ಪಾಟೀಲರ ಕುರಿತು 'ಮಾಗಿದ ಮುತ್ಸದಿ' ಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭ ನಡೆಯಲಿದ್ದು ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ದಿವ್ಯ ಸಾನಿಧ್ಯ ವಹಿಸಲಾಗಿದ್ದು ಕಾರ್ಯಕ್ರಮ ಉದ್ಘಾಟನೆಯನ್ನು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ನೆರವೇರಿಸಲಿದ್ದಾರೆ ಎಂದರು. ಗ್ರಂಥ ಲೋಕಾರ್ಪಣೆಯನ್ನು ವಿಧಾನಸಭೆ ಮಾಜಿ ಸಭಾಪತಿ ಕೆ.ಆರ್. ರಮೇಶ್ ಕುಮಾರ್ ಮಾಡಲಿದ್ದು ಕೃತಿ ಪರಿಚಯವನ್ನು ಬಸವಂತರಾಯ ಕುರಿ ಮಾಡಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ,  ಮಾಜಿ ಸಚಿವ ಎನ್.ಎಸ್. ಬೋಸರಾಜು, ಸಚಿವ ಡಾ.ಶರಣಪ್ರಕಾಶ ಪಾಟೀಲ್ , ಸೇರಿದಂತೆ ವಿಧಾನ ಪರಿಷತ್ ಸದಸ್ಯರು,  ಹಾಲಿ ಮಾಜಿ ಸಚಿವರು, ಸಂಸದರು,ಶಾಸಕರು, ಹಿರಿಯ ರಾಜಕಾರಣಿಗಳು, ವಿವಿಧ ಜನಪ್ರತಿನಿಧಿಗಳು, ಗಣ್ಯರು, ಕುಟುಂಬಸ್ಥರು, ಅಭಿನಂದನಾ  ಸಮಿತಿ ಪದಾಧಿಕಾರಿಗಳು, ವಿಶೇಷ ಆಹ್ವಾನಿತರು,ಗ್ರಂಥ  ಗೌರವ ಸಂಪಾದಕ ರಾಮಣ್ಣ ಹವಳೆ, ಪ್ರಧಾನ ಸಂಪಾದಕ ಕೆ.ಸತ್ಯನಾರಾಯಣ, ಸಂಪಾದಕ ಡಾ.ಅಮರೇಶ ಯಾತಗಲ್, ಎಂ.ಎಸ್ . ಪಾಟೀಲ್ ಪುತ್ರ ಮಹೇಶ್ ಉಪಸ್ಥಿತರಿರಲಿದ್ದು ತಾವು ಅಧ್ಯಕ್ಷತೆ ವಹಿಸುತ್ತಿದ್ದು, ಶಾಸಕ ಡಾ.ಶಿವರಾಜ ಪಾಟೀಲ್ ಗಿರವಾಧ್ಯಕ್ಷತೆ ವಹಿಸಲಿದ್ದು 
ಅನೇಕ ಆಹ್ವಾನಿತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.


    ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ ಬಹುಶಃ ದೇಶದ ಇತಿಹಾಸದಲ್ಲಿ ಇಂತಹ ಕಾರ್ಯಕ್ರಮ ಆಗಿರಲಿಕ್ಕಿಲ್ಲವೆಂದ ಅವರು ರಾಜಕೀಯ ಎದುರಾಳಿಯ ಜೀವನ ಸಾಧನೆಯನ್ನು ಮಾಜಿ ಶಾಸಕ ಎ.ಪಾಪಾರೆಡ್ಡಿ ಗ್ರಂಥ ಮೂಲಕ ಹೊರ ತರುತ್ತಿದ್ದ ಶ್ಲಾಘನೀಯ ಮತ್ತು ಅಪರೂಪ ಕಾರ್ಯವೆಂದರು. ನಗರಕ್ಕೆ ಮೊದಲ ಹಂತದ ಕೃಷ್ಣಾ ನದಿ ನೀರು ತಂದ ಕೀರ್ತಿ ಎಂ.ಎಸ್.ಪಾಟೀಲರಿಗೆ ಸಲ್ಲುತ್ತದೆ ಅವರು ಯರಮರಸ್ ನಲ್ಲಿ ಕಾಲೇಜು ಸ್ಥಾಪನೆ ಮಾಡಿದರು ಒಟ್ಟಾರೆ ನಗರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ ಅವರು ರಾಜಕೀಯವಾಗಿ ಯಾರನ್ನು ತುಳಿಯಲಿಲ್ಲ ಎದುರಾಳಿಗಳನ್ನು ಅಷ್ಟೆ ಪ್ರೀತಿಯಿಂದ ಮಾತನಾಡಿಸುವ ಪ್ರವೃತ್ತಿ ಹೊಂದಿದ್ದರು ಅಂತಹ ರಾಜಕಾರಣಿ ಬಗ್ಗೆ ಅಭಿನಂದನಾ ಗ್ರಂಥ ಬಿಡುಗಡೆಯಾಗುತ್ತಿದ್ದು ಸಂತೋಷದ ಸಂಗತಿಯಾಗಿದ್ದು ಕಾರ್ಯಕ್ರಮದಲ್ಲಿ ಎಂ.ಎಸ್.ಪಾಟೀಲರ ಒಡನಾಡಿ ವಿ.ಸೋಮಣ್ಣ ಮತ್ತು ಕೆ.ಆರ್. ರಮೇಶ್ ಕುಮಾರ್ ಸೇರಿದಂತೆ ಅನೇಕ ಮಠಾಧೀಶರು, ಹಾಲಿ, ಮಾಜಿ ಜನಪ್ರತಿನಿಧಿಗಳು, ಗಣ್ಯರು, ಹಿತೈಷಿಗಳು  ಪಾಲ್ಗೊಳ್ಳುತ್ತಿರುವುದು ಕಾರ್ಯಕ್ರಮಕ್ಕೆ ಮೆರುಗು ನೀಡಲಿದೆ ಎಂದರು. 

  ಪತ್ರಿಕಾಗೋಷ್ಠಿಯಲ್ಲಿ ಹರವಿ ನಾಗನಗೌಡ ,ಜಿ.ಶಿವಮೂರ್ತಿ, ಮಹೇಶ್ ಎಂ.ಎಸ್. ಪಾಟೀಲ್, ಕೆ.ಶಾಂತಪ್ಪ, ಶಿವಬಸ್ಸಪ್ಪ ಮಾಲಿಪಾಟೀಲ, ಆರ್.ಕೆ.ಅಮರೇಶ, ಶೇಖರ್ ರೆಡ್ಡಿ, ಜನಾರ್ಧನರೆಡ್ಡಿ ಇನ್ನಿತರರು ಇದ್ದರು.

Comments

Popular posts from this blog