ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಅಭಿವೃದ್ಧಿ ಆಗಲಿ ಪ್ರೊ. ಶಿವಾನಂದ ಕೆಳಗಿನಮನಿ.
ಜಯಧ್ವಜ ನ್ಯೂಸ್ , ರಾಯಚೂರು ಜು.6-
ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟವನ್ನು ಉನ್ನತಿಕರಿಸಲು ನಮ್ಮ ವಿಶ್ವವಿದ್ಯಾಲಯ ನಿರಂತರವಾಗಿ ಪರಿಶ್ರಮಿಸುತ್ತದೆ ಅದರೊಂದಿಗೆ ಈ ಭಾಗದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಭಾಗದ ಜನಪ್ರತಿನಿಧಿಗಳು, ಸಾಹಿತಿಗಳು ಹಾಗೂ ತಮ್ಮೆಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ನಮ್ಮ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾನಿಲಯ ಪ್ರಯತ್ನಿಸುತ್ತದೆ ಎಂದು ಹೇಳಲು ಖುಷಿಯಾಗುತ್ತದೆ ಅದರೊಂದಿಗೆ ಈ ಎರಡು ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಅಂದರೆ ಅದರಲ್ಲಿ ಮುಖ್ಯವಾಗಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿರುವುದನ್ನು ಕಂಡುಕೊಂಡಿದ್ದೇನೆ ಈ ಭಾಗದ ಅನೇಕ ಸಮಸ್ಯೆಗಳಿಗೆ ಸಂಶೋಧನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಅದನ್ನು ಮುಂದಿನ ದಿನಗಳಲ್ಲಿ ನಮ್ಮ ವಿಶ್ವವಿದ್ಯಾಲಯ ಎಲ್ಲಾ ಪ್ರಯತ್ನ ಮಾಡುತ್ತದೆ. ಆದರೆ ಇದರೊಂದಿಗೆ ತಮ್ಮೆಲ್ಲರ ಸಹಕಾರವಿದ್ದರೆ ಈ ವಿಶ್ವವಿದ್ಯಾಲಯವನ್ನು ರಾಜ್ಯಮಟ್ಟದ ಮಾದರಿ ವಿಶ್ವವಿದ್ಯಾನಿಲಯ ಮಾಡುವುದರಲ್ಲಿ ತಮ್ಮೆಲ್ಲರ ಸಹಕಾರ ನನಗೆ ಬೇಕಾಗುತ್ತದೆ. ಈಗ ತಾವೆಲ್ಲರೂ ನನ್ನ ಒಂದು ವರ್ಷದ ಕಾರ್ಯವಿಧಾನವನ್ನು ಪರಿಗಣಿಸಿ ಅಭಿನಂದಿಸುತ್ತಿರುವುದಕ್ಕೆ ತಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ ಎಂದು ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ ಶಿವಾನಂದ ಕೆಳಗಿನಮನಿ ಅವರು ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು . ಕಲಾ ಸಂಕುಲ ಸಂಸ್ಥೆ (ರಿ). ಹಾಗೂ ಲೋಹಿಯಾ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಗೌರವಾನ್ವಿತ ಕುಲಪತಿಗಳಿಗೆ ಅಭಿನಂದನಾ ಸಮಾರಂಭವನ್ನು ರವಿವಾರ ಸಂಜೆ ರಾಯಚೂರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಸಮಾರಂಭವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ವೀರಹನುಮಾನ ವಹಿಸಿದ್ದರು.
ಲೋಹಿಯಾ ಪ್ರತಿಷ್ಠಾನದ ಜೆ.ಎಲ್ ಈರಣ್ಣ ಮತ್ತು ಭೀಮನಗೌಡ ಪಾಟೀಲ್ ಇಟಗಿ, ಜ್ಯೋತಿ ದಮ್ಮ ಪ್ರಕಾಶ್ ಕುಲ ಸಚಿವರು ಮೌಲ್ಯಮಾಪನ ವಿಭಾಗ ಉಪಕುಲ ಸಚಿವರಾದ ಪಲ್ಲವ .ಕೆ. ವೆಂಕಟೇಶ ಜಿಲ್ಲಾ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ ಶಾವಂತಗೇರ ಮತ್ತು ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷರಾದ ರೇಖಾ ಬಡೆಗೇರ್ ಹಾಗೂ ಸಮಾಜಸೇವಕರಾದ ಡಿ ಶ್ರೀನಿವಾಸ್, ಹೋರಾಟಗಾರರಾದ ಬಸವರಾಜ ಕಳಸ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ. ಶಿವಲೀಲಾ ಬಸವರಾಜ್ ಮಾಡಿದರು ಸ್ವಾಗತವನ್ನು ಪತ್ರಕರ್ತ ಮಾರುತಿ ಬಡಿಗೇರ್ ನೆರವೇರಿಸಿದರು.
ಬೆಂಗಳೂರಿನ ಜೀ ಕನ್ನಡದ ಸರಿಗಮಪ ಜೂರಿ ಮೆಂಬರ್ಸ್ ಅದ್ಭುತವಾದ ಕನ್ನಡ ಹಳೆಯ ಗೀತೆಗಳು ಗಾಯನವನ್ನು ಮಾಡಿದರು. ಈ ಸಂದರ್ಭದಲ್ಲಿ ಕನಕಶ್ರೀ ಪ್ರಶಸ್ತಿಯನ್ನು ಬಿ.ಜಗದೀಶ್ ಅವರಿಗೆ ಮತ್ತು ಮಾಧ್ಯಮ ರತ್ನ ಪ್ರಶಸ್ತಿ ಸಯ್ಯದ್ ಅಬ್ದುಲ್ ಗಯಾಸ್ ಮಾನ್ವಿ ಹಾಗೂ ವಾಲ್ಮೀಕಿ ಶ್ರೀ ಪ್ರಶಸ್ತಿ ರಾಮುಲು ನಾಯಕ ಅವರಿಗೆ ಪ್ರಧಾನ ಮಾಡಲಾಯಿತು.ಕಾರ್ಯಕ್ರಮ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

Comments
Post a Comment