ವಾಲ್ಮೀಕಿ ವಿಶ್ವವಿದ್ಯಾನಿಲಯ ಕುಲಪತಿಗಳಾದ ಶಿವಾನಂದ ಕೆಳಗಿನಮನಿರವರಿಗೆ ಅಭಿನಂದನಾ ಸಮಾರಂಭ.
ಜಯ ಧ್ವಜ ನ್ಯೂಸ್ ,ರಾಯಚೂರು, ಜು 4 -
ಕಲಾಸಂಕುಲ ಸಂಸ್ಥೆ ರಾಯಚೂರು ಹಾಗೂ ಲೋಹಿಯಾ ಪ್ರತಿಷ್ಠಾನ ರಾಯಚೂರು ಇವರ ವತಿಯಿಂದ ಗೌರವಾನ್ವಿತ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ರಾಯಚೂರು ಇವರಿಗೆ ಜು.5 ರಂದು ರವಿವಾರ ಸಂಜೆ 6 ಗಂಟೆಗೆ ರಾಯಚೂರು ರಂಗಮಂದಿರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಮಾರುತಿ ಬಡಿಗೇರ್ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟಕರಾಗಿ ಡಾ ಬಸವಪ್ರಭು ಪಾಟೀಲ್ ಬೆಟ್ಟದೂರು. ಹಿರಿಯ ಸಾಹಿತಿಗಳಾದ ವೀರ ಹನುಮಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷರಾದ ಗಿರಿಜಾ ರಾಜಶೇಖರ್, ಭೀಮನಗೌಡ ಪಾಟೀಲ್ ಇಟಗಿ, ಜೆ ಎಲ್ ಈರಣ್ಣ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಕೃಷ್ಣ ಶಾವಂತಗೇರಾ, ಜಿಲ್ಲಾ ಕಾರಾಗ್ರಹ ಇಲಾಖೆಯ ಜಿಲ್ಲಾ ಆದೀಕ್ಷಕರಾದ ಅನಿತಾ ಹಿರೇಮನಿ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಶ್ರೀದೇವಿ ಆರ್ ವಿ ನಾಯಕ.. ಸಮಾಜ ಸೇವಕಿ ಡಾ. ಫಾತಿಮಾ ಹುಸೇನ್, ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷರಾದ ರೇಖಾ ಬಡಿಗೇರ್ ಭಾಗವಹಿಸಲಿದ್ದಾರೆ.
ಸಾಧಕ ಮೂರು ಜನರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ವಿ ಜಗದೀಶ ರಾಯಚೂರು ಕನಕಶ್ರೀ ಪ್ರಶಸ್ತಿ, ಮಾನ್ವಿಯ ಪತ್ರಕರ್ತರಾದ ಸೈಯದ್ ಅಬ್ದುಲ್ ಗಯಾಸ್ ಮಾಧ್ಯಮ ರತ್ನ ಪ್ರಶಸ್ತಿ ರಾಯಚೂರಿನ ರಾಮುಲು ನಾಯಕ ಇವರಿಗೆ ಶ್ರೀ ವಾಲ್ಮೀಕಿ ಪ್ರಶಸ್ತಿ ಪ್ರಧಾನ ಇರುತ್ತದೆ.
ಬೆಂಗಳೂರಿನ ಜೀ ಕನ್ನಡದ ಸರಿಗಮಪ ಜೂರಿ ಮೆಂಬರ್ ಗಾಯಕರಾದ ಜ್ಯೋತಿ ರವಿಪ್ರಕಾಶ್ ಲಕ್ಷ್ಮಿಮತ್ತು ಶ್ರೀನಾಥ್ ಶ್ರೀನಿವಾಸ್ ಭಾರದ್ವಾಜ ಇವರಿಂದ 1960 ರಿಂದ 1990 ಕನ್ನಡ ಚಲನಚಿತ್ರರಂಗದ ದಿಗ್ಗಜರಾದ ಪುಟ್ಟಣ್ಣ ಕಣಗಾಲ್ ಮತ್ತು ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರ ಗೀತೆಗಳನ್ನು ಹಾಡಲಿದ್ದಾರೆ ಎಂದು ಮಾರುತಿ ಬಡಿಗೇರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments
Post a Comment